ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್‌ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು!

ಭಾರತದಲ್ಲಿ ಆರೆಸ್ಸೆಸ್‌ ಮತ್ತು ಬಿಜೆಪಿ ಇರುವವರೆಗೂ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ ಎಂದು ತಾಲಿಬಾನ್ ನಾಯಕ ಹೇಳಿದ್ದಾನೆಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ಇರುವ ವ್ಯಕ್ತಿಯು ಗಡ್ಡದಾರಿಯಾಗಿದ್ದು, ಟೋಪಿ ಧರಿಸಿದ್ದಾರೆ. ಅವರ ವೇಷ ಭೂಷಣ ನೋಡಿದರೆ ಅವರು ಮುಸ್ಲಿಂ ವ್ಯಕ್ತಿ ಎಂದು ಹೇಳಬಹುದಾಗಿದೆ.

ಪ್ರಸ್ತುತ ವಿಡಿಯೊವನ್ನು ವಾಟ್ಸಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಜೊತೆಗೆ ಈ ವಿಡಿಯೊ ವೈರಲ್ ಮಾಡುತ್ತಿರುವವರಲ್ಲಿ ಹೆಚ್ಚಿನರು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಮತ್ತು ಬೆಂಬಲಿಗರಾಗಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಅಮೆರಿಕದ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದರು ಎಂಬುದು ಸುಳ್ಳು. ಆರೆಸ್ಸೆಸ್‌ ತಾಲಿಬಾನ್

Karnataka BJP Supporters ಎಂಬ ಫೇಸ್‌ಬುಕ್‌ ಖಾತೆಯು,”ಭಾರತದಲ್ಲಿ ಬಿಜೆಪಿ ಇರುವವರೆಗೂ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ಆರೆಸ್ಸೆಸ್‌ ಮತ್ತು ಬಿಜೆಪಿ ಅತ್ಯಂತ ಶಕ್ತಿಶಾಲಿ. ಮೊದಲು ಬಿಜೆಪಿಯನ್ನು ತೊಡೆದುಹಾಕಿ ನಂತರ ಮಾತ್ರ ಭಾರತದ ಮೇಲೆ ಜಯ ಸಿಗುತ್ತದೆ… ಭಯೋತ್ಪಾದಕ ಸಂಘಟನೆ ತಾಲಿಬಾನ್‌ನ ಮುಖ್ಯ ಕಾರ್ಯದರ್ಶಿ ಅಲ್ ಬೇಡರ್ ಇಲ್ಯಾಸಿ ಹೇಳಿಕೆ” ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೊವನ್ನು ಪೋಸ್ಟ್‌ ಮಾಡಿದೆ.

ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್‌ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು! FactCheck | 'Taliban secretary praising RSS and BJP' is a lie!

ಈ ವಿಡಿಯೊವನ್ನು ಇದೇ ಪ್ರತಿಪಾದನೆಯೊಂದಿಗೆ ಹಲವಾರು ಜನರು ಬೇರೆ ಬೇರೆ ಭಾಷೆಯಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದಾಗಿದೆ. ಮುಖ್ಯವಾಗಿ ಬಲಪಂಥೀಯ ಖಾತೆಗಳು ಇದನ್ನು ಹರಡುತ್ತಿವೆ.

ಈ ವಿಡಿಯೊವನ್ನು ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್‌ ವಾಟ್ಸಪ್‌ ಗ್ರೂಪ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪಾಕಿಸ್ತಾನ ಧ್ವಜ ವಿವಾದ; ಸುಳ್ಳು ಸುದ್ದಿ ಹರಡಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌!

ಫ್ಯಾಕ್ಟ್‌ಚೆಕ್:

ಈ ಬಗ್ಗೆ ನಾವು ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ ವೈರಲ್ ವಿಡಿಯೊದಲ್ಲಿನ ವ್ಯಕ್ತಿ ಪಾಕಿಸ್ತಾನದ ಇಸ್ಲಾಮಾಬಾದ್‌ನ ಖಾಲಿದ್ ಮೆಹಮೂದ್ ಅಬ್ಬಾಸಿ ಎಂಬ ಮುಸ್ಲಿಂ ಧಾರ್ಮಿಕ ವಿದ್ವಾಂಸ ಎಂದು ತಿಳಿದು ಬಂದಿದೆ. ಅವರು ತಾಲಿಬಾನ್‌ನ ಜೊತೆಗೆ ಸಂಬಂಧ ಹೊಂದಿಲ್ಲ. ಆರೆಸ್ಸೆಸ್‌

ಅವರ ಬಗ್ಗೆ ಮತ್ತಷ್ಟು ಹುಡುಕಾಡಿದಾಗ Khalid Mehmood Abbasi Official ಎಂಬ ಯೂಟ್ಯೂಬ್ ಚಾನೆಲ್‌ ಅವರ ಹೆಸರಿನಲ್ಲಿ ಇರುವುದು ನಾವು ನೋಡಿದ್ದೇವೆ. ಈ ಚಾನೆಲ್‌ನಲ್ಲಿ ಬಿಜೆಪಿ ಬೆಂಬಲಿಗರು ವೈರಲ್ ಮಾಡಿರುವ ಕ್ಲಿಪ್‌ ಇರುವ ವಿಡಿಯೊ ಕೂಡಾ ನಮಗೆ ಸಿಕ್ಕಿದೆ. ಈ ವಿಡಿಯೊದ 0.53 ಟೈಮ್‌ಸ್ಟ್ಯಾಂಪ್‌ನ ಕ್ಲಿಪ್ ಅನ್ನು ಕಟ್‌ ಮಾಡಿ ವೈರಲ್ ಮಾಡಲಾಗಿದೆ.

ಈ ವೀಡಿಯೊವನ್ನು 03 ಆಗಸ್ಟ್ 2021 ರಂದು ಅಪ್‌ಲೋಡ್ ಮಾಡಲಾಗಿದ್ದು, ಆದರೆ ವೀಡಿಯೊವನ್ನು 01 ಮಾರ್ಚ್ 2019 ರಂದು ರೆಕಾರ್ಡ್ ಮಾಡಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ವೀಡಿಯೊದ ಶೀರ್ಷಿಕೆಯು ಮಾತನಾಡುತ್ತಿರುವವರು ಖಾಲಿದ್ ಮೆಹಮೂದ್ ಅಬ್ಬಾಸಿ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದೂಗಳಿಂದ ಚಪ್ಪಲಿ ಕ್ಲೀನ್ ಮಾಡಿಸುತ್ತೇನೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆನ್ನುವುದಕ್ಕೆ ಆಧಾರಗಳಿಲ್ಲ!

ಅವರ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ, ಅವರು ಇಸ್ಲಾಮಿಕ್ ವಿದ್ವಾಂಸ ಎಂದು ಹೇಳಿಕೊಂಡಿದ್ದು, ತಂಝೀಮ್-ಎ-ಇಸ್ಲಾಮಿ ಎಂಬ ಸಂಘಟನೆಯೊಂದಿಗೆ 30 ವರ್ಷಗಳ ಕಾಲ ಕೆಲಸ ಮಾಡಿದ ಅವರು 2018 ರಲ್ಲಿ ತಂಝೀಮ್-ಎ-ಇಸ್ಲಾಮಿ ತೊರೆದು ಶುಬ್ಬನ್-ಉಲ್-ಮುಸ್ಲಿಮೀನ್ ಅನ್ನು ಸ್ಥಾಪಿಸಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಉಲ್ಲೇಖವಿದೆ.

ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್‌ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು! FactCheck | 'Taliban secretary praising RSS and BJP' is a lie!

ದಿ ಕ್ವಿಂಟ್ ಮಾಧ್ಯಮದ ಜೊತೆಗೆ ಮಾತನಾಡಿದ ಅಬ್ಬಾಸಿ ಅವರು, ತಾಲಿಬಾನ್‌ ಜೊತೆಗೆ ತನಗೆ ಯಾವುದೆ ಸಂಬಂಧವಿಲ್ಲ ಎಂದು ಹೇಳಿದ್ದು, ವೈರಲ್ ಆಗಿರುವ ವಿಡಿಯೊ ಹಳೆಯದು ಎಂದು ಹೇಳಿದ್ದಾರೆ. ಅಲ್ಲದೆ, ಖಾಲಿದ್ ಅಬ್ಬಾಸಿ ಅವರು “ಶುಬ್ಬನ್ ಉಲ್ ಮುಸ್ಲಿಮೀನ್” ಹೆಸರಿನ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಯಾದರೂ, ಅದು ರಾಜಕೀಯ ಪಕ್ಷವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರೆಸ್ಸೆಸ್‌

“ನಾನು ತಾಲಿಬಾನ್‌ನ ಮುಖ್ಯ ಕಾರ್ಯದರ್ಶಿ ಎಂಬುವುದು ಸಂಪೂರ್ಣ ಸುಳ್ಳು ಹೇಳಿಕೆಯಾಗಿದೆ. ತಾಲಿಬಾನ್ ಈಗ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿದೆ, ಆದರೆ ವೈರಲ್ ಕ್ಲಿಪ್‌ನ ಭಾಗವು ಸುಮಾರು 1.5 ವರ್ಷಗಳ ಹಿಂದಿನ ವೀಡಿಯೊವಾಗಿದೆ. ತಾಲಿಬಾನ್ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ” ಎಂದು ಖಾಲಿದ್ ಮೆಹಮೂದ್ ಅಬ್ಬಾಸಿ ಹೇಳಿದ್ದಾಗಿ ದಿ ಕ್ವಿಂಟ್ ವರದಿ ಹೇಳಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ವಿಪಕ್ಷಗಳ ನಾಯಕರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹರಡುತ್ತಿರುವ ಬಿಜೆಪಿ ಬೆಂಬಲಿಗರು

ಒಟ್ಟಿನಲ್ಲಿ ಹೇಳಬಹುದಾದರೆ, ಈ ವೀಡಿಯೊ 01 ಮಾರ್ಚ್ 2019 ರಂದು ರೆಕಾರ್ಡ್ ಮಾಡಲಾದ ಕ್ಲಿಪ್‌ನ ಸಣ್ಣ ಭಾಗವಾಗಿದೆ. ಇದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಖಾಲಿದ್ ಮೆಹಮೂದ್ ಅಬ್ಬಾಸಿ. ಖಾಲಿದ್ ಅವರು ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದ ಮುಸ್ಲಿಂ ಧಾರ್ಮಿಕ ಬೋಧಕರಾಗಿದ್ದಾರೆ. ಅವರು ಶುಬ್ಬನ್-ಉಲ್-ಮುಸ್ಲಿಮೀನ್ ಎಂಬ ಸಂಘಟನೆ 2018ರಲ್ಲಿ ಸ್ಥಾಪಿಸಿ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನಗೂ ತಾಲಿಬಾನ್ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಇಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಆದ್ದರಿಂದ ಅವರ ವಿಡಿಯೊವನ್ನು ತಾಲಿಬಾನ್‌ನ ಮುಖ್ಯ ಕಾರ್ಯದರ್ಶಿ ಎಂಬಂತೆ ತಪ್ಪಾಗಿ ವೈರಲ್ ಮಾಡಲಾಗುತ್ತಿದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ‌ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *