ತುಮಕೂರು: ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪ ಡೋನ್ ಪ್ರತಾಪ್ ವಿರುದ್ದ ಕೇಳಿಬಂದಿದೆ.
ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ರಿಯಾಲಿಟಿ ಷೋನ 10ನೇ ಆವೃತ್ತಿಯ ಸ್ಪರ್ಧಿ ಡೋನ್ ಪ್ರತಾಪ್ ಅವರನ್ನು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣದಲ್ಲಿ ಜಾಮೀನು; ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬಾಲಕಿಯನ್ನು ಕೊಂದ ಆರೋಪಿ
ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದ ನೀರಿನಲ್ಲಿ ಸೋಡಿಯಂ ಬಳಸಿ ಸ್ಫೋಟ ನಡೆಸಿದ್ದರು.
ನೀರಿಗೆ ಸೋಡಿಯಂ ಬೆರೆತಾಗ ಹೇಗೆ ಸ್ಫೋಟಗೊಳ್ಳುತ್ತದೆ ಎನ್ನುವ ಪುಯೋಗ ಮಾಡಿದ್ದರು. ನೀರಿಗೆ ಸೋಡಿಯಂ ಮೆಟಲ್ ಎಸೆದಾಗ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತ್ತು. ಡೋನ್ ಪ್ರತಾಪ್ ಈ
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 288 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿ ಡೋನ್ ಪ್ರತಾಪ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ನೋಡಿ : ಹಾಡು | ‘ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media