ಕೊಪ್ಪಳ ಹಣ್ಣುಗಳ ‌ಮೇಳದಲ್ಲಿ ಗಮನ ಸೆಳೆದ ದುಬಾರಿ ದ್ರಾಕ್ಷಿ – ಕೆ.ಜಿಗೆ 8 ಲಕ್ಷ!

ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ 5 ದಿನ ನಡೆಯಲಿರುವ ವಿವಿಧ ಹಣ್ಣು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. ಫೆ.27ರ ವರೆಗೆ ಮೇಳೆ ನಡೆಯಲಿದ್ದು, ಮೇಳದಲ್ಲಿ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ ಜನರ ಗಮನ ಸೆಳೆಯಿತು

ಗ್ರಾಹಕರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ಹಣ್ಣು ದೊರೆಯಬೇಕು ಹಾಗೂ ರೈತರಿಗೆ ಮಾರುಕಟ್ಟೆ ಒದಗಿಸಬೇಕು ಎಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಶಿವರಾತ್ರಿ ಹಿನ್ನೆಲೆ ಆಯೋಜಿಸಿರುವ ಮೇಳದಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲೆ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು ಲಭ್ಯ‌ ಇದೆ.

ಇದನ್ನೂ ಓದಿ: ಹಾವೇರಿ| ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಲು ಹೋರಾಟ ಸಮಿತಿ ಆಗ್ರಹ

ರೈತರಿಂದ ಮಾರಾಟ: ಮೇಳದಲ್ಲಿ ಜಿಲ್ಲಾದ್ಯಂತ ಸುಮಾರು 30ಕ್ಕೂ ಹೆಚ್ಚು ತೋಟಗಾರಿಕೆ ರೈತರು, 15ಕ್ಕೂ ಹೆಚ್ಚು ಎಫ್ ಪಿಒ, ಹಾಪ್​ಕಾಮ್ಸ್​ ಸ್ಟಾಲ್​ ಹಾಕಿ, ಹಣ್ಣು ‌ಹಾಗೂ ಹಣ್ಣಿನ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ.

ಕೆಜಿಗೆ 8 ಲಕ್ಷ ರೂ. ದ್ರಾಕ್ಷಿ ಪ್ರದರ್ಶನ
ಮೇಳದಲ್ಲಿ ದೇಶಿ ಹಣ್ಣುಗಳ ಮಾರಾಟದ ಜೊತೆಗೆ ‌ವಿದೇಶಿ ಹಣ್ಣುಗಳ ಪ್ರದರ್ಶನ ಗ್ರಾಹಕರನ್ನು ಸೆಳೆಯಿತು. ಈ ಬಾರಿ ಮೇಳದಲ್ಲಿ ಒಂದು ಕೆಜಿಗೆ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಅವಕಾಡೋಫ್ಲಮ್​, ಪೀಚ್​, ಲಿಚ್ಚಿ, ರೆಡ್​ಗ್ಲೋಬ್, ಕಿವಿ ಫ್ರೂಟ್​, ರಾಮಭೂತಾನ, ಮ್ಯಾಂಗೋಸ್ಟೀನ್​, ಜಪಾನ್ ಮ್ಯಾಂಗೋ, ಐಸ್​ಗಾವಾ, ಅಮೇರಿಕನ್​ ಆಪಲ್​, ಗ್ರೀನ್​ ಆಪಲ್​, ವಿದೇಶಿ ಪ್ಯಾಷನ್​ ಪ್ರೂಟ್​, ವೈನ್​ಗ್ರೇಪ್​ ಹಣ್ಣು ಪ್ರದರ್ಶನಕ್ಕೆ ಇಡಲಾಗಿದೆ.

ಇದನ್ನೂ ಓದಿ: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

 

Donate Janashakthi Media

Leave a Reply

Your email address will not be published. Required fields are marked *