ಮತಗಟ್ಟೆ ಸಮೀಕ್ಷೆ : ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆ, ಹಿಮಾಚಲ ಪ್ರದೇಶ ಅತಂತ್ರ

ನವದೆಹಲಿ :ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಈ ಎರಡು ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.

68 ಸ್ಥಾನಗಳನ್ನು ಹೊಂದಿರುವ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್‌ 12ರಂದು ಒಂದೇ ಹಂತದಲ್ಲಿ ಮತ್ತು 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ (ಡಿಸೆಂಬರ್‌ 1 ಹಾಗೂ 5ರಂದು) ಮತದಾನ ನಡೆದಿತ್ತು. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಗುಜರಾತ್‌ನಲ್ಲಿ ಬಿಜೆಪಿ ಏಳನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಹಿಮಾಚಲ ಪ್ರದೇಶದಲ್ಲಿಯೂ ಬಿಜೆಪಿ ಮೈಲುಗೈ ಸಾಧಿಸಲಿದೆ. ಆದರೆ, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದಿವೆ. ಎರಡೂ ಕಡೆ ಕಾಂಗ್ರೆಸ್‌ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮತಗಟ್ಟೆ ಸಮೀಕ್ಷೆಯಿಂದ ತಿಳಿದು ಬಂದಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ

ರಿಪಬ್ಲಿಕ್: BJP 128-148 , Cong 30-42, AAP 2-10, Others 0-3

ಟೈಮ್ಸ್ ನೌ: BJP 139, Cong 30, AAP 11, Others 2
ಜನ್ ಕಿ ಬಾತ್: BJP – 115 – 140, Congress – 34-51, AAP – 6-13, Others 01-02

ಪಿ-ಮಾರ್ಕ್ : BJP-128-148, Congress-30-42, AAP -02-10, Others-00

ನ್ಯೂಸ್ ಎಕ್ಸ್ : BJP-125-130, Congress-40-50, AAP-03-05, Others-03-07

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ

ರಿಪಬ್ಲಿಕ್ ಟಿವಿ: BJP – 34-39, Congress – 28-33, AAP – 0-1, CPIM 01, Others 0-3

ಟೈಮ್ಸ್ ನೌ: BJP – 38, Congress – 28, AAP – 0, Others 00

ಜನ್ ಕಿ ಬಾತ್: BJP-32-40, Congress-27-34, AAP-00, CPIM- 01 Others 01

ಪಿ-ಮಾರ್ಕ್ : BJP-34-39, Congress-28-33, AAP-00-01, CPIM -01, Others 00-03

ನ್ಯೂಸ್ ಎಕ್ಸ್ : BJP-32-40, Congress-27-34, AAP-00-00, CPIM 01, Others 00-01

ಇಂಡಿಯಾ ಟಿವಿ, ಜೀ ನ್ಯೂಸ್‌, ಪೋಲ್‌ ಆಫ್‌ ಪೋಲ್ಸ್‌, ಸಿಎನ್‌ಎನ್‌, ನ್ಯೂಸ್‌ ಎಕ್ಸ್‌, ಇಟಿಜಿ ಸೇರಿ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಯೇ ಜಯಭೇರಿಯಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಗೆಲುವಿನ ಆಸೆ ಕಾಣುತ್ತಿದ್ದ ಕಾಂಗ್ರೆಸ್‌ ಹಾಗೂ ಆಪ್‌ಗೆ ಸಮೀಕ್ಷೆಯ ವರದಿಗಳಿಂದ ಹಿನ್ನಡೆಯಾದಂತಿದೆ. ಆದಾಗ್ಯೂ, ನಿಖರ ಚಿತ್ರಣಕ್ಕಾಗಿ ಡಿಸೆಂಬರ್‌ 08 ರಂದು ಪ್ರಕಟವಾಗುವ ಫಲಿತಾಂಶದವರೆಗೆ ಕಾಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *