ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇಂದು(ಜನವರಿ 05) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಅವರ ಕುಟುಂಬ ಸದಸ್ಯರು ಈ ಹಿಂದೆ 2022ರ ಜೂನ್ 10ರಂದು ಪರ್ವೇಜ್ ಮುಷರಫ್ ಬದುಕುಳಿಯುವುದು ಬಹುತೇಕ ಕಷ್ಟವೆಂದು ಹೇಳಿದ್ದರು. ಅಲ್ಲದೆ, ಮುಷರಫ್ ಅವರ ಆರೋಗ್ಯ ಚೇತರಿಕೆ ಕಾಣುವುದು ಸಾಧ್ಯವಾಗುತ್ತಿಲ್ಲ. ಅವರ ಅಂಗಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದರು.

ಇದನ್ನು ಓದಿ: ಪಾಕಿಸ್ತಾನದ ಭೀಕರ ನೆರೆಗೆ ನೆರವು ನೇಣಾಗುವುದೇ?

78 ವರ್ಷದ ಮುಷರಫ್ ಅವರು ಅಮಿಲೋಡೋಸಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. 2016ರಿಂದ ದುಬೈನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.  ಮುಷರಫ್ ಆಗಸ್ಟ್ 11, 1943 ರಂದು ದೆಹಲಿಯಲ್ಲಿ ಜನಿಸಿದ್ದರು. ದೇಶ ಇಬ್ಭಾಗದ ಬಳಿಕ ಕುಟುಂಬಸ್ಥರು ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಮುಷರಫ್‌ ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್ ಮುಷರಫ್ 2001ರಿಂದ 2008ರವರೆ ಪಾಕಿಸ್ತಾನ ದೇಶದ ಅಧ್ಯಕ್ಷರಾಗಿದ್ದರು. 1999ರಲ್ಲಿ ಭಾರತದ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನದ ಸೇನಾಪಡೆ ಆಕ್ರಮಣ ಸಂದರ್ಭದಲ್ಲಿ ಮುಷರಫ್‌ ಸೇನಾ ನಾಯಕರಾಗಿದ್ದರು. ಬಳಿಕ ಅವರು ಅಂದಿನ ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ಪತನಗೊಳಿಸಿ ಪಾಕಿಸ್ತಾನದ ಆಡಳಿತ ಹಿಡಿದರು.

ಇದನ್ನು ಓದಿ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: 1000ಕ್ಕೂ ಹೆಚ್ಚು ಸಾವು-ನಿರಾಶ್ರಿತಗೊಂಡ ಲಕ್ಷಾಂತರ ಮಂದಿ

ಗಂಭೀರ ಆರೋಪಗಳು

ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಹತ್ಯೆ ಮತ್ತು ರೆಡ್​​ ಮಸೀದಿಯ ಧರ್ಮಗುರುಗಳ ಹತ್ಯೆ ಪ್ರಕರಣದಲ್ಲಿ ಸಿಲುಕಿದ ಮುಷರಫ್​ ದೇಶ ತ್ಯಜಿಸುವಂತೆ ಮಾಡಿತು. 2016 ರಿಂದಲೂ ಅವರು ದುಬೈನಲ್ಲಿ ವಾಸಿವಾಗಿದ್ದರು. 2007ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದರು. ಮಾರ್ಚ್ 2016ರಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ದುಬೈಗೆ ತೆರಳಿದ ನಂತರ ಅವರು ಅಲ್ಲಿಂದ ವಾಪಸ್ಸು ಬರಲಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *