ಅಧಿಕ ಬಿಸಿಲಿಗೆ ಕಿಡ್ನಿಸ್ಟೋನ್ ಪ್ರಕರಣ ಹೆಚ್ಚಳ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ವಾತಾವರಣ ಹೆಚ್ಚಾಗುತ್ತಿದ್ದೂ, ಬಿಸಿಲಿನ ಧಗೆಯಿಂದಾಗಿ ಕಿಡ್ನಿಸ್ಟೋನ್ (kidney stone) ಪ್ರಕರಣಗಳು ಶೇ. 45ರಿಂದ 50 ಹೆಚ್ಚಳವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಉಂಟಾಗಲು ಪ್ರಮುಖ ಕಾರಣವೆಂದರೆ ದೇಹದಲ್ಲಿನ ನಿರ್ಜಲೀಕರಣ. ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 3 ರಿಂದ 4 ಲೀ. ನೀರಿನ ಅಗತ್ಯ ಬಹಳ ಇದೆ.

ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಯುವಕನ ಮನೆಗೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, ಪೋಷಕರಿಗೆ ಸಾಂತ್ವನ

ಇನ್ನು ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವ ಜೊತೆಗೆ ದೇಹದಲ್ಲಿರುವ ನೀರಿನ ಅಂಶವನ್ನು ಕಸಿದುಕೊಳ್ಳುವುದರಿಂದ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತಿದೆ. ಮೂತ್ರದಿಂದ ಫಿಲ್ಟರ್ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್ ರೂಪುಗೊಳ್ಳುತ್ತವೆ.

ವಿಶೇಷವಾಗಿ ಮಹಿಳೆಯರಲ್ಲಿ ಉರಿ ಮೂತ್ರದ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಆದರೆ ಪುರುಷರಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮೂತ್ರ ವಿಸರ್ಜನೆಯನ್ನು ತಡೆಯಬಾರದು. ದಿನಕ್ಕೆ 2ರಿಂದ 3 ಲೀ.ನಷ್ಟು ನೀರು ಅಗತ್ಯವಾಗಿ ಕುಡಿಯಬೇಕು ಮತ್ತು ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ.೫೦ರಷ್ಟು ಕಿಡ್ನಿ ಸ್ಫೋಟ ಪ್ರಕರಣಗಳು ಕಂಡುಬರುವುದು ಜನರ ಆತಂಕಕ್ಕೆ ದಾರಿಮಾಡಿಕೊಟ್ಟಿದೆ.

ಇದನ್ನೂ ನೋಡಿ: ಬಿಜೆಪಿಗೆ 400 ಪ್ಲಸ್ ಅಂದರೆ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ಅಂತ್ಯ, ‘ಇಲ್ಲಿದೆ ವಿವರಗಳು’ Janashakthi Media

Donate Janashakthi Media

Leave a Reply

Your email address will not be published. Required fields are marked *