ಇಂಫಾಲ: ಮಣಿಪುರದ ಪಶ್ಚಿಮ ಇಂಫಾಲ್ ನ ತಂಗ್ಮೈಬಂದ್ ಪ್ರದೇಶದಲ್ಲಿನ ಜೆಡಿಯು ಶಾಸಕ ಜೋಯ್ ಕಿಶನ್ ಸಿಂಗ್ ನಿವಾಸವನ್ನು ಗುಂಪೊಂದು ಧ್ವಂಸಗೊಳಿಸಿ 18 ಲಕ್ಷ ರೂಪಾಯಿ ನಗದು ಮತ್ತು 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದೆ. ಜೆಡಿಯು
ಅಂತರಿಕವಾಗಿ ಸ್ಮಳಾಂತರಗೊಂಡ ಜನರಿಗಾಗಿ ಶಾಸಕರ ನಿವಾಸದಲ್ಲಿ ಇರಿಸಲಾಗಿದ್ದ ಹಲವಾರು ವಸ್ತುಗಳನ್ನು ದಾಳಿಯ ಸಮಯದಲ್ಲಿ ನಾಶಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಡಿಯು
ಗುಂಪು ದಾಳಿಯ ಸಂದರ್ಭದಲ್ಲಿ 18 ಲಕ್ಷ ರೂಪಾಯಿ ನಗದು ಮತ್ತು 1.5 ಕೋಟಿ ಮೌಲ್ಯದ ಹಲವಾರು ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ನಾಶಪಡಿಸಲಾಗಿದೆ ಎಂದು ತಂಗೈಬಂದ್ ಕ್ಷೇತ್ರದ ಶಾಸಕ ಕೆ ಜೋಯ್ ಕಿಶನ್ ಸಿಂಗ್ ಅವರ ತಾಯಿ ಇಂತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನ ಕಾಲದ ಖರೀದಿ ಹಗರಣ: ‘ಬೆಂದ ಮನೆಯಲ್ಲಿ ಗಳ ಇರಿ’ದಿರುವ ಬಿಜೆಪಿ ನಾಯಕ ಗಣ
ನವೆಂಬರ್ 16 ರಂದು ಸಂಜೆ ಸುಮಾರು ಎರಡು ಗಂಟೆಗಳ ಕಾಲ ಗುಂಪು ಶಾಸಕರ ನಿವಾಸವನ್ನು ಧ್ವಂಸ ಮಾಡಿದೆ ಎಂದು ಅವರು ಹೇಳಿದರು. ಕಳೆದ ವಾರ ಜನಸಮೂಹವು ಅವರ ನಿವಾಸದ ಮೇಲೆ ದಾಳಿ ಮಾಡಿದಾಗ ಅವರ ಕುಟುಂಬದ ಸದಸ್ಯರೊಬ್ಬರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಶಾಸಕರು ದೆಹಲಿಯಲ್ಲಿದ್ದರು.
ಶಾಸಕರ ನಿವಾಸದಿಂದ ಕೆಲವು ಮೀಟರ್ ದೂರದಲ್ಲಿರುವ ತಂಗೈ ಬಾಂಡ್ನ ತೊಂಬಿಸಾವಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರದಲ್ಲಿ ನೆಲೆಸಿರುವ ಅಂತರಿಕವಾಗಿ ಸ್ಮಾಂತರಗೊಂಡ ವ್ಯಕ್ತಿಯೊಬ್ಬರು, ಆಲೂಗಡ್ಡೆ ಮತ್ತು ಈರುಳ್ಳಿಯಂತಹ ತರಕಾರಿಗಳು ಮತ್ತು ಚಳಿಗಾಲದ ಬಟ್ಟೆಗಳಂತಹ ಇತರ ವಸ್ತುಗಳನ್ನು ಜನರಿಗೆ ಇಡಲಾಗಿತ್ತು.
ಸ್ಥಳಾಂತರಗೊಂಡ ಜನರಿಗೆ ವಿತರಿಸಲು ಉದ್ದೇಶಿಸಲಾದ ಹಲವಾರು ವಸ್ತುಗಳನ್ನು ಅಲ್ಲಿ ಇರಿಸಲಾಗಿರುವುದರಿಂದ ನಾವು ಶಾಸಕರ ನಿವಾಸವನ್ನು ಧ್ವಂಸಗೊಳಿಸದಂತೆ ನಾವು ಗುಂಪನ್ನು ಒತ್ತಾಯಿಸಿದ್ದೇವೆ ಎಂದು ಜೋಯಿಶನ್ ಅವರ ಮೇಲ್ವಿಚಾರಣೆಯಲ್ಲಿ ಪರಿಹಾರ ಶಿಬಿರವನ್ನು ನಿರ್ವಹಿಸುವ ಸ್ವಯಂಸೇವಕ ಸನಾಯಿ ಹೇಳಿದರು.
ಲಾಕರ್ಗಳು ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ ಜನಸಮೂಹವು ಮೂರು ಹವಾನಿಯಂತ್ರಣಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿತು ಆದರೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ‘ಆರ್.ಬಿ. ಮೋರೆ | ದಲಿತರಿಗೂ ಕಮ್ಯುನಿಸ್ಟರಿಗೂ ಹಿಡಿದ ಕನ್ನಡಿ – ಬಂಜಗೆರೆ ಜಯಪ್ರಕಾಶ್ Janashakthi Media