ಕಲಬುರಗಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ಇದ್ದಾಗ ಅಲ್ಲಿನ ಖೈದಿಗಳು ರಾಜಾರೋಷವಾಗಿ ಬಿಂದಾಸ್ ಲೈಫ್ ಅನುಭವಿಸುತ್ತಿದ್ದಾರೆ ಅನ್ನೋದು ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಇದೇ ಕಾರಣಕ್ಕೆ ನಟ ದರ್ಶನ್ ಸೇರಿ ಕೆಲ ಖೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಕಾರಾಗೃಹ
ಖೈದಿಗಳು ಕಲಬುರಗಿಯ ಕಾರಾಗೃಹದಲ್ಲೂ ಕೂಡ ಖೈದಿಗಳು ರಾಜಾರೋಷವಾದ ಜೀವನವನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಫೋಟೋ ವಿಡಿಯೋಗಳೂ ವೈರಲ್ ಅಗಿದ್ದು, ಈ ಕಲಬುರಗಿ ಕಾರಾಗೃಹದಲ್ಲಿ ಹಣ ಕೊಟ್ಟರೆ ಸ್ಮಾಟ್೯ ಫೋನ್, ಗಾಂಜಾ ಸೇರಿದಂತೆ ಖೈದಿಗಳಿಗೆ ರಾಜ್ಯಾತಿಥ್ಯ ಕೂಡ ಸಿಗುತ್ತದೆ ಅನ್ನೋದು ತಿಳಿದು ಬಂದಿದೆ.
ಜೈಲಿನಲ್ಲಿ ಎಣ್ಣೆ ಹೊಡೆಯೋ, ಗಾಂಜಾ ಸೇದೋ ವಿಡಿಯೋವನ್ನು ಸ್ವತಃ ಖೈದಿಗಳೇ ವೈರಲ್ ಮಾಡ್ತಿದ್ದು, ಕಾರಾಗೃಹದ ಖೈದಿಗಳ ಹೈ ಫೈ ಲೈಫ್‌ನ ಹಲವು ಫೋಟೋ ವೀಡಿಯೋ ವೈರಲ್ ಆಗಿದೆ. ಸ್ಮಾಟ್೯ ಫೋನ್ ಬಳಸಿ ಖೈದಿಗಳು ಸ್ನೇಹಿತರಿಗೆ ವೀಡಿಯೋ ಕಾಲ್ ಮಾಡಿದ್ದು, ಗಾಂಜಾ ಹೊಡೆಯುತ್ತ ಜೈಲಿನಲ್ಲೇ ಸೆಲ್ಫಿಗೆ ಪೋಸ್ ನೀಡುತ್ತಿರುವ ಫೋಟೋ ಕೂಡ ವೈರಲ್ ಆಗಿದೆ.
ಇದನ್ನೂ ಓದಿ: ದಸರಾ ಹಬ್ಬವು ಹಿಂಸೆಗೆ ಪ್ರಚೋದನೆ ಕೊಡುವಂತದ್ದು: ಲೇಖಕಿ ಬಿ. ಟಿ. ಲಲಿತಾ ನಾಯಕ್
ಖೈದಿಗಳಾದ ವಿಶಾಲ, ಸಾಗರ ಹಾಗು ಸೋನು ಎಂಬ ಖೈದಿಗಳ ಹೈ ಫೈ ಜೀವನ ಫೋಟೋ ವಿಡಿಯೋಗಳು ಸಿಕ್ಕಾಪಟ್ಟೆ ಹರಿದಾಡಿದ್ದು, ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಈ ಆರೋಪಿಗಳು ಬಿಂದಾಸ್ ಲೈಫ್ ಅನ್ನು ಜೈಲಿನೊಳಗೆ ಎಂಜಾಯ್ ಮಾಡುತ್ತಿದ್ದಾರೆ. ಯಾವ ಜೈಲು ಅನ್ನೋ ವಿಚಾರದಲ್ಲಿ ಶಿವಮೊಗ್ಗ- ಕಲಬುರಗಿ ಜೈಲು ಖೈದಿಗಳ ಮಧ್ಯ ಕಚ್ಚಾಟ ಆರಂಭವಾಗಿದ್ದು, ಇದೇ ಕಾರಣಕ್ಕೆ ಜೈಲಿನ ಹೈಪೈ ವಿಡಿಯೋ ಎಕ್ಸ್‌ಪೋಸ್ ಆಗಿದೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಎಣ್ಣೆ ಹೊಡೆಯೋ, ಗಾಂಜಾ ಸೇದೋ ಫೋಟೋ ವಿಡಿಯೋ ಹರಿದಾಡುತ್ತಿದ್ದರೂ ಸಹ ಜೈಲಾಧಿಕಾರಿಗಳು ಮಾತ್ರ ಕಲಬುರಗಿ ಜೈಲಿನಲ್ಲಿ ಹೈಫೈ ಲೈಪ್ ಇಲ್ಲ ಎಂದು ಅಲ್ಲಗಳೆಯುತ್ತಿದ್ದಾರೆ. ನ್ಯೂಸ್ 18 ಗೆ ಸ್ವತಃ ಜೈಲು ಅಧಿಕಾರಿಗಳೇ ಮಾಹಿತಿ ನೀಡಿದ್ದು, ಆದರೆ ನಾಲ್ಕೈದು ದಿನಗಳಿಂದ ಈ ವಿಡಿಯೋ ವೈರಲ್ ಆಗ್ತಿದೆ. ಆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಸದ್ಯ ಬೆಂಗಳೂರು ನಂತರ ಕಲಬುರಗಿ ಜೈಲಿನಲ್ಲಿ ಖೈದಿಗಳು ರಾಜಾರೋಷವಾಗಿ ಹೈಫೈ ಜೀವನ ನಡೆಸುತ್ತಿರುವ ಫೋಟೋ ವಿಡಿಯೋ ವೈರಲ್ ಆಗಿದ್ದು, ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತೆ ಅಂತಾ ಹೇಳಲಾಗ್ತಿದೆ. ಇದರ ಇದು ಕಲಬುರಗಿ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳ ಕಾರಾಗೃಹದಲ್ಲೂ ದುಡ್ಡು ಕೊಟ್ಟರೆ ಇಂತಹ ಸೌಲಭ್ಯ ಸಿಗುತ್ತದೆ, ಜೈಲಿನ ಸಿಬ್ಬಂದಿಯೇ ಬೇಕಾದುದನ್ನು ಒದಗಿಸುತ್ತಾರೆ ಎಂಬ ಆರೋಪವೂ ಜೈಲಿನಿಂದ ಹೊರ ಬಂದಿರುವ ಖೈದಿಗಳು ಹೇಳುತ್ತಿದ್ದಾರೆ.
ಇದನ್ನೂ ನೋಡಿ: ಐಸಿಡಿಎಸ್ ಯೋಜನೆ ಕಾಯ್ದೆಯಾಗಬೇಕು – ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಹಕ್ಕಾಗಬೇಕು – ವಕೀಲ ಮಂಜುನಾಥ್