ಹಾಸನ : 7 ಜಿಲ್ಲೆಗಳ ಜನರ ಮನೆಗೆ ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರು ತಲುಪಲಿದ್ದು, ಹತ್ತಾರು ಕೆರೆ ತುಂಬಿಸಲಾಗುತ್ತದೆ. ಹೀಗಿದ್ದರೂ ಕೆಲವರು ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಯತ್ನಿಸುತ್ತಾರೆ. ಹೀಗಾಗಿ ಅಪನಂಬಿಕೆ ಸೃಷ್ಟಿಸುವವರ ಮಾತುಗಳಿಗೆ ಕಿವಿ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರದ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದ ಬಳಿಕ ಹೆಬ್ಬಹಳ್ಳಿಯ 4 ನೇ ವಿತರಣಾ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಎತ್ತಿನ ಹೊಳೆ 2ನೆ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಭರವಸೆ ನೀಡಿದರು.
ಇದನ್ನು ಓದಿ : ರಾಯಚೂರು ಶಾಲಾ ಅಪಘತ : ರಸ್ತೆ ಸುರಕ್ಷತೆಯ ಕ್ರಮಗಳು ಮತ್ತು ಮಕ್ಕಳಿಗೆ ಪರಿಹಾರಕ್ಕಾಗಿ ಎಸ್ಎಫ್ಐ (SFI) ಮನವಿ
ಇದೀಗ ಎರಡು ಹಂತದ ಯೋಜನೆ. ಮೊದಲ ಹಂತ ಉದ್ಘಾಟನೆಗೊಂಡಿದೆ. 2ನೇ ಹಂತ ಮುಕ್ತಾಯವಾದ ಬಳಿಕ ಇಡೀ ಯೋಜನೆ ಯಶಸ್ವಿ ಜಾರಿಯಾಗಲಿದ್ದು, ಇದರಿಂದ ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ಆಗಲಿದೆ ಎಂದು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ.
ಇದನ್ನು ನೋಡಿ : ಬಿಜೆಪಿಯವರು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ – ಬಿ.ಕೆ. ಹರಿಪ್ರಸಾದ್Janashakthi Media