ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್, ರಾಜ್ಯದಲ್ಲಿ 2020 ಮತ್ತು 2021ರಲ್ಲಿ 754 ಸಣ್ಣ ಕಾರ್ಖಾನೆಗಳು ಹಲವು ಕಾರಣಗಳಿಂದ ಮುಚ್ಚಲ್ಪಟ್ಟಿವೆ. ಕಚ್ಚಾ ವಸ್ತುಗಳ ಕೊರತೆ, ಹಳೆಯ ತಂತ್ರಜ್ಞಾನ, ಬಂಡವಾಳ ಕೊರತೆ, ಕಾರ್ಮಿಕರ ಸಮಸ್ಯೆ, ಆಡಳಿತ ಮಂಡಳಿಯ ಆಂತರಿಕ ಸಮಸ್ಯೆ ಇನ್ನಿತರೆ ಕಾರಣಗಳಿಂದ ಮುಚ್ಚಲ್ಪಟ್ಟಿವೆ. ಇದರಿಂದಾಗಿ ಸುಮಾರು 46,585 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮುಚ್ಚಲ್ಪಟ್ಟಿರುವ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಇದನ್ನು ಓದಿ: ಸಚಿವರು-ಶಾಸಕರಿಂದ ಆಕ್ಷೇಪ: ಬಿಬಿಎಂಪಿ ಬಜೆಟ್ ಮುಂದೂಡಿಕೆ
‘ಕೋವಿಡ್ 2ನೇ ಅಲೆ ಬಳಿಕ ಇಂಧನ ಇಲಾಖೆಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ 2020ರ ಏಪ್ರಿಲ್, ಮೇ ತಿಂಗಳ ಬೇಡಿಕೆ ಶುಲ್ಕ ಮತ್ತು ಸ್ಥಿರ ಶುಲ್ಕವನ್ನು ಮನ್ನಾ ಮಾಡಿದೆ. ಇದರಿಂದ 2,03,659 ಘಟಕಗಳಿಗೆ 90.46 ಕೋಟಿ ರೂ. ಸ್ಥಿರ ಶುಲ್ಕ ಪಾವತಿಯಿಂದ ವಿನಾಯಿತಿ ಲಭಿಸಿದೆ. ಮುಚ್ಚಿರುವ ಸಣ್ಣ ಕೈಗಾರಿಕೆಗಳ ಕಾರ್ಮಿಕರ ಬಲವರ್ಧನೆಯ ಯಾವುದೇ ಯೋಜನೆ ಜಾರಿಯಲ್ಲಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್‌ನಲ್ಲಿ 26 ಸಾವಿರ ಜನ ಕೆಲಸ ಮಾಡುತ್ತಿದ್ದರು, ನಾನು ಅಲ್ಲಿ ಕೆಲಸ ಮಾಡುತ್ತಿದ್ದೆ, ಎನ್‌ಜಿಎಫ್‌ನಲ್ಲಿ 5 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು.
ಅದೇ ರೀತಿ 92,919 ಉದ್ಯೋಗ ಸೃಷ್ಟಿಯಾಗುವ ಕಾರ್ಖಾನೆಗಳು ಸ್ಥಾಪನೆಯಾಗಿವೆ. ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಬೆಂಬಲ ನೀಡುತ್ತಿದೆ.
ಕಾರ್ಮಿಕರ ಬಲವರ್ದನೆಗೆ ಉದ್ಯೋಗ ಕಳೆದುಕೊಂಡವರ ನೆರವಿಗೆ ಕಾರ್ಮಿಕ ಇಲಾಖೆಯಲ್ಲಿ ಯಾವುದೇ ಯೋಜನೆಗಳಿಲ್ಲ. ಆದರೆ ಕಾರ್ಮಿಕರು ತಮ್ಮ ಉಳಿತಾಯದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಿರುತ್ತಾರೆ ಎಂದರು.