ಎಲ್ಲಿದೆ ‘ಅಚ್ಚೇ ದಿನ್’ ಬಿಜೆಪಿ ಕಾರ್ಯಕರ್ತರ ಪ್ರಶ್ನೆ?!

ಮೈಸೂರು,ಫೆ.15 : ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ  ಏಳುತ್ತಿದೆ. ನೀವೆಲ್ಲಾ ಸುಳ್ಳು ಹೇಳುತ್ತಿದ್ದೀರಿ? ಎಲ್ಲಿದೆ ಎರಡು ಕೋಟಿ ಉದ್ಯೋಗ?  ಎಲ್ಲಿದೆ  ಅಚ್ಚೇ ದಿನ್? ಎಂದು ಜನ ಪ್ರಶ್ನಿಸುತ್ತಿದ್ದಾರೆ, ಅವರಿಗೇನು ಉತ್ತರ ಕೊಡಬೇಕು ಎಂದು ಸಚಿವರನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದಾಗ ಸಚಿವರ ಕಥೆ ಹೇಗಾಗಿರಬೇಡ ಯೋಚಿಸಿ.!

ಹೌದು ಇಂತದ್ದೊಂದು ಘಟನೆ ನಡೆದದ್ದು ಮೈಸೂರಿನಲ್ಲಿ, ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರ 2021-22 ನೇ ಸಾಲಿನ ಆಯ್ಯವ್ಯಯದ  ವಿಮರ್ಶೆ ಮತ್ತು ವಿಶ್ಲೇಷಣೆ ಸಭೆಯಲ್ಲಿ ಬಿಜೆಪಿ ನಾಯಕರಿಗೂ ಮತ್ತು ಕಾರ್ಯಕರ್ತರ ನಡುವೆ ಹಲವು ಚರ್ಚೆಗಳು ನಡೆದವು. ಪ್ರಮುಖವಾಗಿ ಕಾರ್ಯಕರ್ತುರು ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಸಿಡಿಮಿಡಿಗೊಂಡ ಘಟನೆಯೂ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ  ಸೋಮಶೇಖರ್ ಮುಖ ಗಂಟಿಕ್ಕಿ ಕಾರ್ಯಕರ್ತರನ್ನು ದುರ್ಗುಟ್ಟು ನೋಡುತ್ತಿದ್ದುದಾಗಿ ಬಿಜೆಪಿ ಮೂಲಗಳೇ ತಿಳಿಸಿವೆ.

ಸಭೆಯಲ್ಲಿ ಕಾರ್ಯಕರ್ತರು ಪೆಟ್ರೋಲ್‌, ಡಿಸೇಲ್‌ ಮತ್ತು ಗ್ಯಾಸ್‌ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಇದೇನಾ? ಅಚ್ಚೇ ದಿನ್ ಎಂದು ಹೋದಕಡೆಗಳಲ್ಲಿ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಅವರಿಗೆ ನಾವುಗಳು ಏನೆಂದು ಉತ್ತರಿಸಬೇಕು? ಅಚ್ಚೇ ದಿನ್ ಎಂದು ಪದೇ ಪದೇ ಉಚ್ಚರಿಸುತ್ತೇವೆ ಎಲ್ಲಿದೆ ‘ಅಚ್ಚೇ ದಿನ್’ ಹೇಳಿ ಅದನ್ನೇ ನಾವು ಜನರಿಗೆ ಉತ್ತರ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ಈ ರೀತಿ ಪ್ರಶ್ನೆ ಕೇಳುತ್ತಿದ್ದಂತೆ ಕೆಲಹೊತ್ತು ಗೊಂದಲವೂ ಸೃಷ್ಟಿಯಾಗಿತ್ತು.

 

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ       

ಕಾರ್ಯಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಜಾರಿಯಾದ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಕಿರು ಹೊತ್ತಿಗೆ ಹೊರತರುವ ಉದ್ದೇಶ ಹೊಂದಿದೆ. ಈ ಕಿರು ಹೊತ್ತಿಗೆಯನ್ನು  ಪ್ರಮುಖವಾಗಿ ಪ್ರಸಕ್ತ ಸಾಲಿನ ಬಜೆಟ್ ಕುರಿತಾಗಿಯೂ ಇದೆ. ಈ ಬಜೆಟ್ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಪ್ರಚಾರ ಮಾಡುವುದು ನಿಮ್ಮ ಕೆಲಸ ಎಂದು ಬಜೆಟ್  ಹಾಗೂ ಬೆಲೆ ಏರಿಕೆಯನ್ನು  ಸಮರ್ಥಿಸಿಕೊಂಡರು. ಆದರೂ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಗುಸು ಗುಸು ಮಾತನಾಡುತ್ತಿದ್ದರು.

Donate Janashakthi Media

Leave a Reply

Your email address will not be published. Required fields are marked *