ಬೆಂಗಳೂರು : ವಿಧಾನಸಭಾ ಚುನಾವಣಾ ಹೊತ್ತಲ್ಲೇ ಭಾರೀ ಬೆಳವಣಿಗೆಯಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ. ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಜೈ ಅನ್ನುತ್ತಿದ್ದಾರೆ.
ಈಗಾಗಲೇ ಮೂವರು ಪೊಲೀಸ್ ಇನ್ಸ್ಪೆಕ್ಟರ್ಗಳು ರಾಜೀನಾಮೆ ನೀಡಿದ್ದು. ಚುನಾವಣಾ ಅಖಾಡಕ್ಕಿಳಿಯುವುದನ್ನು ಖಚಿತ ಪಡಿಸಿದ್ದಾರೆ. ಮತ್ತಷ್ಟು ಪೊಲೀಸ್ ಇನ್ಸ್‌ಪೆಕ್ಟರ್ ಗಳು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಕಲಗೂಡಿನಿಂದ ಸ್ಪರ್ಧೆಗೆ ರೆಡಿಯಾಗಿರುವ ಶ್ರೀಧರ್ಗೌಡ, ಕಾಂಗ್ರೆಸ್ನಿಂದ ಸ್ಪರ್ಧಿಸಲು ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಚಾಮರಾಜನಗರದಿಂದ ಸ್ಪರ್ಧಿಸಲು ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ರಾಜೀನಾಮೆ ಮಾಡಿದ್ದಾರೆ. ವಿಜಯಪುರದ ನಾಗಠಾಣಾದಿಂದ ಸ್ಪರ್ಧಿಸಲು ಮಹೇಂದ್ರ ನಾಯಕ್ ರಾಜೀನಾಮೆ ಮಾಡಿದ್ದು, ಮಹೇಂದ್ರ ನಾಯಕ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಬೆಳಗೆ ನೋಡಿದರೆ ಗೃಹ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಂತೆ ಕಾಣುತ್ತಿದೆ. ಸ್ಯಾಂಟ್ರೋ ರವಿ ಹೇಳಿರುವಂತೆ ಬಿಜೆಪಿಯ ಸಖ್ಯ ಪೊಲೀಸರೊಂದಿಗೆ ಉತ್ತಮ ಇದೆ ಎಂಬುದು ಖಚಿತವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.