ಮತಗಟ್ಟೆ ಸಮೀಕ್ಷೆಗೆ ಚುನಾವಣಾ ಆಯೋಗ ನಿಷೇಧ

ನವದೆಹಲಿ : ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ನಡೆಯುತ್ತಿರುವ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳು ವಿಧಾನಸಭೆ ಉಪ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಯೋಗವು 1951ರ ಜನ ಪ್ರಾತಿನಿಧ್ಯ ಕಾಯಿದೆ ಸೆಕ್ಷನ್‌ 126 ಎ ಯ ಉಪವಿಭಾಗ (1) ರ ಅಡಿಯಲ್ಲಿ ನಿಯಮದಂತೆ ಮಾರ್ಚ್‌ 21ರ ಬೆಳಿಗ್ಗೆ 7.00 ಗಂಟೆಯಿಂದ ಏಪ್ರಿಲ್‌ 29ರ ಸಂಜೆ 7.30ರವರೆಗೂ ಮತಗಟ್ಟೆ ಸಮೀಕ್ಷೆಯನ್ನು ಚುನಾವಣಾ ಆಯೋಗ ತಡೆಹಿಡಿದಿದೆ.

ಸಮೀಕ್ಷೆಯ ಫಲಿತಾಂಶವನ್ನು ಮುದ್ರಣ ಅಥವಾ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಪ್ರಕಟಿಸುವ ಅಥವಾ ಪ್ರಚಾರವನ್ನು ಮಾಡುವುದನ್ನು ನಿಷೇಧಿಸಲಾಗಿದೆ.   ಇದಲ್ಲದೆ, ಜನರ ಪ್ರಾನಿಧ್ಯ ಕಾಯ್ದೆ 1951ರ ಸೆಕ್ಷನ್‌ 126ರ (1) (ಬಿ) ಅಡಿಯಲ್ಲಿ, ಚುನಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹ ಅಥವಾ ಯಾವುದೇ ಮತದಾನ ಸಮೀಕ್ಷೆಯ ಫಲಿತಾಂಶಗಳನ್ನು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರದರ್ಶನಕ್ಕೆ ಅವಕಾಶವಿಲ್ಲವೆಂದು ತಿಳಿಸಿದ್ದಾರೆ.

ಪ್ರತಿ ಹಂತದ ಮತದಾನದ ವ್ಯಾಪ್ತಿಯ ಪ್ರದೇಶಗಳಲ್ಲಿ ಮತದಾನ ಪೂರ್ಣಗೊಂಡ 48 ಗಂಟೆಗಳ ಅವಧಿಯಲ್ಲಿ ಸಮೀಕ್ಷೆಗಳನ್ನು ಯಾವುದೇ ಮಾಧ್ಯಮದಲ್ಲಿ ಬಿತ್ತರಿಸಬಾರದು ಮತ್ತು ಯಾವುದೇ ಚುನಾವಣಾ ವಿಷಯಗಳನ್ನು ಪ್ರದರ್ಶಿಸಬಾರದೆಂದು ಆಯೋಗ ಆದೇಶಿಸಿದೆ.

ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಫೆಬ್ರವರಿ 26, 2021 ಮತ್ತು 2021 ರ ಮಾರ್ಚ್ 16 ರಂದು ಆಯೋಗದ ಸುದ್ಧಿಗೋಷ್ಟಿಯನ್ನು ನಡೆಸಿತು.

Donate Janashakthi Media

Leave a Reply

Your email address will not be published. Required fields are marked *