ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ದೆಹಲಿ ಸಿಎಂ ಅತಿಶಿ ವಿರುದ್ಧ ಎಫ್‌ಐಆರ್‌

ನವದೆಹಲಿ : ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಚುನಾವಣಾಧಿಕಾರಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಅತಿಶಿ ಸರ್ಕಾರಿ ವಾಹನವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜನವರಿ 7 ರಂದು ದೆಹಲಿ ಚುನಾವಣೆ ಘೋಷಣೆಯಾದ ನಂತರ, ಸರ್ಕಾರಿ ವಾಹನವು ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಎಎಪಿಯ ಚುನಾವಣಾ ಕಚೇರಿಗೆ ತಲುಪಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಕಲ್ಕಾಜಿ ನಿವಾಸಿ ಕೆ.ಎಸ್‌‍ರ.ದುಗ್ಗಲ್‌ ಅವರು ಗೋವಿಂದಪುರಿ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಆಗ್ನೇಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜಯ್‌ ಕುಮಾರ್‌ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ಪೊಲೀಸರಿಗೆ ಸೂಚಿಸಿದ್ದಾರೆ.

ಚುನಾವಣಾ ಆಯೋಗವು ಜನವರಿ 7 ರಂದು ದೆಹಲಿ ಚುನಾವಣೆಯನ್ನು ಘೋಷಿಸುವುದರೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಸಮಯದಲ್ಲಿ ಪ್ರಚಾರ, ಚುನಾವಣಾ ಪ್ರಚಾರ ಅಥವಾ ಚುನಾವಣಾ ಸಂಬಂಧಿತ ಪ್ರಯಾಣಕ್ಕಾಗಿ ಅಧಿಕೃತ ಅಥವಾ ಸರ್ಕಾರಿ ವಾಹನಗಳನ್ನು ಬಳಸುವುದನ್ನು ಕೋಡ್‌ ನಿಷೇಧಿಸುತ್ತದೆ.
Donate Janashakthi Media

Leave a Reply

Your email address will not be published. Required fields are marked *