ತೀರ್ಥಹಳ್ಳಿ : ಬಿದರಗೋಡು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯ ಸಿಗದ ಉಳುಮಡಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಿಸುವುದಾಗಿ ಆಗ್ರಿಸಿದ್ದಾರೆ.
ತಾಲೂಕಿನ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ ಹೋಬಳಿಯ ಕಣಗಲು, ಸುರುಳಿಗದ್ದೆ, ಹಾಗೂ ಉಳುಮಡಿ ಗ್ರಾಮಗಳಲ್ಲಿ ಸು 45 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿಗೆ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಕರೆಂಟ್ ವ್ಯವಸ್ಥೆಗಳಿಲ್ಲದೆ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಜೊತೆಗೆ ಇಲ್ಲಿನ 20- 30 ಯುವಕರಿಗೆ ಮದುವೆ ಗೆ ಹೆಣ್ಣು ಕೊಡದಿರಿವುದು,ಕಾಡು ಪ್ರಾಣಿಗಳ ಸಮಸ್ಯೆ ಮತ್ತು ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನದ ಸರ್ಕಾರ ಹಾಗೂ ಆಡಳಿತಕ್ಕೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದರ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬಿದರಗೋಡು
ಇದನ್ನು ನೋಡಿ : ಕರ್ನಾಟಕಕ್ಕೆ ಬಿ.ಎಲ್. ಸಂತೋಷ್ ಅಚಾನಕ್ ಎಂಟ್ರಿ..ಬಿಜೆಪಿಗೆ ಅನುಕೂಲವೋ ಅನಾನುಕೂಲವೋ?
ಇದೆ ವೇಳೆ ತಲ್ಲೂರಂಗಡಿ ಕೈಮರದಿಂದ ಉಳುಮಡಿ ಹೋಗುವ ಸು 5ಕಿಮೀ ರಸ್ತೆ 8 ತಿಂಗಳ ಹಿಂದೆ ಮಾಡಿದ್ದಾದರೂ ಅಲ್ಲಲ್ಲಿ ರಸ್ತೆ ಕಿತ್ತು ಬಂದು ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಗ್ರಿಸಿದ್ದಾರೆ.
ಈ ಪ್ರದೇಶ ನಕ್ಸಲ್ ಪೀಡಿತ ಪ್ರದೇಶಕ್ಕೆ ಒಳಪಟ್ಟಿದ್ದು ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನು ನೋಡಿ : ಬಿಜೆಪಿಯ extended ಸಂಸ್ಥೆ ಈಡಿ ಕುರಿತು ‘ಬೆಚ್ಚಿ ಬೀಳಿಸುವ ಮಾಹಿತಿಗಳು’ Janashakthi Media