ಮೂಕಪ್ರಾಣಿಗಳಿಗೆ ತಂಪೆರೆಯುತ್ತಿರುವ ಯುವಕರು-ಕಾಡಂಚಿನ ರೈತರು

ಬೆಂಗಳೂರು/ದಾವಣಗೆರೆ: ಬಿಸಿಲಿ ಬೇಗೆಯಿಂದ ನಾಡಿನ ಜನರಷ್ಟೇ ಅಲ್ಲ, ಕಾಡುಪ್ರಾಣಿಗಳು ಸಹ ಒದ್ದಾಡುತ್ತಿವೆ.ಹನಿ ನೀರಿಗಾಗಿ ಅಲೆದು ಅಲೆದು ಬತ್ತಿದ ಕೆರೆ ತೊರೆ ಕಂಡು ಬೇಸತ್ತಿವೆ. ಇನ್ನು ಕೆಲವೆಡೆ ದಾಹ ತೀರದೇ ಸಾವನ್ನೇ ತಂದುಕೊಂಡಿವೆ. ಈ ನೋವಿನ ಸಂಗತಿಯ ನಡುವೆ ಇಲ್ಲೊಂದಿಷ್ಟು ಯುವಕರು, ಕಾಡಿನಂಚಿನ ರೈತರು ಕಾಡುಪ್ರಾಣಿಗಳಿಗೆ ನೆರವಾಗಿದ್ದಾರೆ. ಮೂಕಪ್ರಾಣಿ

ಕಾಡುಜನರಿಗೆ ಕಾಡಿನಂಚಿನಲ್ಲಿರುವ ರೈತರಿಗೆ ಗೊತ್ತು ಪ್ರಾಣಿಗಳ ಪಾಡೇನು?ನೋವೇನು?ಅಂತ.ಮೂಕಪ್ರಾಣಿಗಳ ರೋಧನೆಯನ್ನು ಮನದಾಳದ ನೋವನ್ನು ನೀರಿನ ದಾಹವನ್ನು ತೀರಿಸುವ ಸಮಾಜವೇ ಮೆಚ್ಚುವಂತಹ ಕೆಲಸವನ್ನು ದಾವಣಗೆರೆ ಕುಕ್ವಾಡ ಉಬ್ರಾಣಿ ಅರಣ್ಯಪ್ರದೇಶ ವ್ಯಾಪ್ತಿಗೊಳಪಟ್ಟ ಶಿವಪುರದಾಳ್‌ ಕಾಡಿನಲ್ಲಿ ಇಂತಹ ಮನಮುಟ್ಟುವ ದೃಶ್ಯಕ್ಕೆ ಯುವಕರು ಕಾಡಿನಲ್ಲಿನ ರೈತರು ಸಾಕ್ಷಿಯಾಗಿದ್ದಾರೆ. ಕಾಡಿನಲ್ಲಿ ರೈತರು ಹಾಗೂ ಯುವಕರು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಹೃದಯವಂತಿಕೆ ಮೆರೆದಿದ್ದಾರೆ.

ಇದನ್ನು ಓದಿ : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟ ಗೆದ್ದೇ, ಗೆಲ್ಲಲಿದೆ: ಡಿಕೆಶಿ

ಮೂಕಪ್ರಾಣಿಗಳ ರೋಧನೆಯನ್ನು ನೀರಿಗಾಗಿ ಹಪಹಪಿಸುತ್ತಿದ್ದ ಮನದ ದಣಿವನ್ನು ಗ್ರಾಮದ 20 ಕ್ಕೂ ಹೆಚ್ಚಿನ ಯುವಕರು ಪ್ರತಿದಿನ ಬೆಳಿಗ್ಗೆ ನೀರು ತೆಗೆದುಕೊಂಡು ಹೋಗಿ ಪ್ರಾಣಿಗಳು ಓಡಾಡುವ ಸ್ಥಳದಲ್ಲಿ ನೀರು ತುಂಬಿದ ಬಕೆಟುಗಳನ್ನು ಇಡುತ್ತಾರೆ ಅಲ್ಲದೇ ಗುಂಡಿಗಳನ್ನು ತೋಡಿ ನೀರು ಹಾಕಿ ಬರುತ್ತಿದ್ದಾರೆ.

ಕಾಡಿನಲ್ಲಿರುವ ಈ ಜೀವಿಗಳಿಗೆ ಯುವಕರು ಕಾಡಿನಂಚಿನ ರೈತರು ಮೂಕವೇದನೆಗೆ ತಣಿಸುವ ಹನಿಯಾಗಿದ್ದಾರೆ. ಇಂತಹ ಕೆಲಸ ಮಾಡುತ್ತಿರುವ ಈ ಯುವಕರ ತಂಡ ಮತ್ತು ಕಾಡಿನಂಚಿನ ರೈತರಿಗೊಂದು ಸಲಾಂ ಅನ್ನಲೇ ಬೇಕು. ಈ ಮನೋಭಾವ ಎಲ್ಲರಿಗೂ ಬರಲೀ, ನಿಮ್ಮನಿಮ್ಮ ಮನೆ ಮಹಡಿ, ನೆಲದ ಮೇಲೆ, ಮೆಟ್ಟಿಲುಗಳ ಮೇಲೆ ನೀರಿಟ್ಟು ಪಕ್ಷಿ, ಪ್ರಾಣಿಗಳ ಜೀವಕ್ಕೆ ತಂಪೆರೆಯಲೀ ಎಂದು ಜನಶಕ್ತಿ ಮೀಡಿಯಾ ಬಳಗ ಆಶಿಸುತ್ತದೆ.

ಇದನ್ನು ನೋಡಿ : ಕೋಲಾರ ಲೋಕಸಭಾ ಕ್ಷೇತ್ರ : ಒಳ ಜಗಳದ ಲಾಭ ಯಾರಿಗೆ? ಮಹಿಳಾ ಮತಗಳು ನಿರ್ಣಾಯಕ Janashakthi Media

Donate Janashakthi Media

Leave a Reply

Your email address will not be published. Required fields are marked *