ನ್ಯೂಮೋನಿಯಾದಿಂದ ಬಳಲುತ್ತಿದ್ದ ತೀವ್ರಾ ನಿಗಾ ಘಟಕದಲ್ಲಿದ್ದ ವೃದ್ಧೆಯಿಂದ ಮತದಾನ

ಬೆಂಗಳೂರು : ರೋಗವೊಂದರಿಂದ ಬಳಲುತ್ತಿದ್ದ ಅಜ್ಜಿ ಕೊನೆಗೂ ಆಕ್ಸಿಜನ್ ನೆರವಿನೊಂದಿಗೆ ಸಹಾಯಕ ರೊಂದಿಗೆ ವ್ಹೀಲ್ ಚೇರ್ನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದ ಮಾದರಿ ಘಟನೆಗೆ ರಾಜಧಾನಿ ಬೆಂಗಳೂರಿನ‌ ಮತಗಟ್ಟೆಯೊಂದು ಮಾದರಿ ರೂಪದಲ್ಲಿ ಸುದ್ದಿಯಾಗಿದೆ‌. ವೃದ್ಧೆ

ನ್ಯುಮೋನಿಯಾದಿಂದ ಬಳಲುತ್ತಿರುವ ವೃದ್ಧೆಯೊಬ್ಬರು ಆಕ್ಸಿಜನ್ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ಮಾದರಿಯಾಗಿದ್ದಾರೆ.

ಇದನ್ನು ಓದಿ : ಲೋಕಸಭೆ ಚುನಾವಣೆ-2024| ಎರಡನೇ ಹಂತ: ದೇಶದ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ ವೇಳೆಗೆ ಶೇ40 ರಷ್ಟು ಮತದಾನ

ಬೆಂಗಳೂರಿನ ಜಯನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ  78 ವರ್ಷದ ಕಲಾವತಿ ನ್ಯೂಮೋನಿಯಾದಿಂದ ಬಳಲುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದ್ದು ಮತದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ವೃದ್ದೆಯ ನೆರವಿಗೆ ಬಂದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಕಲ ವೈದ್ಯಕೀಯ ನೆರವು, ಆಕ್ಸಿಜನ್ ಸಮೇತ : ಜಯನಗರ ಮತಗಟ್ಟೆಗೆ ಕರೆತಂದು ಮತದಾನ ಮಾಡುವಲ್ಲಿ ಸಹಾಯ ಮಾಡಿದ್ದಾರೆ.

ಇದನ್ನು ನೋಡಿ : ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!

Donate Janashakthi Media

Leave a Reply

Your email address will not be published. Required fields are marked *