ಬೆಂಗಳೂರು : ಮುಂದಿನ 2021-2022ನೇ ಸಾಲಿನ ಶೈಕ್ಷಣಿಕ ವರ್ಷದ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆಯುವ ಜುಲೈ 1ರಿಂದ ತರಗತಿಗಳು ಆರಂಭವಾಗಲಿವೆ, ಜೂನ್ 15ರಿಂದ ದಾಖಲಾತಿ ಪ್ರಕ್ರಿಯೆಗೆ ಆದೇಶಿಸಲಾಗಿದೆ. ಆದರೆ, ಶುಲ್ಕ ಪಾವತಿಯ ಗೊಂದಲ ಮಾತ್ರ ಇನ್ನು ಬಗೆಹರಿದಿಲ್ಲ.
ಸರಕಾರ ದಾಖಲಾತಿ, ಶಾಲಾರಂಭದ ದಿನಾಂಕ ಪ್ರಕಟಿಸಿದ್ದರೂ ಶೈಕ್ಷಣಿಕ ಶುಲ್ಕದ ಗೊಂದಲಗಳು ಮಾತ್ರ ಇನ್ನೂ ಬಗೆಹರಿದಿಲ್ಲ.
ಇದನ್ನು ಓದಿ: ಸಚಿವರ ವಿರುದ್ಧ ಭ್ರಷ್ಟಾಚಾರದ ದೂರು ಇದ್ದರೂ ಎಸಿಬಿ ನಿಷ್ಕ್ರಿಯ – ಸಿದ್ದರಾಮಯ್ಯ ಆರೋಪ
ಇದೇ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ, 2019-20ರಲ್ಲಿ ಇದ್ದ ಶುಲ್ಕವನ್ನೇ ಪಡೆಯಲು ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿವೆ. ಸರಕಾರಕಳೆದ ವರ್ಷ ಶೇ. 30ರಷ್ಟು ಶುಲ್ಕ ಕಡಿತ ಮಾಡಿದ್ದು, ಅದನ್ನೇ ಮುಂದುವರಿಸಲು ಚಿಂತನೆ ನಡೆಸುತ್ತಿದೆ. ಹೀಗಾಗಿ ನಿರ್ಧಾರ ಆಗಿಲ್ಲ ಎಂದು ಶಿಕ್ಷಣ ಇಲಾಖೆಯು ಮಾಹಿತಿ ನೀಡಿದ್ದಾರೆ.
ಜೂನ್ 15ರಿಂದ ಮುಂದಿನ ವರ್ಷದ ದಾಖಲಾತಿ ಆರಂಭವಾಗಲಿದೆ. ಈ ಮಧ್ಯೆ ಕೆಲವು ಖಾಸಗಿ ಶಾಲಾಡಳಿತ ಮಂಡಳಿಗಳು ನಿಯಮಬಾಹಿರವಾಗಿ ಹೆತ್ತವರಿಂದ ಶುಲ್ಕ ವಸೂಲಿಗೆ ಮುಂದಾಗಿವೆ. ಈ ಸಂಬಂಧ ರಾಜಧಾನಿಯ ಕೆಲವು ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದೆಲ್ಲವನ್ನು ತಪ್ಪಿಸಲು ನಿಟ್ಟಿನಲ್ಲಿ ಸರಕಾರ ಈ ವಾರದ ಅಂತ್ಯದೊಳಗೆ ಶುಲ್ಕ ನಿರ್ಧಾರ ಮಾಡಬೇಕಿದೆ. ಜೂ. 15ರೊಳಗೆ ನಿರ್ಧಾರ ಪ್ರಕಟಿಸದೆ ಇದ್ದರೆ ಶುಲ್ಕ ಪಾವತಿ ಹೆತ್ತವರಿಗೆ ಕಷ್ಟವಾಗಲಿದೆ.
ಇದನ್ನು ಓದಿ: ಡಿಜಿಟಲ್ ಕಲಿಕೆಗೆ ತೊಡಕಾಗದಂತೆ ತುರ್ತು ಕ್ರಮಗಳ ಪರಿಹಾರಕ್ಕೆ ಪ್ರಯತ್ನ: ಪಿಣರಾಯಿ ವಿಜಯನ್
ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯದೆ ಹೋದರೆ, ಪೂರ್ಣ ಶುಲ್ಕ ಕಟ್ಟಲಾಗುವುದಿಲ್ಲ ಎಂಬುದು ಪೋಷಕರು ವಾದಿಸುತ್ತಿದ್ದಾರೆ. ಖಾಸಗಿ ಶಾಲೆಗಳು ಮಾತ್ರ ಪೂರ್ಣ ಶುಲ್ಕಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿವೆ. ಕೊರೊನಾ ಅಲೆಯ ತೀವ್ರತೆ ಮತ್ತು ಮೂರನೇ ಅಲೆಯ ನಿರೀಕ್ಷಿತ ಅಂದಾಜಿನ ಹಿನ್ನೆಲೆಯಲ್ಲಿ ಶುಲ್ಕ ನಿರ್ಧಾರ ಸರಕಾರಕ್ಕೆ ಸವಾಲಾಗಿದೆ.
ತರಗತಿಯ ವೇಳಾಪಟ್ಟಿ ವಿವರಗಳು ಹೀಗಿವೆ:
ಮೊದಲನೇ ಅವಧಿ: 01/07/2021 ರಿಂದ 09/10/2021 ರವರೆಗೆ
ಎರಡನೇ ಅವಧಿ : 21/10/2021 ರಿಂದ 30/04/22 ರವರೆಗೆ
ರಜಾ ದಿನಗಳ ವಿವರ
ದಸರಾ ರಜೆ: 10/10/2021 ರಿಂದ 20/10/2021 ರವರೆಗೆ
ಬೇಸಿಗೆ ರಜೆ: 01/05/2022 ರಿಂದ 28/05/2022 ರವರೆಗೆ
ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ಅನುಸರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.