ಹೈದರಾಬಾದ್: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಬಂಧನವಾಗಿದ್ದು, ಇದೀಗ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರಿಗೆ ನೋಟಿಸು ಜಾರಿ ಮಾಡಿದೆ.
ದೆಹಲಿಯಲ್ಲಿ ಅಬಕಾರಿ ನೀತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಬಹುಕೋಟಿ ರೂಪಾಯಿ ಹಗರಣ ಎಂದು ವರದಿಯಾಗಿದೆ. ಕಳೆದ ಎರಡು ದಿನದ ಹಿಂದೆ ಕವಿತಾ ಅವರಿಗೆ ಆಪ್ತರಾದ ಉದ್ಯಮಿ, ಸೌತ್ ಗ್ರೂಪ್ ಕಂಪನಿ ಮಾಲೀಕ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇದರ ಬಳಿಕ ಇದೀಗ ಕವಿತಾಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಇದನ್ನು ಓದಿ: ಜಾರಿ ನಿರ್ದೇಶನಾಲಯದಿಂದ ಇಂದು ಮನೀಶ್ ಸಿಸೋಡಿಯಾ ವಿಚಾರಣೆ
ಅರುಣ್ ರಾಮಚಂದ್ರ ಪಿಳ್ಳೈ ಕವಿತಾ ಸೇರಿದಂತೆ ವೈಎಸ್‌ಆರ್ ಕಾಂಗ್ರೆಸ್ ಶಾಸಕ ಶ್ರೀನಿವಾಸಲು ರೆಡ್ಡಿ, ಉದ್ಯಮಿ ಶರತ್ ರೆಡ್ಡಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟದ ನಿಯಮಗಳನ್ನು ಬದಲಿಸುವ ಮಹತ್ವದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ(ಎಎಪಿ) ಆಡಳಿತವಿರುವ ದೆಹಲಿ ಸರ್ಕಾರ ಕೈಗೊಂಡಿತು. ಖಾಸಗಿ ಸಂಸ್ಥೆಗಳು ರಿಟೇಲ್ ಲಿಕ್ಕರ್ ವಲಯ ಪ್ರವೇಶಿಸಲು ಅನುಕೂಲ ಮಾಡಿ ಕೊಡಲು ದೆಹಲಿ ಅಬಕಾರಿ ನೀತಿ 2021-22 ಅನ್ನು ಅನುಷ್ಠಾನಗೊಳಿಸಲಾಗಿತ್ತು. ಇದರಲ್ಲಿ ಪರವಾನಗಿ ನೀಡುವುದು, ಪರವಾನಗಿ ಶುಲ್ಕ ಮನ್ನಾ ಮತ್ತು ಕಡಿತ ಹಾಗೂ ಎಲ್-1 ಪರವಾನಗಿ ಅನುಮೋದನೆಯನ್ನು ಇಲ್ಲದೇ ವಿಸ್ತರಿಸುವ ಮೂಲಕ ಲಂಚ ಪಡೆದು ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪಿಗಳು ಇವೆ.
ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಮೊದಲ ಆರೋಪಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ ರಾಮಚಂದ್ರ ಪಿಳ್ಳೈ ಅವರು ವಿಧಾನ ಪರಿಷತ್ ಸದಸ್ಯೆ ಕವಿತಾ ಅವರ ಬೇನಾಮಿ ಎಂದು ವರದಿ ಮಾಡಿರುವ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ವಿಶೇಷ ನ್ಯಾಯಾಲಯ 2022ರ ಅಕ್ಟೋಬರ್‌ನಲ್ಲಿ ಅರುಣ್ ರಾಜಮಚಂದ್ರನ್ ಪಿಳ್ಳೈನ ಸಹವರ್ತಿ ಅಭಿಷೇಕ್ ಬೋಯಿನ್‌ಪಳ್ಳಿ ಎಂಬಾತನನ್ನು ಬಂಧಿಸಿತ್ತು.
ಲಿಕ್ಕರ್ ಸಂಸ್ಥೆಗಳಿಂದ ಕಮಿಷನ್ ಸಂಗ್ರಹಿಸುವ ಉದ್ದೇಶದಿಂದ ರಾಬಿನ್ ಡಿಸ್ಟ್ರಿಬ್ಯೂಷನ್ ಎಲ್‌ಎಲ್‌ಪಿ ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಅಭಿಷೇಕ್ ನಿರ್ದೇಶಕರಾಗಿದ್ದರು. ಈ ಇಡೀ ಅವ್ಯವಹಾರದಲ್ಲಿ ಒಟ್ಟು ರೂ.296 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ