ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಸಮನ್ಸ್‌ಗೆ ಹಾಜರಾಗದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯ ಕುರಿತು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾಗಿದ್ದಾರೆ. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ದಿವ್ಯಾ ಮಲ್ಹೋತ್ರಾ ಅವರ ಮುಂದೆ ಹಾಜರಾದ ಮುಖ್ಯಮಂತ್ರಿ ಅವರು ಪ್ರಸ್ತುತ ಬಹುಮತ ಸಾಬಿತುಪಡಿಸುವ ಮತ್ತು ಮಾರ್ಚ್‌ನಲ್ಲಿ ಮುಂಬರುವ ಬಜೆಟ್ ಅಧಿವೇಶನದ ತಮ್ಮ ಪರಿಸ್ಥಿತಿಗಳ ಬಗ್ಗೆ ತಿಳಿಸಿದ ಅವರು ನಂತರ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ಬಗ್ಗೆ ತಿಳಿಸಿದ್ದಾರೆ.
“ನಾನು ಹಾಜರಾಗಲು ಬಯಸಿದ್ದೆ ಆದರೆ ಈ ಬಹುಮತ ಸಾಬೀತುಪಡಿಸುವ ಪರಿಸ್ಥಿತಿ ಇದ್ದಕ್ಕಿದ್ದಂತೆ ಬಂದಿದೆ. ನಮ್ಮ ಬಜೆಟ್ ಅಧಿವೇಶನವು ಮಾರ್ಚ್ ಮೊದಲ ವಾರದವರೆಗೆ ಇರುತ್ತದೆ. ನೀವು ನಂತರ ಪ್ರಕರಣವನ್ನು ಪಟ್ಟಿ ಮಾಡಬಹುದು, ನಾನು ವೈಯಕ್ತಿಕವಾಗಿ ಹಾಜರಾಗುತ್ತೇನೆ” ಎಂದು ಕೇಜ್ರಿವಾಲ್ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅದರಂತೆ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿತು.
ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಂಡವರಿಗೂ ಮೀಸಲಾತಿ ವಿಸ್ತರಣೆ ಬಗ್ಗೆ ಚಿಂತನೆ – ತಮಿಳುನಾಡು ಸಿಎಂ
ಫೆಬ್ರವರಿ 7 ರಂದು, ಇಡಿ ದೂರನ್ನು ಸ್ವೀಕರಿಸಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ದಿವ್ಯಾ ಮಲ್ಹೋತ್ರಾ ಅವರು ಫೆಬ್ರವರಿ 17 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದ್ದರು. “.. ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 174 ರ ಅಡಿಯಲ್ಲಿ ಪ್ರಾಥಮಿಕ ಅಪರಾಧವನ್ನು ಮಾಡಲಾಗಿದೆ ಮತ್ತು ಆರೋಪಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ ಸೆಕ್ಷನ್ 204 ರ ಅಡಿಯಲ್ಲಿ ಮುಂದುವರಿಯಲು ಸಾಕಷ್ಟು ಆಧಾರಗಳಿವೆ” ಎಂದು ಫೆಬ್ರವರಿ 17ರಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದರು.
#WATCH | Delhi CM Arvind Kejriwal reaches the Legislative Assembly ahead of the discussion on the Motion of Confidence moved by him yesterday. pic.twitter.com/xKXv1QGe9E
— ANI (@ANI) February 17, 2024
ಸೆಕ್ಷನ್ 174 ರ ಪ್ರಕಾರ, ಉದ್ದೇಶಪೂರ್ವಕವಾಗಿ ಏಜೆನ್ಸಿ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸುವ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಒಂದು ತಿಂಗಳವರೆಗೆ ವಿಸ್ತರಿಸುವ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಕಳೆದ ವರ್ಷ ಅಕ್ಟೋಬರ್ 30, ನವೆಂಬರ್ 2, ಡಿಸೆಂಬರ್ 18, ಡಿಸೆಂಬರ್ 22 ರಂದು ಮತ್ತು ಜನವರಿ 3ಕ್ಕೆ ತಮ್ಮ ಮುಂದೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಈ ವೇಳೆ ಅವರು ತನಿಖೆ ಅಥವಾ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ನೀಡಲು ಸಮನ್ಸ್ ಕೇಳಿತ್ತು. ಆದರೆ ಇಡಿ ಸಮನ್ಸ್, “ಕಾನೂನಿನಲ್ಲಿ ಸಮರ್ಥನೀಯವಲ್ಲ” ಎಂದು ಆಕ್ಷೇಪಿಸಿದ್ದ ಕೇಜ್ರಿವಾಲ್ ಅವರು ಹಾಜರಾಗಲು ನಿರಾಕರಿಸಿದ್ದರು.
ವಿಡಿಯೊ ನೋಡಿ: ಕರ್ನಾಟಕದ 2024-25 ಬಜೆಟ್ ನ ಆಳ ಅಗಲವೇನು? Janashakthi Media