ಬೆಂಗಳೂರು: ಸಿಎಂ ಸಿದ್ದರಾಮಯ್ಯ ಗೆ ಮುಡಾ ಹಗರಣಕ್ಕೆ ಸಂಬಂಧ ಮತ್ತೆ ಸಂಕಷ್ಟ ಎದುರಾಗಿದ್ದು,ಇದೀಗ ಹೈಕೋರ್ಟಿಗೆ ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್ ಅರ್ಜಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯಗೆ ಮತ್ತೆ ಮುಡಾ ಸಂಕಷ್ಟ ಎದುರಾಗಿದ್ದು, ಲೋಕಾಯುಕ್ತ ವರದಿ ತಿರಸ್ಕರಿಸುವಂತೆ ಇದೀಗ ಇಡಿ ತಕರಾರು ಅರ್ಜಿ ಸಲ್ಲಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ED) ತಕರಾರು ಅರ್ಜಿ ಸಲ್ಲಿಸಿದೆ ಒಟ್ಟು ಎಂಟು ಪುಟಗಳ ತಕರಾರು ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಳ್ಳಾರಿಯ ಐತಿಹಾಸಿಕ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಸ್ಥಳ ಪರಿಶೀಲನೆ
ಸಿಎಂ ಮತ್ತು ಅವರ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿಗಳಿವೆ. ನಮ್ಮ ತನಿಖೆಯಲ್ಲಿ ಅವರ ತಪ್ಪುಗಳು ಸಾಬೀತಾಗಿವೆ. ಹೀಗಿದ್ದರೂ ಅವರು ಯಾವ ತಪ್ಪು ಮಾಡಿಲ್ಲ ಎನ್ನಲಾಗಿದೆ.
ಯಾವ ತಪ್ಪು ಮಾಡಿಲ್ಲ ಎಂದು ಹೇಳಿರುವುದು ಸರಿಯಲ್ಲ ಹೀಗಾಗಿ ಲೋಕಾಯುಕ್ತ ವರದಿಯನ್ನು ತಿರಸ್ಕರಿಸಬೇಕು ಹೀಗಂತ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಇಡಿ ಉಲ್ಲೇಖಿಸಿದೆ.
ಇದನ್ನೂ ನೋಡಿ: ನಾಟಿ ಹಸು, ಮಿಶ್ರತಳಿ ಹಸು, ಎಮ್ಮೆ ಮತ್ತು ವೈಜ್ಞಾನಿಕ ಸತ್ಯಗಳು – ಡಾ: ಎನ್.ಬಿ.ಶ್ರೀಧರ Janashakthi Media