ರಾಜಕೀಯ ವಿರೋಧಿಗಳನ್ನು ಭಯಭೀತಗೊಳಿಸಲು ‘ಇಡಿ’ ಬಳಕೆ – ಶರದ್ ಪವಾರ್ ಆಕ್ರೋಶ

ಸೊಲ್ಲಾಪುರ: ರಾಜಕೀಯ ಎದುರಾಳಿಗಳನ್ನು ಭಯಭೀತಗೊಳಿಸುವ ಮತ್ತು ಮೌನಗೊಳಿಸುವ ಸಾಧನವಾಗಿ ಜಾರಿ ನಿರ್ದೇಶನಾಲಯವನ್ನು (ಇಡಿ) ಕೇಂದ್ರ ಸರ್ಕಾರ ಬಳಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಇಂತಹ ಪ್ರವೃತ್ತಿಯನ್ನು ಸೋಲಿಸಲು ನಾವು ಜನರ ಬಳಿಗೆ ಹೋಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಪಾದಿತ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿ 24 ರಂದು ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮೊಮ್ಮಗ ಮತ್ತು ಪಕ್ಷದ ಶಾಸಕ ರೋಹಿತ್ ಪವಾರ್ ಇಡಿಯಿಂದ ಸಮನ್ಸ್ ಪಡೆದಿರುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಎಂಎಸ್‌ಸಿಬಿ ಪ್ರಕರಣದ ಬಗ್ಗೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು 2019 ರ  ಆಗಸ್ಟ್ ವೇಳೆಗೆ ಎಫ್‌ಐಆರ್‌ ದಾಖಲಿಸಿತ್ತು. ಕರ್ಜತ್-ಜಮಖೇಡ್ ಎಂಎಲ್ಎ ಆಗಿರುವ ರೋಹಿತ್ ಪವಾರ್ ಒಡೆತನದ ಬಾರಾಮತಿ ಆಗ್ರೋ ಕಂಪನಿ ಮತ್ತು ಪುಣೆ, ಔರಂಗಾಬಾದ್ ಇತ್ಯಾದಿಗಳ ಕೆಲವು ಸಂಬಂಧಿತ ಘಟಕಗಳ ಮೇಲೆ ಜನವರಿ 5 ರಂದು ಇಡಿ ದಾಳಿ ನಡೆಸಿತ್ತು.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಶರದ್ ಪವಾರ್, “ಅಧಿಕಾರದ ದುರುಪಯೋಗದ ಮೂಲಕ ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ಮತ್ತು ಅವರನ್ನು ಭಯಭೀತಗೊಳಿಸಲು ಇಡಿಯನ್ನು ಬಳಸಲಾಗುತ್ತಿದೆ. ಅಂತಹ ಪ್ರವೃತ್ತಿಯನ್ನು ಸೋಲಿಸಲು ನಾವು ಜನರ ಬಳಿಗೆ ಹೋಗಬೇಕು” ಎಂದು ಹೇಳಿದ್ದಾರೆ.

ಈ ವರ್ಷದ ಮೊದಲಾರ್ಧದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ, ಪೇಸೆಂಟ್ ಆಂಡ್ ವರ್ಕರ್ಸ್ ಪಾರ್ಟಿ(ಪಿಡಬ್ಲ್ಯೂಪಿ) ಮತ್ತು ಕಮ್ಯುನಿಸ್ಟರನ್ನು ಮಹಾ ವಿಕಾಸ್ ಅಘಾಡಿ(ಎಂವಿಎ) ಮಡಿಲಿಗೆ ಸೇರಿಸಲು ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಗಾಜಾದ ಅನ್ಯಾಯದ ಯುದ್ಧ ನಿಲ್ಲಿಸಿ’ | ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಆಫ್ರಿಕಾ ನಾಯಕರ ಒತ್ತಾಯ

“ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಲ್ಲಾ ಮೂರು ಎಂವಿಎ ಪಕ್ಷಗಳ ಸಮಿತಿಯು ಸೀಟು ಹಂಚಿಕೆ ಸೂತ್ರದ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಂವಿಎ ಪ್ರಸ್ತುತ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷವನ್ನು ಮಾತ್ರವೆ ಒಳಗೊಂಡಿದೆ.

ರಾಜಕೀಯದಲ್ಲಿ ಮುದುಕರು ಯುವಕರಿಗೆ ಅವಕಾಶ ನೀಡುತ್ತಿಲ್ಲ ಎಂಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪದೇ ಪದೇ ಪದೇ ಪದೇ ಹೇಳಿಕೆ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, ಇಂತಹ ಮಾತುಕತೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದಿದ್ದಾರೆ. ಅವರಿಗೆ ರಾಜಕೀಯದಲ್ಲಿ ಅವಕಾಶ ಕೊಟ್ಟವರು ಯಾರು? ಅವರಿಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟವರು ಯಾರು ಎಂದು ಶರಾದ್ ಪವಾರ್ ತಿರುಗೇಟು ನೀಡಿದ್ದಾರೆ.

ಅಜಿತ್ ಪವಾರ್ ಮತ್ತು ಎಂಟು ಶಾಸಕರು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರಿದ ನಂತರ ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿ ಪಕ್ಷವೂ ವಿಭಜನೆಯಾಗಿತ್ತು. ಅಂದಿನಿಂದ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತನ್ನ ಬಂಡಾಯವನ್ನು ಸಮರ್ಥಿಸಲು ಶರದ್ ಪವಾರ್ ಅವರ ವಯಸ್ಸಿನ ಬಗ್ಗೆ ಮಾತನಾಡುತ್ತಿದ್ದಾರೆ.

ವೀಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *