ಬೆಂಗಳೂರು: ನಿರ್ದಿಷ್ಟವಾಗಿ 2024ರ ಸಂಸತ್ ಚುನಾವಣೆಗಳ ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತೆಗೆ ಗಂಭೀರ ಹಾನಿಯನ್ನುಂಟುಮಾಡಿದ್ದು, ಭಾರತ ಚುನಾವಣಾ ಆಯೋಗವು ಮತದಾರರಿಗೆ, ಸಿವಿಲ್ ಸೊಸೈಟಿಗಳಿಗೆ ಮತ್ತು ಪ್ರತಿಪಕ್ಷಗಳಿಗೆ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡಿದೆ. ಹೀಗಾಗಿ ಭಾರತೀಯ ಮತದಾನ ಆಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದೀಗ ಸ್ಪಷ್ಟವಾದ ಅಪಾಯ ಬಂದೊದಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ “ಫೋರಮ್ ಫಾರ್ ಎಲೆಕ್ಟೋರಾಲ್ ಇಂಟರ್‌ಗ್ರಿಟಿ” ಹಾಗೂ ಸಿಟಿಜನ್ ಕಮಿಷನ್ ಆಫ್ ಎಲೆಕ್ಸನ್ಸ್‌ನ ಸಮನ್ವಯಾಧಿಕಾರಿ ಎಂ.ಜಿ.ದೇವಸಹಯಮ್ ಆತಂಕ ವ್ಯಕ್ತಪಡಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಪಾತ್ರದ” ಕುರಿತು ಬನಡೆದ ವಿಚಾರ ಸಂಕಿರಣವನ್ನುದ್ದೇಶಿ ಮಾತನಾಡಿದ ಅವರು,ಭಾರತ ಚುನಾವಣಾ ಆಯೋಗವು ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಹಾಗೂ ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಿತರನ್ನೊಳಗೊಂಡ ಚುನಾವಣೆಗಳ ನಾಗರಿಕ ಆಯೋಗ (ಸಿಸಿಇ) ಈವಿಷಯದ ಕುರಿತು ಕೂಲಂಕಶ ಅಧ್ಯಯನ ನಡೆಸಿ 2021ರ ಜನವರಿಯಲ್ಲಿ ತನ್ನ ವರದಿಯ ಪ್ರತಿಯನ್ನು ಭಾರತ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು.
ವರದಿಯ ಪ್ರಕಾರ,EVM/VVPAT ಪ್ರತಿಯೊಬ್ಬ ಮತದಾರ ತನ್ನ ಇಚ್ಛೆಯಂತೆ ಮತ ಚಲಾಯಿಸುವ, ಚಲಾವಣೆಯಾದ ಪ್ರಕಾರ ದಾಖಲಿಸುವ ಮತ್ತು ದಾಖಲಿಸಿದಂತೆ ಎಣಿಕೆ ಮಾಡುವ ಪ್ರಕ್ರಿಯೆಯನ್ನು ಖಾತರಿಪಡಿಸಿಕೊಳ್ಳಬಹುದಾದ ಮೂಲಭೂತ ‘ಪ್ರಜಾಪ್ರಭುತ್ವ ತತ್ವಗಳಿಗೆ’ ಅನುಗುಣವಾಗಿರುವುದಿಲ್ಲ. ಈ ಪದ್ಧತಿಯು ಮತದಾರನಿಗೆ ತನ್ನ ಮತ ಚಲಾವಣೆಗೆ ಮುಂಚೆ ಚೀಟಿಯನ್ನು ಪರಿಶೀಲಿಸಲು ಅವಕಾಶ ನೀಡುವುದಿಲ್ಲ. ಕದಿಯುವುದು, ತಿರುಚುವುದು ಮತ್ತು ನಕಲಿ ಮತದಾನ ಸಾಧ್ಯತೆಗಳ ವಿರುದ್ಧ ಇದು ಯಾವುದೇ ಖಾತರಿಯನ್ನು ನೀಡುವುದಿಲ್ಲ.
ಆದ್ದರಿಂದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಪರಿಶೀಲನಾ ಅವಕಾಶವಿಲ್ಲದ ಪ್ರಸಕ್ತ EVM/VVPAT ಪದ್ಧತಿ ಪ್ರಜಾಸತ್ತಾತ್ಮಕ ಚುನಾವಣೆಗಳಿಗೆ ಆನರ್ಹವಾಗಿದೆ ಎಂಬ ಪ್ರಸ್ತಾಪಗಳನ್ನು ಇದು ಒಳಗೊಂಡಿತ್ತು.ಆದರೆ, ಭಾರತ ಚುನಾವಣಾ ಆಯೋಗವು ಈ ವರದಿ ಮತ್ತು ಅದರ ಪ್ರಸ್ತಾವಗಳಿಗೆ ಪ್ರತಿಕ್ರಿಯಿಸುವುದಿರಲಿ ಅದಕ್ಕೆ ಅಧಿಕೃತ ಸ್ವೀಕೃತಿಯನ್ನು ಸಹ ನೀಡಲಿಲ್ಲ. ಭಾರತ ಚುನಾವಣಾ ಆಯೋಗದಿಂದ ಯಾವುದೇ ಸರಿಯಾದ ಉತ್ತರವಾಗಲೀ,ಪ್ರತಿಕ್ರಿಯೆ ಆಗಲೀ ಬಾರದ ಕಾರಣ ಬಳಿಕ 2022ರ ಮೇ 2ರಂದು 112 ತಂತ್ರಜ್ಞರು, ಶೈಕ್ಷಣಿಕ ಪರಿಣಿತರು ತ್ತು ಹಿರಿಯ ನಾಗರಿಕ ಸೇವಾ ಅಧಿಕಾರಿಗಳ ಸಹಿಗಳನ್ನೊಳಗೊಂಡ ಮನವಿಯೊಂದನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಯಿತು. ಈ ಮನವಿಪತ್ರ ಭಾರತದ ಜನತೆ ತಿಳಿಯಲು ಎಲ್ಲ ಹಕ್ಕುಗಳನ್ನು ಹೊಂದಿರುವ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಮೂಲಾಧಾರವಾದ ಮತ್ತು ನಿರ್ಣಾಯಕವಾದ 17 ಪ್ರಸ್ತಾವಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ : ಬಿಜೆಪಿ ವಿರುದ್ಧ ಮತ ಚಲಾಯಿಸಲು ಕಟ್ಟಡ ಕಾರ್ಮಿಕರ ನಿರ್ಧಾರ
ಕೆಲವು ತಿಂಗಳುಗಳ ಕಾಯುವಿಕೆಯ ನಂತರ 22-11-2022 ರಂದು ಚುನಾವಣಾ ಆಯೋಗಕ್ಕೆ RTI ಕಾಯ್ದೆ ಅಡಿಯಲ್ಲಿ ಈ ಮನವಿ ಬಗ್ಗೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮಾಹಿತಿಯನ್ನು ಕೋರಿ ಭಾರತ ಚುನಾವಣಾ ಆಯೋಗಕ್ಕೆ ಅರ್ಜಿಯೊಂದನ್ನು ಸಲ್ಲಿಸಲಾಯಿತು. ಕಾನೂನು ಬಾಧ್ಯತೆಯಿದ್ದರೂ ಚುನಾವಣಾ ಆಯೋಗ ಈ ಅರ್ಜಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ನಿಯಮಾನಸಾರ ಕಾಲಮಿತಿಯ ಬಳಿಕ 27-12-2022ರಂದು ಪ್ರಥಮ ಮೇಲ್ಮನವಿಯನ್ನು ಸಲ್ಲಿಸಲಾಯಿತು. ಆಯೋಗ ಈ ಮೇಲ್ಮನವಿಯನ್ನೂ ನಿರ್ಲಕ್ಷಿಸಿ ಪ್ರತಿಸ್ಪಂದಿಸಲಿಲ್ಲ.
ಇದರಿಂದಾಗಿ 01-03-2023ರಂದು ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ಎರಡನೆಯ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯವಾಯಿತು. ಒಂದು ವರ್ಷಕ್ಕೂ ಹೆಚ್ಚು ವಿಳಂಬಬಾಗಿದ್ದರಿಂದ ಇದೇ ವರ್ಷ 2024 ರ ಮಾರ್ಚ್ 19ರಂದು ಪ್ರಧಾನ ಮಾಹಿತಿ ಆಯುಕ್ತರ ಮುಂದೆ ಈ ವಿಷಯ ವಿಚಾರಣೆಗೆ ಬಂದಿತು. ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ CPIO ಮಂಡಿಸಿದ ಉತ್ತರದಿಂದ ಸಂಪೂರ್ಣವಾಗಿ ಅಸಮಾಧಾನಗೊಂಡ ಕೇಂದ್ರೀಯ ಮಾಹಿತಿ ಆಯೋಗವು ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿ ವಿಚಾರಣೆಯ ದಿನದಿಂದ 30 ದಿನಗಳೊಳಗೆ ಮಾಹಿತಿಯನ್ನು ಸಲ್ಲಿಸುವಂತೆ ನಿರ್ದೇಶಿಸಿತು.
ಭಾರತ ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ EVM/VVPAT ಮತದಾನ ಮತ್ತು ಮತಎಣಿಕೆಗೆ ಸಂಬಂಧಿಸಿದ ನಿರ್ಣಾಯಕ ಮತ್ತು ಮಹತ್ವಪೂರ್ಣ ಮಾಹಿತಿಯನ್ನು ಸಾರ್ವಜನಿಕ ಪರಿಧಿಯಿಂದ ಮುಚ್ಚಿಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಮ್ಮನ್ನು ನಾವು ಆಳಿಕೊಳ್ಳಲು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಏಕೈಕ ಮಾರ್ಗವೆಂದರೆ,ಅದು ಚುನಾವಣಾ ಪ್ರಕ್ರಿಯೆ. ಆದ್ದರಿಂದ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು.ಅಲ್ಲದೇ ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಅನುಗುಣವಾಗಿ ನಡೆಯಬೇಕೆಂಬುದು ಅತ್ಯವಶ್ಯಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೂ ಆಗಿರುವ “ಎಲೆಕ್ಷನ್ ಮಾನಿಟರಿಂಗ್ ಆನ್” ರೋಲ್ ಆಫ್ ಫ್ರೀ ಎಂಡ್ ಫ್ರೀ ಎಲೆಕ್ಷನ್ಸ್ ಎ ಡೆಮಾಕ್ರಸಿ” ಇದರ ಸಂಪನ್ಮೂಲ ವ್ಯಕ್ತಿ ಮೆಹಮೂದ್ ಪ್ರಚಾ ಸ್ಪಷ್ಟಪಡಿಸಿದ್ದಾರೆ.