ಬೆಂಗಳೂರು ಗ್ರಾ/ರಾಯಚೂರು: ಇತ್ತೀಚೆಗೆ ಆಹಾರ ಸೇವಿಸಿ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಬೆಂಗಳೂರು ಗ್ರಾಮಾಂತರ ತಾಲೂಕಿನಲ್ಲಿ ಇಲಿ ಬಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥರಾದರೆ, ಇತ್ತ ರಾಯಚೂರಿನಲ್ಲಿ ಫುಡ್ ಪಾಯಿಸನ್‌ನಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಅತ್ತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಎಸ್.ವ್ಯಾಸ ಯೂನಿವರ್ಸಿಟಿ(S-VYASA UNIVERSITY)ಯಲ್ಲಿ ಇಲಿ ಬಿದ್ದಿದ್ದ ಪಲ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ವಾಂತಿ ಮಾಡಿದ ಘಟನೆ ನಡೆದಿದೆ. ಜೂನ್ 5 ರ ರಾತ್ರಿ ಕಾಲೇಜು ಹಾಸ್ಟೇಲಿನಲ್ಲಿ ಊಟ ಸೇವಿಸದ ತಕ್ಷಣ ಕೆಲ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಊಟದ ಪಾತ್ರೆಯನ್ನು ಪರಿಶೀಲಿಸಿದಾಗ ಅದರಲ್ಲಿ ಇಲಿ ಸತ್ತುಬಿದ್ದಿದ್ದು ಕಂಡುಬಂದಿದೆ. ಅತ್ತ
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳು – ಡಿಕೆಶಿ ಆರೋಪ
ಪಲ್ಯದಲ್ಲಿ ಇಲಿ ಬಿದ್ದಿದ್ದನ್ನ ಕಂಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಇನ್ನು ಮುಂದೆ ಈ ರೀತಿಯ ತಪ್ಪುಗಳ ಆಗದಂತೆ ನೋಡಿಕೊಳ್ಳುವುದಾಗಿ ಕಾಲೇಜು ಆಡಳಿತ ಮಂಡಳಿ ಮಾತುನೀಡಿ ವಿದ್ಯಾರ್ಥಿಗಳ ಮನವೊಲಿಸಿದೆ. ಇದಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತರಗತಿಗೆ ಹಾಜರಾಗಿದ್ದಾರೆ.
ಇನ್ನು ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಲೇಡಿಸ್ ಹಾಸ್ಟೆಲ್‌ನಲ್ಲಿ ಫುಡ್ ಪಾಯಿಸನ್‌ನಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ನಡೆದಿದೆ. ಇದೀಗ ಐದು ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜೆ ತಿಂದ ಪಾನಿ ಪೂರಿ, ರಾತ್ರಿ ಊಟ ಎಗ್ ಕರಿ, ರೈಸ್ನಿಂದ ಒಟ್ಟು 95 ವಿದ್ಯಾರ್ಥಿನಿಯರಲ್ಲಿ 20 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿತ್ತು. ಸದ್ಯ ವಿದ್ಯಾರ್ಥಿನಿಯರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ನೋಡಿ: ಲೋಕಮತ 2024 | ಐದು ರಾಜ್ಯಗಳಲ್ಲಿ ನಡೆಯದ ಬಿಜೆಪಿ ಆಟ | ನಾಯ್ಡು, ನಿತೀಶ್ ಕಿಂಗ್‌ಮೇಕರ್ Janashakthi Media