ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಾಜ್ಞಾನ ಮತ್ತು ಜೈವಿಕ ತಂತ್ರಾಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಏಪ್ರಿಲ್ 3 ರಂದು ಕಲಬುರಗಿ ನಗರದ ಟೌನ್ ಹಾಲ್ ನಲ್ಲಿ ಇ-ಖಾತಾ ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಯ್ದ ಆಸ್ತಿ ಮಾಲೀಕರಿಗೆ ಇ-ಖಾತಾ ಪತ್ರ ವಿತರಣೆ ಮಾಡಲಿದ್ದಾರೆ.
ಇದನ್ನು ಓದಿ :-ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ಇಬ್ಬರ ಬಂಧನ
ಸರ್ಕಾರ ಇತ್ತೀಚೆಗೆ ಅನಧಿಕೃತ ಆಸ್ತಿಗಳನ್ನು ಸಾರ್ವಜನಿಕರು ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಕೊಂಡದಲ್ಲಿ ಅಂತಹ ಆಸ್ತಿಗಳಿಗೆ ಬಿ-ಖಾತಾ ನೀಡಲು ಆದೇಶಿಸಿದೆ.
ಇನ್ನು ಆಸ್ತಿಯ ‘ಎ’ ಖಾತಾ ಮತ್ತು ‘ಬಿ’ ಖಾತಾ ಪಡೆಯಲು ಅನುಕೂಲವಾಗುವಂತೆ ಏಪ್ರಿಲ್ 3 ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಟೌನ್ ಹಾಲ್ (ಇಂದಿರಾ ಸ್ಮಾರಕ ಭವನ)
ಇದನ್ನು ಓದಿ :-ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ಸಂಚಿನ ಮಾಹಿತಿಯ ಆಡಿಯೋ ಬಿಡುಗಡೆ
ಇಲ್ಲಿ ವಿಶೇಷ ಅಭಿಯಾನ ಆಯೋಜಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಪ್ರತಿ ನಗರ ಸ್ಥಳೀಯ ಸಂಸ್ಥೆಯ ಮಳಿಗೆ ಇಲ್ಲಿ ತೆರೆಯಲಿದ್ದು, ಖಾತಾಗೆ ಅರ್ಜಿ ಸ್ವೀಕರಿಸಲಾಗುತ್ತಿದೆ.
ಸಾರ್ವಜನಿಕರು ‘ಎ’ ಮತ್ತು ‘ಬಿ’ ಖಾತಾಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ ಎಂದು ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ್ ದೌಲಾ ತಿಳಿಸಿದ್ದಾರೆ.