ಮಂಗಳೂರು: ಕೊರೊನಾ ಮತ್ತು ಲಾಕ್‌ಡೌನ್ ನ ಈ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಅಭಾವವಿರುವ ಹಿನ್ನಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕಾರ್ಯಕರ್ತರು ನಗರದ ವಿವಿಧ ಆಸ್ಪತ್ರೆಯ ರಕ್ತನಿಧಿಯಲ್ಲಿ ನಿರಂತರವಾಗಿ ರಕ್ತದಾನವನ್ನು ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ರಕ್ತನಿಧಿ ಬ್ಯಾಂಕ್ ನಲ್ಲಿ ಡಿವೈಎಫ್ಐ ಕೋವಿಡ್ ಸಹಾಯವಾಣಿ ನೇತೃತ್ವದಲ್ಲಿ ವಿಟ್ಲ ಭಾಗದ ಡಿವೈಎಫ್ಐ ಕಾರ್ಯಕರ್ತರು ಸಾಮೂಹಿಕವಾಗಿ ರಕ್ತದಾನ ಮಾಡಿದರು.
ಈ ವೇಳೆ ವೆನ್ಲಾಕ್ ಆಸ್ಪತ್ರೆ ವೈದ್ಯರಾದ ಡಾ ಶರತ್, ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಬಂಟ್ವಾಳ ವಲಯ ಕಾರ್ಯದರ್ಶಿ ತುಳಸಿದಾಸ್, ವಿಟ್ಲ ಪ್ರದೇಶದ ಮುಖಂಡರಾದ ನುಜಮ್ ಅಳಿಕೆ, ಜಮೀಲ್, ಸಲೀಂ ಮಲಿಕ್, ಸಫ್ವಾನ್ ಮುಂತಾದವರು ಉಪಸ್ಥಿತರಿದ್ದರು.