Mahisha Dasara| ಪೊಲೀಸ್‌ ಭದ್ರತೆಯಲ್ಲಿ ಮಹಿಷ ದಸರಾ; ನಿಷೇದಾಜ್ಞೆ ಜಾರಿ

ಮೈಸೂರು: ಇಲ್ಲಿನ ಪುರಭವನದ ಆವರಣದಲ್ಲಿ ಮಹಿಷ ದಸರಾ ಕಾರ್ಯಕ್ರಮ ಪೊಲೀಸ್‌ ಭದ್ರತೆಯಲ್ಲಿ ಆರಂಭವಾಗಿದೆ. ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ, ನಗರದಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಪುರಭವನದ ಆವರಣದಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ. ಭದ್ರತೆಯಲ್ಲಿ 

ಇದನ್ನೂ ಓದಿ:ಮಹಿಷಾ ದಸರಾ ಆಚರಣೆ : ಸಂವಿಧಾನದ ರಕ್ಷಕರೇ ಭಕ್ಷರಾಗಿದ್ದಾರೆಂದು ಜ್ಞಾನಪ್ರಕಾಶ ಸ್ವಾಮೀಜಿ ಕಿಡಿ

ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ:

ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು, ಮೆರವಣಿಗೆ ನಡೆಸಲು ಅವಕಾಶವನ್ನು ನೀಡಿಲ್ಲ. ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇತ್ತ ಪುರಭವನದ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ನೀಲಿ ಪಟ್ಟಿ ಧರಿಸಿಕೊಂಡು ಅವರು ಭಾಗವಹಿಸಿದ್ದಾರೆ. ಜೈ ಭೀಮ್‌ ಘೋಷಣೆಗೂ ಮೊಳಗುತ್ತಿವೆ. ಮಹಿಷಾಸುರನಿಗೂ ಜೈಕಾರ ಮೊಳಗುತ್ತಿವೆ. ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ ಎಂಬ ಫಲಕವನ್ನೂ ಹಾಕಲಾಗಿದೆ.

ಮಹಿಷಾಸುರನಿಗೆ ಪುಷ್ಪಾರ್ಚನೆ ಹಾಗೂ ದಮ್ಮದೀಕ್ಷೆ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಬುದ್ಧ, ಬಸವ ಹಾಗೂ ಮಹಿಷಾಸುರನ ಚಿಕ್ಕ ಪ್ರತಿಮೆಗಳಿಗೆ ಪುಷ್ಪಾರ್ಚನೆ ನೆರವೇರಲಿದೆ. ಮುಂಜಾಗ್ರತಾ ಕ್ರಮವಾಗಿ ಪುರಭವನದ ಸುತ್ತಲೂ ಪೊಲೀಸ್‌ ಪಹರೆ ಹಾಕಲಾಗಿದೆ.

ಇದನ್ನೂ ಓದಿ:ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ ಮತ್ತು ಚಾರಿತ್ರಿಕ ವಂಚನೆ

ಪೊಲೀಸ್‌ ಕಮೀಷನರ್‌ ಹೇಳಿದ್ದೇನು?

ಮಹಿಷ ದಸರಾ ವಿಚಾರದಲ್ಲಿ ಏನಾದರೂ ಗೊಂದಲ ನಿರ್ಮಾಣವಾಗಬಹುದು ಎಂಬ ಕಾರಣಕ್ಕಾಗಿ ನಗರದಾದ್ಯಾಂತ ನಿಷೇದಾಜ್ಞೆ ವಿಧಿಸಲಾಗುವುದು ಎಂದು ಪೊಲೀಸ್‌ ಕಮೀಷನರ್‌ ರಮೇಶ್‌ ಬಾನೋತ್‌ ಆದೇಶ ಹೊರಡಿಸಿದ್ದರು. ಇದರಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ನಾಲ್ಕು ರಸ್ತೆಗಳಲ್ಲಿ ಕಟ್ಟೇಚ್ಚರ ವಹಿಸಲಾಗುವುದ, ಆದರೆ, ಭಕ್ತರ ಪ್ರವೇಶಕ್ಕೆ ನಿರ್ಬಂಧವಿರುವುದಿಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ಹಾಕಿರುವ ನಿಷೇದಾಜ್ಞೆ ಮದುವೆ, ಸಭೆ, ಸಮಾರಂಭ, ಶಾಲಾ-ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಕಾನೂನು ಮತ್ತು ಸುವ್ಯವಸ್ಥೆ ಕೆಡಿಸಿದರೆ ನಿರ್ಧಾಕ್ಷಿಣ ಕ್ರಮ ಕೈಗೊಳ್ಳವುದಾಗಿ ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ನೋಡಿ:ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ ಚಟುವಟಿಕೆ ನಿಲ್ಲಲಿ – ಸಿಯುಕೆಗೆ ಮುತ್ತಿಗೆ

Donate Janashakthi Media

Leave a Reply

Your email address will not be published. Required fields are marked *