ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸುರಿದ ಮಳೆ ಆರ್ಭಟಕ್ಕೆ ರೈಲು ಹಳಿಗಳ ಅಡಿಯಲ್ಲಿರುವ ಜಲ್ಲಿಕಲ್ಲುಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ರೈಲು ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಆರ್ಭಟ
ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಮಳೆ ಅಬ್ಬರಕ್ಕೆ ರೈಲ್ವೆ ಟ್ರ್ಯಾಕ್ ಅಡಿಯಲ್ಲಿರುವ ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಪರಿಣಾಮ ತಾಳಗುಪ್ಪ-ಬೆಂಗಳೂರು, ತಾಳಗುಪ್ಪ-ಮೈಸೂರು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.
ಇದನ್ನೂ ಓದಿ: ಮತೀಯವಾದಿಗಳ ವಿರುದ್ಧ ಹೋರಾಡಿ ಗೆದ್ದ ಮೊಹಮದ್ ಯೂಸುಫ್ ತರಿಗಾಮಿ
ಕಂಸಿ-ಆನಂದಪುರ ರೈಲ್ವೆ ಮಾರ್ಗದಲ್ಲಿ ಅಡಚಣಿಯುಂಟಾಗಿದ್ದು, ಸಡೂರು ಬಳಿ ರೈಲ್ವೆ ಟ್ರ್ಯಾಕ್ ನಲ್ಲಿದ್ದ ಜಲ್ಲಿ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ ಮ್ಯಾನ್ ಈ ಭಾಗದ ಹಳಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಜಲ್ಲಿ ಕೊಚ್ಚಿ ಹೋಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ.
ರೈಲು ಹಳಿಗಳ ಜಲ್ಲಿ ಕೊಚ್ಚಿ ಹೋಗಿರುವುದರಿಂದ ತಾಳಗುಪ್ಪದಿಂದ ಬೆಂಗಳೂರು-ಮೈಸೂರು ಹೊರಟಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆ 5:15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಇಂಟರ್ ಸಿಟಿ ರೈಲು ಸಾಗರ-ಆನಂದಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಇಂಜಿನಿಯರ್ ತಂಡ, ರೈಲ್ವೆ ಪೊಲೀಸರು ಟ್ರ್ಯಾಕ್ ರಿಪೇರಿ ಕೆಲಸ ಮಾಡಿಸುತ್ತಿದ್ದಾರೆ.
ಇದನ್ನೂ ನೋಡಿ: ಜಾತಿಗಣತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : Janashakthi Media