ಒಬಿಸಿ ಮೀಸಲಾತಿ: ಕೇಂದ್ರದ ಸಂದೇಹಾಸ್ಪದ ನಿಲುವು ರಾಜ್ಯಗಳ ಅಧಿಕಾರಗಳ ಮೇಲೆ ಮತ್ತೊಂದು ಗದಾಪ್ರಹಾರ

ಪ್ರಕಾಶ್‌ ಕಾರಟ್

ಪ್ರಕಾಶ್‌ ಕಾರಟ್

ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಕ್ರಮದಿಂದ ತಪ್ಪಿಸಿಕೊಳ್ಳಲು ಪ್ರಕಟಿಸಿರುವ ಒಬಿಸಿ ಮೀಸಲಾತಿಯನ್ನು ಮೋದಿಯವರು ತಮ್ಮ ಸರಕಾರದ “ಮೈಲಿಗಲ್ಲಾಗುವ ನಿರ್ಧಾರʼʼ ಎಂದು ವರ್ಣಿಸಿದ್ದಾರೆ. ಒಬಿಸಿ ಮೀಸಲಾತಿ ಕುರಿತ ಮೋದಿ ಸರ್ಕಾರದ ನಿರ್ಲಕ್ಷ್ಯದ ಹಾಗೂ ಪಕ್ಷಪಾತಿ ಧೋರಣೆಯು ಇನ್ನೊಂದು ಸಂಬಂಧಿತ ಪ್ರಕರಣದಲ್ಲಿಯೂ ಬಯಲಾಗಿದೆ. ಅದರಿಂದಾಗಿ ರಾಜ್ಯಗಳು ಒಂದು ಪ್ರಮುಖ ಹಕ್ಕಿನಿಂದ ವಂಚಿತವಾಗಿದ್ದು ಅದನ್ನು ಮರಳಿಸಲು ತಕ್ಷಣವೇ ಸರಿಪಡಿಕೆ ಕ್ರಮ ಅಗತ್ಯವಾಗಿದೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) 27% ಮೀಸಲಾತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ(ಇಡಬ್ಲ್ಯುಎಸ್) 10% ಮೀಸಲಾತಿ ಒದಗಿಸುವುದಾಗಿ ನರೇಂದ್ರ ಮೋದಿ ಸರ್ಕಾರ ಪ್ರಕಟಿಸಿದೆ. ಅದು ಒಬಿಸಿಗಳ ಕಲ್ಯಾಣದ ಬಗ್ಗೆ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಮತ್ತದರ ಬೆಂಬಲಿಗರು ಹೊಗಳಿದ್ದಾರೆ. ಇದು ತಮ್ಮ ಸರ್ಕಾರದ “ಮೈಲಿಗಲ್ಲಾಗುವ ನಿರ್ಧಾರ” ಎಂದು ಮೋದಿ ವರ್ಣಿಸಿದ್ದಾರೆ.

ಆದರೆ, ಈ ವಿಚಾರದಲ್ಲಿ ಸರ್ಕಾರದ ದಾಖಲೆ ಹೇಳುವ ಸಂಗತಿಯೇ ಬೇರೆ. ವಾಸ್ತವವಾಗಿ, ಮದ್ರಾಸ್ ಹೈಕೋರ್ಟ್ 2020 ಜುಲೈನಲ್ಲಿ ತಾನು ನೀಡಿದ್ದ ತೀರ್ಪನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದರಿಂದ ನ್ಯಾಯಾಂಗ ನಿಂದನೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರಿಂದ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಇದನ್ನು ಪ್ರಕಟಿಸಿದೆ.

ವಾಸ್ತವ ಸಂಗತಿಗಳು

ಕೆಲವು ವಾಸ್ತವಾಂಶಗಳು ಹೀಗಿವೆ:

ಎಲ್ಲ ವೈದ್ಯಕೀಯ ಕಾಲೇಜ್‌ಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ(ನೀಟ್) ನಡೆಸಬೇಕೆಂದು ಸುಪ್ರೀಂ ಕೋರ್ಟ್ 2016ರಲ್ಲಿ ಆದೇಶಿಸಿತ್ತು. ನೀಟ್ ಅನ್ವಯ ನಡೆಸಲಾದ ಪ್ರವೇಶಾತಿಯಲ್ಲಿ 15% ಪದವಿ ಸೀಟ್ ಹಾಗೂ 50% ಸ್ನಾತಕೋತ್ತರ ಸೀಟ್‌ಗಳನ್ನು ಅಖಿಲ-ಭಾರತ ಕೋಟಾಗೆ ರಾಜ್ಯಗಳು ಬಿಟ್ಟುಕೊಟ್ಟವು. ಈ ಸೀಟುಗಳನ್ನು ಕೇಂದ್ರೀಯ ಪಟ್ಟಿ ಮೂಲಕ ಭರ್ತಿ ಮಾಡಲಾಗಿತ್ತು. ಅದಕ್ಕೂ ಮುನ್ನ 2007ರಲ್ಲಿ, ಅಖಿಲ ಭಾರತ ಕೋಟಾದಡಿ ಶೇಕಡ 15 ಸೀಟ್‌ಗಳನ್ನು ಪರಿಶಿಷ್ಟ ಜಾತಿ ಹಾಗೂ ಶೇಕಡ 7.5 ಸೀಟ್‌ಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಬೇಕೆಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಗೆ ಅವಕಾಶವಿರಲಿಲ್ಲ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ 27 ಪ್ರತಶತ ಮೀಸಲಾತಿ ಕಲ್ಪಿಸಬೇಕೆಂಬ ಕೇಂದ್ರೀಯ ಕಾನೂನನ್ನು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಸರ್ಕಾರ ಅಧಿಕಾರದಲ್ಲಿದ್ದಾಗ ಅಂಗೀಕರಿಸಿದ್ದರೂ ಒಬಿಸಿಗೆ ಆ ಮೀಸಲಾತಿ ನೀಡಿರಲಿಲ್ಲ.

ಹೀಗೆ, ಕೇಂದ್ರ ವ್ಯಾಪ್ತಿಯಲ್ಲಿ ಬರುವ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗೆ ಮೀಸಲಾತಿ ಕಲ್ಪಿಸದಿರುವುದು ತಾರತಮ್ಯವಾಗುತ್ತದೆ. ಆದರೆ, ನೀಟ್ ವ್ಯವಸ್ಥೆಯನ್ನು ಪರಿಚಯಿಸಿದಾಗಿನಿಂದ ಮೆಡಿಕಲ್ ಮತ್ತು ಡೆಂಟಲ್ ಕಾಲೇಜ್ ಸೀಟ್‌ಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ಒದಗಿಸಲು ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ತಮಿಳುನಾಡಿನಲ್ಲಿ ಕೋರ್ಟಿಗೆ ಮೊರೆ: ನ್ಯಾಯಾಂಗ ನಿಂದನೆ ಪ್ರಕರಣ

ಅಖಿಲ ಭಾರತ ಕೋಟಾಕ್ಕೆ ತಮಿಳುನಾಡು ಸರ್ಕಾರ ಬಿಟ್ಟುಕೊಟ್ಟಿದ್ದ ಸೀಟ್‌ಗಳಲ್ಲಿ ಒಬಿಸಿಗಳಿಗೆ 50% ಮೀಸಲಾತಿ ಒದಗಿಸುವಂತೆ ನಿರ್ದೇಶನ ಕೋರಿ ಡಿಎಂಕೆ ಮತ್ತು ಸಿಪಿಐ(ಎಂ) ಸಹಿತ ತಮಿಳುನಾಡಿನ ಪ್ರಮಖ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು. ಈ ವಿಚಾರವನ್ನು ಕೈಗೆತ್ತಿಕೊಳ್ಳಲು ಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ ಇದರ ವಿಚಾರಣೆ ನಡೆಸಬಹುದು ಎಂದಿತ್ತು. 2020 ಜುಲೈನಲ್ಲಿ, ಒಬಿಸಿ ಮೀಸಲಾತಿಯ ಕಾನೂನು ಸಮ್ಮತತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಅಕಾಡೆಮಿಕ್ ವರ್ಷದಿಂದಲೇ ಅದರ ಅನುಷ್ಠಾನಕ್ಕೆ ವಿಧಿ-ವಿಧಾನಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಈ ವರ್ಷದ ಯೋಜನೆಯಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಲಿಲ್ಲ.

“ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಯನ್ನು ತಮಿಳುನಾಡಿನಲ್ಲಿ 2021-22ರ ಶೈಕ್ಷಣಿಕ ವರ್ಷದಲ್ಲಿ ಜಾರಿ ಮಾಡದಿರುವ ಕೇಂದ್ರ ಸರ್ಕಾರದ ಪ್ರಯತ್ನವು 2020 ಜುಲೈ 27ರ ಹೈಕೋರ್ಟ್ ಆದೇಶವನ್ನು ಮೊಂಡುತನದಿಂದ ಹೀನಾಯಗೊಳಿಸುವಂತೆ ಕಾಣುತ್ತಿದೆ” ಎಂದು ಇದೇ ಜುಲೈ 19ರಂದು ಹೈಕೋರ್ಟ್ ಕಟುವಾಗಿ ಹೇಳಿತ್ತು. ಕೋರ್ಟ್ ಈ ಖಾರವಾದ ಟಿಪ್ಪಣಿಯ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದ ಭೀತಿಯಿಂದ ಕೇಂದ್ರ ಸರ್ಕಾರ ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಯನ್ನು ಪ್ರಕಟಿಸಿದೆ.

ಈ ಹಿನ್ನೆಲೆಯಲ್ಲಿ ಡಿಎಂಕೆ ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು. “ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಯನ್ನು ತಮಿಳುನಾಡಿನಲ್ಲಿ 2021-22ರ ಶೈಕ್ಷಣಿಕ ವರ್ಷದಲ್ಲಿ ಜಾರಿ ಮಾಡದಿರುವ ಕೇಂದ್ರ ಸರ್ಕಾರದ ಪ್ರಯತ್ನವು 2020 ಜುಲೈ 27ರ ಹೈಕೋರ್ಟ್ ಆದೇಶವನ್ನು ಮೊಂಡುತನದಿಂದ ಹೀನಾಯಗೊಳಿಸುವಂತೆ ಕಾಣುತ್ತಿದೆ” ಎಂದು ಇದೇ ಜುಲೈ 19ರಂದು ಹೈಕೋರ್ಟ್ ಕಟುವಾಗಿ ಹೇಳಿತ್ತು. ಕೋರ್ಟಿನ ಈ ಖಾರವಾದ ಟಿಪ್ಪಣಿಯ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದ ಭೀತಿಯಿಂದ ಕೇಂದ್ರ ಸರ್ಕಾರ ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿಯನ್ನು ಪ್ರಕಟಿಸಿದೆ.

ಒಬಿಸಿ ಮೀಸಲಾತಿ ಕುರಿತ ಮೋದಿ ಸರ್ಕಾರದ ನಿರ್ಲಕ್ಷ್ಯದ ಹಾಗೂ ಪಕ್ಷಪಾತಿ ಧೋರಣೆಯು ಇನ್ನೊಂದು ಸಂಬಂಧಿತ ಪ್ರಕರಣದಲ್ಲಿಯೂ ಬಯಲಾಗಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾಮಾನ ಕಲ್ಪಿಸಲು 2018 ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿಯನ್ನು ಮೋದಿ ಸರ್ಕಾರ ಅಂಗೀಕರಿಸಿತ್ತು. ಒಂದು ವರ್ಗವನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ (ಎಸ್‌ಇಬಿಸಿ) ಎಂದು ಅಧಿಸೂಚಿಸುವ ಅಧಿಕಾರ ರಾಷ್ಟ್ರಪತಿಗೆ ಇರುತ್ತದೆ ಎಂಬ ನಿಯಮವನ್ನು ಅದರಲ್ಲಿ ಸೇರಿಸಲಾಗಿತ್ತು. ಇದು ಒಬಿಸಿಗಳನ್ನು ಗುರುತಿಸುವ ರಾಜ್ಯಗಳ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆಗ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ಹೇಳಿದ್ದರು. ಆದರೆ ಇಂಥ ಆಕ್ಷೇಪಗಳನ್ನು ಸರ್ಕಾರ ತಳ್ಳಿ ಹಾಕಿತ್ತು. ಆಗಿನ ವರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಕೇಂದ್ರ ಪಟ್ಟಿಗೆ ಒಬಿಸಿಗಳನ್ನು ಗುರುತಿಸುತ್ತಿತ್ತು. ರಾಜ್ಯ ಸರ್ಕಾರಗಳು ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳ ಮೂಲಕ ರಾಜ್ಯ ಪಟ್ಟಿಗೆ ಒಬಿಸಿಗಳನ್ನು ಗುರುತಿಸುತ್ತಿದ್ದವು.

ಸಂವಿಧಾನ ತಿದ್ದುಪಡಿ ಅಗತ್ಯ

ಇದೇ ವರ್ಷ ಮೇ ತಿಂಗಳಲ್ಲಿ ಈ ತಿದ್ದುಪಡಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನದ 102ನೇ ತಿದ್ದುಪಡಿ ಒಬಿಸಿಗಳು ಯಾರು ಎಂಬುದನ್ನು ನಿರ್ಣಯಿಸುವ ಅಧಿಕಾರ ರಾಷ್ಟ್ರಪತಿ, ಅಂದರೆ ಕೇಂದ್ರ ಸರ್ಕಾರದಲ್ಲಿ ಇರುತ್ತದೆ ಎಂದು ವ್ಯಾಖ್ಯಾನಿಸಿತ್ತು. ಈ ತಿದ್ದುಪಡಿ ಮೂಲಕ ರಾಜ್ಯಗಳು ತಮ್ಮ ಹಕ್ಕಿನಿಂದ ವಂಚಿತವಾಗಿವೆ ಎಂದು ಸುಪ್ರೀಂ ಕೋರ್ಟ್ ನ ಈ ತೀರ್ಪು ಹೇಳುತ್ತದೆ. ರಾಜ್ಯಗಳು ರಾಷ್ಟ್ರಪತಿ ಅಥವಾ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲಹೆ ನೀಡಬಹುದು ಅಷ್ಟೇ.

ರಾಜ್ಯಗಳ ಹಕ್ಕನ್ನು ವಂಚಿಸುವುದು 102ನೇ ಸಂವಿಧಾನ ತಿದ್ದುಪಡಿಯ ಉದ್ದೇಶವಲ್ಲ ಎಂದು ಮೋದಿ ಸರ್ಕಾರ ಹೇಳಿದರೂ ಆಗಿರುವ ಅನಾಹುತವನ್ನು ಸರಿ ಮಾಡಲು ಅದು ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದನ್ನು ಸರಿಪಡಿಸಲು ಸಂವಿಧಾನದ ತಿದ್ದುಪಡಿ ತರುವ ಬದಲು ಅದು ಸುಪ್ರೀಂ ಕೋರ್ಟ್‍ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತು, ಅದನ್ನು ಕೋರ್ಟ್ ತಿರಸ್ಕರಿಸಿದೆ. ಕೋರ್ಟ್‍ಗೆ ಹೋಗುವ ಬದಲು ಸರ್ಕಾರ ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ನೇರವಾಗಿ ಸಂವಿಧಾನ ತಿದ್ದುಪಡಿಯ ದಾರಿಯನ್ನು ಅನುಸರಿಸಬೇಕಿತ್ತು. ಈಗ ಸಮಯವನ್ನು ವ್ಯರ್ಥ ಮಾಡಿದ ನಂತರ ಅಧಿವೇಶನದ ಮಧ್ಯದಲ್ಲಿ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಇದು ರಾಜ್ಯಗಳ ವ್ಯಾಪ್ತಿಯಲ್ಲಿ ಒಬಿಸಿಗಳನ್ನು ನಿರ್ಧರಿಸುವ ರಾಜ್ಯಗಳ ಹಕ್ಕಿನ ಮೇಲೆ ಒಂದು ಗದಾ ಪ್ರಹಾರವಾಗಿದೆ. ರಾಜ್ಯಗಳ ಹಕ್ಕನ್ನು ವಂಚಿಸುವುದು ಸಂವಿಧಾನ ತಿದ್ದುಪಡಿಯ ಉದ್ದೇಶವಲ್ಲ ಎಂದು ಮೋದಿ ಸರ್ಕಾರ ಹೇಳಿದರೂ ಆಗಿರುವ ಅನಾಹುತವನ್ನು ಸರಿ ಮಾಡಲು ಅದು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಿಂದಿನ ತಪ್ಪು-ಹೆಜ್ಜೆಯನ್ನು ಸರಿಪಡಿಸಲು ಸಂವಿಧಾನದ ತಿದ್ದುಪಡಿ ಅಗತ್ಯವಾಗಿದೆ.

ಮೋದಿ ಸರ್ಕಾರ ಹಾಗೆ ಮಾಡುವ ಬದಲು ಸುಪ್ರೀಂ ಕೋರ್ಟ್‍ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು ಅದನ್ನು ಕೋರ್ಟ್ ತಿರಸ್ಕರಿಸಿದೆ. ಕೋರ್ಟ್‍ಗೆ ಹೋಗುವ ಬದಲು ಸರ್ಕಾರ ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ನೇರವಾಗಿ ಸಂವಿಧಾನ ತಿದ್ದುಪಡಿಯ ದಾರಿಯನ್ನು ಅನುಸರಿಸಬೇಕಿತ್ತು. ಆದರೆ ಸಮಯವನ್ನು ವ್ಯರ್ಥ ಮಾಡಿದ ನಂತರ ಅಧಿವೇಶನದ ಮಧ್ಯದಲ್ಲಿ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಸರ್ಕಾರದ ವಿವೇಚನಾ ಶೂನ್ಯ ಕ್ರಮದಿಂದ ರಾಜ್ಯಗಳು ಪ್ರಮುಖ ಹಕ್ಕಿನಿಂದ ವಂಚಿತವಾಗಿದ್ದು ಅದನ್ನು ಮರಳಿಸಲು ಆ ಕ್ರಮವನ್ನು ತಕ್ಷಣವೇ ಸರಿಪಡಿಸಬೇಕಾಗಿದೆ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *