ಕಲಬುರ್ಗಿ : ಕಲಬುರ್ಗಿ ಜೈಲಿನಲ್ಲಿ ಮಾದಕ ವಸ್ತುಗಳಾದಂತಹ ಬೀಡಿ, ಸಿಗರೇಟ್ ಗುಟ್ಕಾ, ಪಾನ್ ಮಸಾಲಗಳಂತಹ ಮಾದಕ ವಸ್ತುಗಳು ಪತ್ತೆಯಾಗಿದ್ದು, ಮುಂದುವರೆದಿರುವ ಕರ್ಮಕಾಂಡದ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ಕಳೆದ ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಇರುವಂತಹ ಕೆಲವು ಕೈದಿಗಳು ಮೊಬೈಲ್ ಬಳಸಿಕೊಂಡು ವಿಡಿಯೋ ಕಾಲ್ ಮಾಡುವುದರ ಮೂಲಕ ಜೈಲಿನಲ್ಲಿ ರಾಜಾರೋಷವಾಗಿ ಎಲ್ಲ ರೀತಿಯ ಅನುಕೂಲಗಳನ್ನು ಪಡೆಯುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಕಲಬುರ್ಗಿ ಕಮಿಷನರ್ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ಮಾಡಲಾಗಿತ್ತು.
ಇದನ್ನು ಓದಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲು
ಇದೀಗ ಜೈಲಿನ ಗೋಡೆಯ ಬಳಿ ಕೆಲವು ಕೈದಿಗಳಿಗೆ ಸಂಬಂಧಪಟ್ಟವರು ಕಾಗದದಲ್ಲಿ ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಪಾನ್ ಮಸಾಲ ಗಳನ್ನು ಉಂಡೆ ಮಾಡಿ ಚೆಂಡಿನ ರೂಪದಲ್ಲಿ ಎಸೆದು ಹೋಗುತ್ತಿರುವ ಆರೋಪ ಕೇಳಿ ಬಂದಿದೆ.ಜೈಲಿನ ಒಳಭಾಗದ ಗೋಡೆಗಳ ಬಳಿ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಪತ್ತೆಯಾಗಿದ್ದು, ಈ ಉಂಡೆಗಳಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.
ಜೈಲು ಸಿಬ್ಬಂದಿ ಒಬ್ಬರು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈ ಚೆಂಡುಗಳನ್ನು ಗಮನಿಸಿದ ಕೂಡಲೆ ಜೈಲಿನ ಅಧೀಕ್ಷಕಿ ಅವರ ಗಮನಕ್ಕೆ ತಂದಿದ್ದಾರೆ. ನಂತರ ಆ ಚೆಂಡಿನ ಆಕಾರದ ಉಂಡೆಗಳನ್ನು ಬಿಡಿಸಿ ನೋಡಿದಾಗ ಗುಟ್ಕಾ, ಬೀಡಿ ಹಾಗೂ ಪಾನ್ ಮಸಾಲಾ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗುತ್ತಿದ್ದಂತೆಯೇ ತಕ್ಷಣ ಫರಹತಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ.
ಇದನ್ನು ನೋಡಿ : ಬಿಗ್‌ಬಾಸ್ ಶೋ ಶೀಘ್ರದಲ್ಲೇ ಅಂತ್ಯ? ಮಾನವ ಹಕ್ಕು ಉಲ್ಲಂಘನೆ! Janashakthi Media