ಮುಡಾ ಹಗರಣ: ಡಾ. ಶಾಲಿನಿ ರಜನೀಶ್‌ಗೆ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮುಡಾ ಹಗರಣದ ಸಂಬಂಧ ನಟೇಶ್ ವಿರುದ್ಧವಾಗಿ ಸಿಎಸ್ ಡಾ. ಶಾಲಿನಿ ರಜನೀಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೆಲ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸಿಎಸ್ ಶಾಲಿನಿ ರಜನೀಶ್ ಅವರನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫೆಬ್ರವರಿ 21ರಂದು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನ ಸೈಬರ್ ಠಾಣೆಯಲ್ಲಿ ವಿಚಾರಣೆ ಮುಗಿಸಿಕೊಂಡು ಬಂದೆ. ವಿಚಾರಣೆ ಸಂದರ್ಭದಲ್ಲಿ ವಿನೋದ್ ಎಂಬಾತ, ಶ್ರೀಮತಿ ಶಾಲಿನಿ ರಜನೀಶ್ ರವರ ಬಗ್ಗೆ ಸುಳ್ಳು ನನಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ, ಆದ್ದರಿಂದ ನನ್ನಿಂದಾಗಿರುವ ತಪ್ಪಿಗಾಗಿ ಶ್ರೀಮತಿ ಶಾಲಿನಿ ರಜನೀಶ್ ರವರಲ್ಲಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ: ಪಿಐಎಲ್‌ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿ – ಸರ್ಕಾರಕ್ಕೆ ಹೈಕೋರ್ಟ್‌

ಅಂದಹಾಗೇ ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮಾಡಿದ್ದರು. ಜೊತೆಗೆ ಶಾಲಿನಿ ರಜನೀಶ್ ವಿರುದ್ಧ ಕೋಟಿ ಕೋಟಿ ಲಂಚ ಪಡೆದಿದ್ದಂತ ಆರೋಪವನ್ನು ಮಾಡಿದ್ದರು.

ಅಲ್ಲದೇ ನಟೇಶ್ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಹಿನ್ನಲೆಯಲ್ಲಿಯೇ ಸಿಸಿಬಿ ಪೊಲೀಸರು ನಿನ್ನೆ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಅವರು ಸಿಎಸ್ ಶಾಲನಿ ರಜನೀಶ್ ಅವರನ್ನು ಸ್ನೇಹಮಯಿ ಕೃಷ್ಣ ಕ್ಷಮೆಯಾಚಿಸಿದ್ದಾರೆ.

ಇದನ್ನೂ ನೋಡಿ: “ಪಶುಗಳು ಮೇವು ತಿನ್ನುವುದಿಲ್ಲವೇ? ಕಾರಣಗಳೇನು?” | ಡಾ. ಎನ್.‌ ಬಿ ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *