ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಯನ್ನು ಖಂಡಿಸಿ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯ ʻʻರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನʼʼಕ್ಕೆ ಎಸ್.ಜಿ. ಸಿದ್ದರಾಮಯ್ಯ ಸೇರಿ ಇತರ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಿಖಿತ ಪತ್ರವನ್ನು ಬರೆದಿರುವ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರು, ರಾಜ್ಯದಲ್ಲಿ ಅಸಂವಿಧಾನಿಕ ದಬ್ಬಾಳೆಗಳು ಆತಂಕ ಹಾಗೂ ಭಯ ಉಂಟಾಗಿದೆ. ಕೋಮುದ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತಾ ಆಟಾಟೋಪ ಮೆರೆಯುತ್ತಾ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳದೆ, ಮೌನ ವಹಿಸಿರುವುದು ಇನ್ನೂ ಹೆಚ್ಚಿನ ಆತಂತ ಉಂಟಾಗಿದೆ. ಇದರಿಂದ ಬೇಸತ್ತು ನಾವು ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ರಾಜೀನಾಮೆ ಒಪ್ಪಿಕೊಂಡು ಕೂಡಲೇ ನಮ್ಮನ್ನು ಕಾರ್ಯಜವಾಬ್ದಾರಿಯಿಂದ ಬಿಡುಗಡೆಗೊಳಿಸಿಸಬೇಕೆಂದು ಎಸ್.ಜಿ.ಸಿದ್ಧರಾಮಯ್ಯ ಅವರೊಂದಿಗೆ, ಡಾ.ಎಚ್.ಎಸ್.ರಾಘವೇಂದ್ರ ರಾವ್, ಡಾ. ಚಂದ್ರಶೇಖರ ನಂಗಲಿ, ಡಾ. ನಟರಾಜ ಬೂದಾಳು ರಾಜೀನಾಮೆಗೆ ಒಪ್ಪಿಗೆ ಸೂಚಿಸಿದ್ದಾರೆ.
ತಮ್ಮ ಕೃತಿ ತೆಗೆದುಹಾಕುವಂತೆ ಮನವಿ : ಈ ಪಠ್ಯ ಕ್ರಮ, ಪರಿಷ್ಕರಣೆ ರೀತಿ ಅಸಂವಿಧಾನಿಕ ಮತ್ತು ಬ್ರಾಹ್ಮಣಿಕರಣ ಎಂದೇಳಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮತ್ತು ಜಿ ರಾಮಕೃಷ್ಣ ಅವರು ಪಠ್ಯದಿಂದ ತಮ್ಮ ಲೇಖನವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಎಸ್ ಜಿ ಸಿದ್ದರಾಮಯ್ಯ ನವರು ತಮ್ಮ ಕವಿತೆಯನ್ನು ಕೈ ಬಿಡುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
9 ನೇ ತರಗತಿಯ ಯಲ್ಲಿ ಸೇರ್ಪಡೆಯಾಗಿರುವ ನನ್ನ ಕವಿತೆಯಾದ ʻ ಮನೆ ಕೆಲಸದ ಹೆಣ್ಣು ಮಗಳುʼ ಕವಿತೆ ಪಠ್ಯವಾಗಿ ಸೇರಿದ್ದು, ಅದನ್ನು ಪಠ್ಯವಾಗಿ ಬೋಧಿಸಲು ನನ್ನ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.