ನವದೆಹಲಿ: 2022 ರಲ್ಲಿ ದೇಶದಾದ್ಯಂತ 6,450 ವರದಕ್ಷಿಣೆ ಸಾವುಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸೋಮವಾರ ಬಿಡುಗಡೆ ಮಾಡಿದ ದತ್ತಾಂಶಗಳು ಹೇಳಿವೆ. ಕಳೆದ ಒಂದು ವರ್ಷದಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ – 1961 ರ ಅಡಿಯಲ್ಲಿ 13,479 ಪ್ರಕರಣಗಳು ದಾಖಲಾಗಿವೆ ಅದು ಉಲ್ಲೇಖಿಸಿದೆ.
ವರದಕ್ಷಿಣೆ ಸಾವುಗಳು ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದರೂ, ಅಂಕಿಅಂಶಗಳು ಇನ್ನೂ ಆತಂಕಕ್ಕೆ ಕಾರಣವಾಗಿವೆ. 2022 ರಲ್ಲಿ ವರದಕ್ಷಿಣೆ ಸಾವಿನ ಸಂಖ್ಯೆಯಲ್ಲಿ 4.5% ಇಳಿಕೆಯಾಗಿದೆ ಮತ್ತು 1961 ರ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ 0.6% ಇಳಿಕೆಯಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
ಇದನ್ನೂ ಓದಿ: ಭಾರತದ 50ಕ್ಕೂ ಹೆಚ್ಚು ಸಂಸ್ಥೆಯ ಕೆಮ್ಮು ಸಿರಪ್ ಕಳಪೆ ಗುಣಮಟ್ಟದ್ದು: ಕೇಂದ್ರ ಸರ್ಕಾರ ವರದಿ
2022 ರಲ್ಲಿ ಉತ್ತರ ಪ್ರದೇಶದಲ್ಲಿ 2,218 ಘಟನೆಗಳೊಂದಿಗೆ ಅತಿ ಹೆಚ್ಚು ವರದಕ್ಷಿಣೆ ಸಾವುಗಳು ಸಂಭವಿಸಿವೆ ಎಂದು ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನದಲ್ಲಿ ಬಿಹಾರ ಇದ್ದು, ಕಳೆದ ವರ್ಷ ಅಲ್ಲಿ 1,057 ಸಾವುಗಳು ಉಂಟಾಗಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (518) ಇದೆ.
ವರದಕ್ಷಿಣೆ ನಿಷೇಧ ಕಾಯಿದೆ-1961 ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಕೂಡಾ ಉತ್ತರ ಪ್ರದೇಶ ಮುಂಚೂಣಿಯಲ್ಲಿದ್ದು, ಅಲ್ಲಿ 4,807 ಪ್ರಕರಣಗಳು ದಾಖಲಾಗಿವೆ. ಎರಡನೇ ಅತಿ ಹೆಚ್ಚು ಪ್ರಕರಣಗಳು ಬಿಹಾರದಲ್ಲಿ (3,580) ದಾಖಲಾಗಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿ ಇದ್ದು, ರಾಜ್ಯದಲ್ಲಿ 2,224 ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: 5 ಕೋಟಿ ವೆಚ್ಚದಲ್ಲಿ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಪೂರ್ಣ | ಸಚಿವ ರಾಮಲಿಂಗಾ ರೆಡ್ಡಿ
ದಕ್ಷಿಣದ ರಾಜ್ಯಗಳಲ್ಲಿ ಒಟ್ಟು ವರದಕ್ಷಿಣೆ ಸಾವುಗಳ ಸಂಖ್ಯೆ 442 ರಷ್ಟಿದ್ದು, ಕರ್ನಾಟಕ (167) ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ತೆಲಂಗಾಣ (137), ತಮಿಳುನಾಡು (29) ಮತ್ತು ಕೇರಳ (11) ಇವೆ. ವರದಕ್ಷಿಣೆ ನಿಷೇಧ ಕಾಯಿದೆ-1961 ರ ಅಡಿಯಲ್ಲಿ ದಾಖಲಾದ ದಕ್ಷಿಣ ರಾಜ್ಯಗಳ ಒಟ್ಟು ಪ್ರಕರಣಗಳ ಸಂಖ್ಯೆ 2,776 ಆಗಿದ್ದು, ಕರ್ನಾಟಕವೊಂದರಲ್ಲೆ 2,224 ಘಟನೆಗಳು ದಾಖಲಾಗಿವೆ. ಆಂಧ್ರಪ್ರದೇಶ (298), ತಮಿಳುನಾಡು (220), ಕೇರಳ (28) ಮತ್ತು ತೆಲಂಗಾಣ (6) ನಂತರದ ಸ್ಥಾನದಲ್ಲಿವೆ.
ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ, ದೂರುಗಳು ನಿಜವಾಗಿದ್ದರೂ ಸಾಕಷ್ಟು ಪುರಾವೆಗಳಿಲ್ಲದ ಕಾರಣ 359 ವರದಕ್ಷಿಣೆ ಸಾವುಗಳನ್ನು ಮುಚ್ಚಲಾಗಿದೆ. ಈ ಮಧ್ಯೆ, ಐದು ಸಾವುಗಳನ್ನು ಬೇರೆ ಏಜೆನ್ಸಿ ಅಥವಾ ರಾಜ್ಯಕ್ಕೆ ವರ್ಗಾಯಿಸಲಾಯಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು 4,148 ಪ್ರಕರಣಗಳನ್ನು ಆರೋಪಪಟ್ಟಿ ಮಾಡಲಾಗಿದೆ.
ವಿಡಿಯೊ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media