NEET-UG ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಲೀಕ್ ವದಂತಿಗಳಿಗೆ ಮರುಳು ಆಗಬೇಡಿ – ಬಿಹಾರ ಪೊಲೀಸರ ಎಚ್ಚರಿಕೆ

ಪಾಟ್ನಾ: ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಶ್ನೆಪತ್ರಿಕೆ ಅಥವಾ ಉತ್ತರಗಳನ್ನು ಒದಗಿಸುವುದಾಗಿ ಹೇಳುವ ವದಂತಿ ಹಾಗೂ ವಂಚನೆ ಕರೆಗಳಿಗೆ ಮರುಳು ಆಗಬಾರದು ಎಂದು ಬಿಹಾರ ಪೊಲೀಸರು ಜೂನ್‌ 9ರಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಮರುಪರೀಕ್ಷೆ

ಬಿಹಾರದ ಆರ್ಥಿಕ ಅಪರಾಧ ಘಟಕ (EOU) ಅಭ್ಯರ್ಥಿಗಳು ಮತ್ತು ಪೋಷಕರು ಇಂತಹ ಸುಳ್ಳು ಮಾಹಿತಿ ಹಾಗೂ ಸೈಬರ್ ವಂಚಕರ ಮಾತಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದೆ. ಜೂನ್ 21ರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಅಥವಾ ಉತ್ತರ ಶೀಟ್ ನೀಡುವುದಾಗಿ ಆಮಿಷವೊಡ್ಡುವ ವಂಚಕ ಕರೆಗಳು ಹರಡುತ್ತಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪರೀಕ್ಷೆಯ ಪಾವಿತ್ರ್ಯವನ್ನು ಹಾಳು ಮಾಡಲು ಕೆಲವು ದುಷ್ಕರ್ಮಿಗಳು ಹಾಗೂ ಸೈಬರ್ ಅಪರಾಧಿಗಳು ಯತ್ನಿಸಬಹುದು ಎಂಬ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ಪತ್ರದಲ್ಲಿ ಹೇಳಲಾಗಿದೆ. ಇಂತಹ ಯಾವುದೇ ಮಾಹಿತಿ ಸಿಕ್ಕರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಆಗುವ ಅವಕಾಶ ಬಂದಿತ್ತು, ಆದರೆ…: ಪರಮೇಶ್ವರ್ ಭಾವುಕ ನುಡಿ

NEET-UG ಪರೀಕ್ಷೆ ಮೊದಲು ಮೇ 3ರಂದು ನಡೆದಿತ್ತು. ಆದರೆ ಪೇಪರ್ ಲೀಕ್ ಆರೋಪದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 21ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ.

ಇಂತಹ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು EOU ಎಚ್ಚರಿಸಿದೆ.

ಈ ಹಿಂದೆ NEET-UG 2024 ಪೇಪರ್ ಲೀಕ್ ಪ್ರಕರಣದ ಪ್ರಮುಖ ಸೂತ್ರಧಾರ ಎಂದು ಹೇಳಲಾಗುವ ಸಂಜೀವ್ ಕುಮಾರ್ ಸಿಂಗ್ ಅಲಿಯಾಸ್ ಸಂಜೀವ್ ಮುಖಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಅವರು ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) ಹಾಗೂ ಇತರ ಹಲವು ಪರೀಕ್ಷೆಗಳ ಪೇಪರ್ ಲೀಕ್ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖಿಯಾ ಗ್ಯಾಂಗ್ ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ವ್ಯಾಪಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಗ್ಯಾಂಗ್ ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವಾರು ನೇಮಕಾತಿ ಪರೀಕ್ಷೆಗಳ ಪೇಪರ್ ಲೀಕ್ ಪ್ರಕರಣಗಳಲ್ಲೂ ಭಾಗಿಯಾಗಿರುವ ಆರೋಪ ಇದೆ.

ಬಿಹಾರ ಪೊಲೀಸರು ಇದೇ ರೀತಿಯ ಎಚ್ಚರಿಕೆಗಳನ್ನು ಕ್ಲರ್ಕ್ (ಹೋಮ್ ಗಾರ್ಡ್ಸ್) ಹಾಗೂ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗಳಿಗೂ ಹೊರಡಿಸಿದ್ದಾರೆ.

ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *