ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿದೆಯೇ ಚಿಕ್ಕಮಗಳೂರು ಕೋವಿಡ್‌ ಜಿಲ್ಲಾಸ್ಪತ್ರೆ

ಚಿಕ್ಕಮಗಳೂರು: ಮೃತದೇಹವೂ ಅಲ್ಲೇ, ಸೋಂಕಿತರು ಅಲ್ಲೇ, ಸಂಬಂಧಿಕರು ಅಲ್ಲೇ.. ಇದು ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆಯ ಪರಿಸ್ಥಿತಿ. ಕೋವಿಡ್ ನಿಯಂತ್ರಣದ ಹೋರಾಟದಲ್ಲಿ ಪ್ರಮುಖ ಅಂಗವಾಗಿರುವ ಆಸ್ಪತ್ರೆಯೇ ಕೋವಿಡ್ ಸೋಂಕು ಹರಡಲು ಸಹಾಯ ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಪಕ್ಕದ ಬೆಡ್ ನಲ್ಲಿ ಮೃತದೇಹವಿದ್ದರೂ ಸೋಂಕಿತರು ಸಂಬಂಧಿಗಳು ಮಾತ್ರ ಅಲ್ಲೆ ಕುಳಿತುಕೊಂಡು ಊಟ ಮಾಡುತ್ತಾರೆ. ಪಿಪಿಇ ಕಿಟ್ ಕೂಡಾ ಧರಿಸದೆ ಸಂಬಂಧಿಕರು ಸೋಂಕಿತರ ಸಂಪರ್ಕ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಳಸಿದ ಅನ್ನ ವಿತರಣೆ

ಇದಷ್ಟೇ ಅಲ್ಲದೆ ಸೋಂಕಿತರ ಸಂಪರ್ಕಕ್ಕೆ ಬಂದ ಸಂಬಂಧಿಕರು ಬಳಿಕ ಆಸ್ಪತ್ರೆಯಿಂದ ಹೊರಗಡೆ ಬಂದು ಯಾವುದೇ ಅಳಕಿಲ್ಲದೆ ತಿರುಗಾಡುತ್ತಿದ್ದಾರೆ ತಾವು ಸೋಂಕು ಅಂಟಿಸಿಕೊಳ್ಳುವುದಲ್ಲದೇ, ತಮ್ಮಿಂದ ಇತರರಿಗೂ ಸೋಂಕು ತಾಗಿಸುತ್ತಿದ್ದಾರೆ.

ಜನರ ಈ ರೀತಿಯ ಬೇಜವಾಬ್ದಾರಿಯಿಂದಲೇ ಸೋಂಕು ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಕೂಡಲೇ ಕ್ರಮ ಕೈಗೊಂಡು ಸೂಕ್ತ ಎಚ್ಚರಿಕೆ ವಹಿಸಬೇಕಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ಪ್ರಯತ್ನವನ್ನು ಜನಶಕ್ತಿ ಮೀಡಿಯಾ ನಡೆಸಿತು, ಆದರೆ ಸಿಟಿ ರವಿಯವರು ಕರೆ ಸ್ವಿಕರಿಸಲಿಲ್ಲ.

 

Donate Janashakthi Media

Leave a Reply

Your email address will not be published. Required fields are marked *