ಅಬಕಾರಿ ಇಲಾಖೆ: ಖಾಲಿ ಇರುವ 265 ಹುದ್ದೆಗಳ ನೇರ ನೇಮಕಾತಿ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 265 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ವಿಧಾನ ಸೌಧದ ಬ್ಯಾಕ್ವೆಂಟ್‌ ಹಾಲ್‌ ನಲ್ಲಿ ನೂತನ ವಾಹನಗಳ ವಿತರಣೆ ಮತ್ತು ಅನುಕಂಪ ಆಧಾರಿತ ನೌಕರರ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುವ ಕೆಲಸ ಮಾಡುತ್ತಿರುವ ಅಬಕಾರಿ ಇಲಾಖೆ ಕಾರ್ಯ ಮಹತ್ವದ್ದಾಗಿದೆ. ಕಳೆದ ವರ್ಷ 35,783 ಕೋಟಿ ರೂ. ಸಂಗ್ರಹಿಸಲಾಗಿದೆ. ಈ ವರ್ಷ ಮುಖ್ಯಮಂತ್ರಿ ಅವರು ನೀಡಿರುವ 40 ಸಾವಿರ ಕೋಟಿ ರೂ. ಗುರಿ ಮುಟ್ಟಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಇದನ್ನೂ ಓದಿ: ವಕೀಲ ಜಗದೀಶ್ ಸಾವು ಅನುಮಾನಾಸ್ಪದ, ಸೂಕ್ತ ತನಿಖೆಗೆ ಒತ್ತಾಯ – ಎ ಐ ಎಲ್ ಯು 

ಇಲಾಖೆ ವತಿಯಿಂದ ಒಟ್ಟು 1,42, 244 ದಾಳಿ ಮಾಡಲಾಗಿದೆ. 72,411 ಪ್ರಕರಣ ದಾಖಲಿಸಲಾಗಿದೆ. 67,032 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು. ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿದರು.

ಬೆಂಗಳೂರಿನ ಜತೆಗೆ ಎರಡನೇ ದರ್ಜೆ ನಗರಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು ಸೇರಿ ಇನ್ನಿತರ ನಗರಗಳ ಬೆಳವಣಿಗೆಗೆ ಕೈಗಾರಿಕೆ ಸೇರಿ ಇನ್ನಿತರ ಪೂರಕ ವಾತಾವರಣ ಕಲ್ಪಿಸಿದರೆ ಅಲ್ಲಿಂದಲೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಬಹುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಇದನ್ನೂ ನೋಡಿ: ಪಹಲ್ಗಾಮ ಹತ್ಯೆಯ ದುರಂತದ ಮಧ್ಯೆ ಕೇಂದ್ರದ ಜಾತಿ ಗಣತಿ ಘೋಷಣೆಯ ಹಿಂದಿನ ರಾಜಕೀಯ ಹಿತಾ‌ಸಕ್ತಿಯೇನು?

Donate Janashakthi Media

Leave a Reply

Your email address will not be published. Required fields are marked *