ಆನ್ಲೈನ್ ಮೂಲಕ ಡಿಪ್ಲೋಮಾ ಸಿಇಟಿ; ಎಐಡಿಎಸ್‌ಒ ವಿರೋಧ

ಬೆಂಗಳೂರು: ಆನ್ಲೈನ್ ಮೂಲಕ ಡಿಪ್ಲೋಮಾ ಸಿಇಟಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶವನ್ನು  ಜಿಲ್ಲಾ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಈ ಕುರಿತು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ  ಹೇಳಿಕೆಯನ್ನು ನೀಡಿದ್ದಾರೆ.

ಎಂಜಿನಿಯರಿಂಗ್ ಪ್ರವೇಶ ಪಡೆಯಲು ಡಿಪ್ಲೋಮಾ ವಿದ್ಯಾರ್ಥಿಗಳು ಬರೆಯಬೇಕಿರುವ ಡಿಪ್ಲೋಮಾ ಸಿಇಟಿ (DCET) ಪರೀಕ್ಷೆಗಳನ್ನು ಈ ಬಾರಿಯಿಂದ ಆನ್ಲೈನ್ ಮೂಲಕ ನಡೆಸಲು ನಿರ್ಧರಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ನಿಲುವು ಅತ್ಯಂತ ಖಂಡನಾರ್ಹ! ಬಹುಪಾಲು, ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಡಿಪ್ಲೋಮಾ ಕೋರ್ಸ್ ಸೇರುತ್ತಾರೆ. ಈ ಬಡ ವಿದ್ಯಾರ್ಥಿಗಳೂ ಸಹ, ಡಿಪ್ಲೋಮಾ ಮೂಲಕ ಎಂಜಿನಿಯರಿಂಗ್ ಪಡೆಯುವುದು ಸುಲಭವೆಂಬ ಕಾರಣಕ್ಕೆ ಪ್ರವೇಶ ಪಡೆದಿರುತ್ತಾರೆ. ಈ ಪ್ರವೇಶ ಪರೀಕ್ಷೆಯನ್ನು ಆನ್ಲೈನ್ ಮೂಲಕ ಮಾತ್ರ ನಡೆಸಿದರೆ ಈ ಮಕ್ಕಳಿಗೆ, ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗುತ್ತದೆ.

ಇದನ್ನು ಓದಿ : ಚುನಾವಣೆಗಾಗಿಯೇ ಬಿಜೆಪಿ ಸಂವಿಧಾನದ ಪ್ರೀತಿ ತೋರಿಸುತ್ತಿದೆಯೇ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರು, ಕೇವಲ ೧೮೦೦೦ ಸಾವಿರ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುವುದರಿಂದ ಆನ್ಲೈನ್ ಡಿಸಿಇಟಿ ನಡೆಸುವುದಾಗಿ ಹೇಳಿದ್ದಾರೆ. ೧೮೦೦೦ ಕಡಿಮೆ ಸಂಖ್ಯೆಯಲ್ಲ! ಇದು ಈ ವಿದ್ಯಾರ್ಥಿಗಳ ಕುರಿತು ಸರ್ಕಾರದ ನಿಲುವನ್ನು ತೋರಿಸುತ್ತದೆ!! ಅದರಲ್ಲೂ, ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ, ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಪಾಲಿಸದೇ ಹಠಾತ್ತನೇ ಇಂತಹ ಮೂಲಭೂತ ಬದಲಾವಣೆಗೆ ಕೈಹಾಕಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ ಎಂದು ಎಐಡಿಎಸ್‌ಒ  ಹೇಳಿದೆ.

ಆದ್ದರಿಂದ, ಈ ಕೂಡಲೇ ಈ ಆದೇಶವನ್ನು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರ ಹಿಂಪಡೆಯಬೇಕು ಮತ್ತು, ಹಿಂದಿನ ರೀತಿಯಲ್ಲಿಯೇ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು ಎಂದು AIDSO ಕರ್ನಾಟಕ ರಾಜ್ಯ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಇದನ್ನು ನೋಡಿ : ನರೇಂದ್ರ ಮೋದಿ ಹೆಸರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಪ್ರಚಾರ ಮಾಡಲು ಸಾಧ್ಯವಿಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *