ಹಾಸನ| ಪಾಳುಬಿದ್ದ ಕಟ್ಟಡ ಕುಸಿತ; 4 ಮಹಿಳೆಯರು ಸಾವು

ಹಾಸನ:  ಪಾಳುಬಿದ್ದ ಕಟ್ಟಡವೊಂದು ದಿಢೀರ್ ಕುಸಿದು ದೊಡ್ಡ ಅನಾಹುತ ಸಂಭವಿಸಿದ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಈ ಘಟನೆದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಇನ್ನೂ ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹಾಸನ

ಪ್ರಾಥಮಿಕ ಮಾಹಿತಿಯಂತೆ, ಪಾಳುಬಿದ್ದ ಈ ಕಟ್ಟಡದ ಕೆಳಗೆ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮಾಡುತ್ತಿದ್ದರು. ದಿಢೀರ್ ಎಂದು ಈ ಕಟ್ಟಡ ಕುಸಿದು ಬಿದ್ದಿದೆ. ನಾಲ್ವರು ಮಹಿಳೆಯರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಪ್ರಾಣ ಬಿಟ್ಟದ್ದಾರೆ ಎಂದು ತಿಳಿದು ಬಂದಿದೆ.ಅಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೂ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.

ಇದನ್ನೂ ಓದಿ: ಅನ್ಯಾಯವನ್ನು ಪ್ರೀತಿಯಿಂದ ಎದುರಿಸುತ್ತೇವೆ ಎಂದಿದ್ದಕ್ಕೆ ಎಫ್‌ಐಆರ್? – ಸುಪ್ರಿಂ ಕೋರ್ಟ್ ಪ್ರಶ್ನೆ

ಸತ್ಯನಾರಾಯಣ ಎಂಬುವವರಿಗೆ ಸೇರಿದ ಹಳೆಯ ಕಟ್ಟಡ ಇದು ಎಂದು ಹೇಳಲಾಗುತ್ತಿದೆ. ಲೀಲಮ್ಮ, ಜ್ಯೋತಿ, ಶಿಲ್ಲಾ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ದುರಂತ ನಡೆದ ಕೂಡಲೇ ಸ್ಥಳೀಯರು ಹಳೆಯ ಕಟ್ಟಡದ ಸಜ್ಜಾ ಸರಿಸಿ ಅದರ ಅಡಿ ಸಿಲುಕಿದವರನ್ನು ರಕ್ಷಿಸುವ ಕೆಲಸ ನಡೆಸಿದ್ದರು. ಇದೇ ವೇಳೆ, ಅಗ್ನಿಶಾಮಕ ದಳ, ಪೊಲೀಸರಿಗೂ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯಾಡಳಿತ ಕೂಡಲೇ ಕ್ರೇನ್‌ಗಳೊಂದಿಗೆ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ನೋಡಿ: CITU| ಶ್ರಮಿಕರ ಅಹೋರಾತ್ರಿ ಹೋರಾಟ 5ನೇ ದಿನಕ್ಕೆ | ಅಂಗವಾಡಿ ನೌಕರರ ಸಂಘಟನೆಯಿಂದ ಧರಣಿ

Donate Janashakthi Media

Leave a Reply

Your email address will not be published. Required fields are marked *