2027ರ ಚುನಾವಣೆಗೆ ಹೊಸ ತಯಾರಿ | ಪಂಜಾಬ್‌ನಲ್ಲಿ ಯುವ ನಾಯಕರ ಹುಡುಕಾಟ ಆರಂಭ

ಚಂಡೀಗಢ: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹೊಸ ತಲೆಮಾರಿನ ರಾಜಕೀಯ ನಾಯಕರನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಲಾಭರಹಿತ ಡಿಜಿಟಲ್ ವೇದಿಕೆಯೊಂದನ್ನು ಆರಂಭಿಸಲಾಗಿದೆ. 2027

ಈ ಉಪಕ್ರಮದ ಉದ್ದೇಶ ಗ್ರಾಮ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದವರೆಗೆ ನಾಯಕತ್ವವನ್ನು ಬೆಳೆಸುವುದು. ಸಾಮಾನ್ಯ ನಾಗರಿಕರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಅಗತ್ಯವಾದ ತರಬೇತಿ, ಜನಸಮಸ್ಯೆಗಳ ಕುರಿತು ಕೆಲಸ ಮಾಡುವ ಅವಕಾಶ, ಸಾರ್ವಜನಿಕ ಗುರುತಿನ ನಿರ್ಮಾಣ ಹಾಗೂ ತಂತ್ರಜ್ಞಾನ ಆಧಾರಿತ ಸಂಘಟನಾ ಬೆಂಬಲವನ್ನು ಒದಗಿಸಲಾಗುತ್ತದೆ.

ಈ ಉಪಕ್ರಮವನ್ನು ಆರಂಭಿಸಿರುವ ಮಾಜಿ ರಾಜಕೀಯ ಮುಖಂಡ ಹಿಮಾಂಶು ಪಾಠಕ್ ಮಾತನಾಡಿ, ಪಂಜಾಬ್‌ಗೆ ಕೇವಲ ಚುನಾವಣಾ ಅಭ್ಯರ್ಥಿಗಳಲ್ಲ, ಜನರ ವಿಶ್ವಾಸ ಗಳಿಸಿದ ನಾಯಕರ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಆರ್‌ಎಸ್‌ಎಸ್‌ ನೋಂದಣಿ, ಹಣಕಾಸು ವಿವರ ಬಹಿರಂಗಪಡಿಸುವಂತೆ ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

“ರಾಜಕೀಯ ಕಾರ್ಯಸೂಚಿ ಪಕ್ಷಗಳ ಮೇಲ್ದರ್ಜೆಯ ನಾಯಕತ್ವ, ಸಲಹೆಗಾರರು ಅಥವಾ ಮುಚ್ಚಿದ ಕೊಠಡಿಗಳ ಚರ್ಚೆಗಳಿಂದ ರೂಪುಗೊಳ್ಳಬಾರದು. ಅದು ಜನರ ಅಗತ್ಯಗಳು ಮತ್ತು ಆಶಯಗಳಿಂದಲೇ ಮೂಡಿಬರಬೇಕು” ಎಂದು ಅವರು ಹೇಳಿದ್ದಾರೆ.

ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ 1,400ಕ್ಕೂ ಹೆಚ್ಚು ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ 23 ಜಿಲ್ಲೆಗಳು ಮತ್ತು 117 ವಿಧಾನಸಭಾ ಕ್ಷೇತ್ರಗಳಲ್ಲಿ 800ಕ್ಕೂ ಹೆಚ್ಚು ಮಂದಿ ಜಾಗೃತಿ ಹಾಗೂ ಜನಚಳವಳಿ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ನಲ್ಲಿ ಕ್ಷೇತ್ರ ಮಟ್ಟದಲ್ಲಿ ಮತದಾರರ ನೇರ ಬೆಂಬಲ ಹೊಂದಿರುವ ನಾಯಕರ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಹಿಮಾಂಶು ಪಾಠಕ್, ಸಂಘಟಿತ ಸಾರ್ವಜನಿಕ ಚಟುವಟಿಕೆಗಳ ಮೂಲಕ ಈ ಕೊರತೆಯನ್ನು ನೀಗಿಸುವುದು ಈ ಉಪಕ್ರಮದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ : SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್‌ ಗೋಪಾಲಗೌಡ

 

Donate Janashakthi Media

Leave a Reply

Your email address will not be published. Required fields are marked *