ಡಿಫರಂಟ್ ಲುಕ್‌ ನಲ್ಲಿ ಮಿಂಚಲಿರುವ ಗೋಲ್ಡನ್‌ ಸ್ಟಾರ್‌

ಬೆಂಗಳೂರು : ಚೆಲ್ಲಾಟ ಚಿತ್ರದ ಮುಖಾಂತರ ನಾಯಕನಾಗಿ ಚಂದನವನಕ್ಕೆ ಕಾಲಿಟ್ಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಹಲವು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿ ತಮ್ಮ ಅಭಿಮಾನಿಗಳನ್ನು ರಂಜಿಸಿರುವ ಗಣೇಶ್‌ ಈ ಬಾರಿ ವಿಭಿನ್ನ ಪಾತ್ರಕ್ಕೆ ಕೈಹಾಕಿದ್ದಾರೆ.

ಬಹುತೇಕ ಚಿತ್ರಗಳಲ್ಲಿ ಲವರ್‌ಬಾಯ್‌ ಆಗಿ ಕಾಣಿಸಿಕೊಂಡಿದ್ದ ಗಣೇಶ್‌ ಇದೇ ಮೊದಲ ಬಾರಿಗೆ ಕುರುಡನ ಪಾತ್ರ ನಿಭಾಯಿಸುತ್ತಿದ್ದು, ಅಭಿಮಾನಿಗಳಲ್ಲಿ ಮತ್ತಷು ಕೂತುಹಳ ಮೂಡಿಸಿದೆ.

ಸಿಂಪಲ್​ ಸುನಿ ಮತ್ತು ಗಣೇಶ್​ ಕಾಂಬಿನೇಷನ್​ನಲ್ಲಿ ಎರಡನೇ ಚಿತ್ರವಾಗಿ  ‘ಸಖತ್​’‌ ಸಿನಿಮಾದ  ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಪೋಸ್ಟರ್‌ ನಲ್ಲಿ ಸಿಂಗರ್‌ ಆಗಿ ಕಾಣಿಸಿಕೊಂಡು ಗಮನ ಸೆಳೆದ ಗಣೇಶ್‌ ಈಗ ಕುರುಡನ ಪಾತ್ರದಲ್ಲಿ ಕಟೆಕಟೆಯಲ್ಲಿ ನಿಂತು ಡಿಫರೇಟ್‌ ಲುಕ್‌ ನಲ್ಲಿ ಮಿಂಚಿದ್ದಾರೆ.

ಬಹುತೇಕ ಚಿತ್ರಗಳಲ್ಲಿ ಲವರ್ ಬಾಯ್​ ಆಗಿ, ಸ್ಟೈಲಿಶ್​ ಲುಕ್​ನಲ್ಲಿ ಮುಂಚಿತ್ತಿದ್ದ ಗನೇಶ್‌ ಇದೇ ಮೊದಲ ಬಾರಿ ಹೊಸ ಗೆಟಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಪಾತ್ರದ ಬಗ್ಗೆ ತಮಗಿರುವ ಕೂತುಹಲವನ್ನು ಟ್ವಿಟರ್‌ ಖಾತೆಯ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಮಾ. 24ರಂದು ‘ಹೀರೋ’ ಚಿತ್ರದ ‘ವಿಡಿಯೋ ಸಾಂಗ್ ರಿಲೀಸ್

‘ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕು ಚೆಲ್ಲಿ ಹಾರೈಸಿ’ ಎಂದು ಗಣೇಶ್​ ಟ್ವೀಟ್​ ಮಾಡಿದ್ದಾರೆ.

ಈ ಟ್ವಿಟ್‌ ಗೆ ಸಾಕಷ್ಟು ಅಭಿಮಾನಗಳು ಶುಭಾಶಯ ಕೂರಿದ್ದು, ಸಖತ್‌ ಸಿನಿಮಾ ನೀರಿಕ್ಷೆ ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರಕ್ಕೆ ಮಾ. 22ರಿಂದ ಶೂಟಿಂಗ್​ ಆರಂಭವಾಗಿದ್ದು, ಗಣೇಶ್​ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಹಾಸ್ಯ ನಟ ಧರ್ಮಣ್ಣ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ಲುಕ್​ ಪೋಸ್ಟರ್​ ಕೂಡ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *