ಮಂಡ್ಯ: ತಮ್ಮ ಮಗ ಏನು ಎಂದು ಗೊತ್ತಿದ್ದ ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ , ತಮ್ಮ ಮಗನ ಗುಣ ಏನು ಎನ್ನುವುದನ್ನು ಗೊತ್ತಿದ್ದರೂ ಸುಮ್ಮನೆ ಏಕೆ ಇದ್ದರು? ಮಗನಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಅವನ ತಂದೆ-ತಾಯಿ ಕತ್ತೆ ಕಾಯುತ್ತಿದ್ದರೇ? ಎಂದು ಬಿಜೆಪಿಯ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಎಲ್‌ಆರ್ ಶಿವರಾಮೇಗೌಡ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಡ್ರೈವರ್ ಕಾರ್ತಿಕ್ ಕುಟುಂಬವನ್ನು ಹೆದರಿಸಿ ಬೆದರಿಸುತ್ತಿದ್ದ ಎಂದು ಗೊತ್ತಿದ್ದರೂ ತಂದೆತಾಯಿ ಆದವರು ಆಗಲೇ ಅವನಿಗೆ ಏಕೆ ಬುದ್ಧಿ ಹೇಳಲಿಲ್ಲ? ಹೆಚ್.ಡಿ.ಕುಮಾರಸ್ವಾಮಿ ಏಕೆ ದೇವರಾಜೇಗೌಡ ಮತ್ತು ತನ್ನ ಸಹೋದರ ಹೆಚ್.ಡಿ.ರೇವಣ್ಣನ ಕುಟುಂಬದ ಜೊತೆ ಚರ್ಚಿಸಿ ಪ್ರಕರಣವನ್ನು ಏಕೆ ಇತ್ಯರ್ಥಪಡಿಸಲಿಲ್ಲಿ. ಇದೆಲ್ಲವನ್ನು ನೋಡಿದರೆ, ಕುಮಾರಸ್ವಾಮಿಗೆ ಹೀಗೆ ಆಗುವುದು ಬೇಕಿತ್ತು ಎಂದನಿಸುತ್ತದೆ.
ಇದನ್ನೂ ಓದಿ: ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
ಇಷ್ಟೆಲ್ಲ ರಾದ್ಧಾಂತ ರಾಡಿ ಆದರೂ ಕುಮಾರಸ್ವಾಮಿ ಇನ್ನೂ ಏಕೆ ಹಾಸನಕ್ಕೆ ಹೋಗಿ ಸಂತ್ರಸ್ತೆಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ.ಇದೆಲ್ಲ ಅವರ ಜವಾಬ್ದಾರಿಯಲ್ಲವೇ? ಎಂದು ಶಿವರಾಮೇಗೌಡ ಸೂಚ್ಯವಾಗಿ ಪ್ರಶ್ನಿಸಿದ್ದಾರೆ.. ಇಳಿ ವಯಸ್ಸಿನಲ್ಲಿರುವ ಹೆಚ್.ಡಿ.ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳಿಂದಾಗಿ ಇಂತಹದ್ದನ್ನೆಲ್ಲಾ ನೋಡುವ ಸ್ಥಿತಿ ಬಂದಿತಲ್ಲ ಎಂಬುದೇ ವ್ಯಥೆಯಾಗಿದೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.
ಇದನ್ನೂ ನೋಡಿ: ಬಿಜೆಪಿ ಸೋಲಸ್ತೇವೆ – ಮೇ ದಿನಕ್ಕೆ ಕಾರ್ಮಿಕರ ಸಂಕಲ್ಪ Janashakthi Media