ಜಿಟಿ ಮಾಲ್‌ನಲ್ಲಿ ಅನ್ನದಾತನಿಗೆ ಅವಮಾನ : ಪಂಚೆ ಧರಿಸಿದ್ದಕ್ಕೆ ಮಾಲ್‌ ಒಳಗೆ ಬಿಡದ ಸಿಬ್ಬಂದಿ!

ಬೆಂಗಳೂರು: ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ  ರೈತನಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಾಗಡಿ ಮುಖ್ಯರಸ್ತೆಯ ಜಿಟಿ ಮಾಲ್‌ನಲ್ಲಿ ಜುಲೈ 16ರ  ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈತ ಫಕೀರಪ್ಪ ತನ್ನ ಮಗನೊಂದಿಗೆ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಮಾಲ್‌ಗೆ ಹೋಗಿದ್ದರು. ಅವರು ಧೋತಿ ಮತ್ತು ಬಿಳಿ ಅಂಗಿ ಧರಿಸಿದ್ದರು. ಅವರ ಈ ಉಡುಪಿನ ಕಾರಣದಿಂದಾಗಿ ಅವರಿಗೆ ಪ್ರವೇಶವನ್ನು ನಿರಾಕರಿಸಿ, ಅವಮಾನವನ್ನು ಮಾಡಲಾಗಿದೆ.

ಜುಲೈ 16 ರಂದು ಫಕೀರಪ್ಪ ಪುತ್ರ ನಾಗರಾಜ್ ಮಾಲ್‌ನ ಪ್ರವೇಶ ದ್ವಾರದಲ್ಲಿ ಭದ್ರತಾ ಮೇಲ್ವಿಚಾರಕರೊಂದಿಗೆ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದರು. ಮಾಲ್‌ನ ನಿಯಮಗಳ ಪ್ರಕಾರ ಧೋತಿ ಧರಿಸಿದವರಿಗೆ ಪ್ರವೇಶವಿಲ್ಲ ಎಂದು ಭದ್ರತಾ ಮೇಲ್ವಿಚಾರಕರು ಹೇಳುವುದನ್ನು ಕೇಳಬಹುದು ಮತ್ತು ರೈತರು ಪ್ಯಾಂಟ್ ಧರಿಸಿದರೆ ಅವರು ಅನುಮತಿಸುತ್ತಾರೆ ಎಂದು ಹೇಳಿರುವ ಮಾತುಗಳು ಆಡೋಯದಲ್ಲಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಆಫ್ರಿಕನ್ ಸೋಗು

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀ ನಾಗರಾಜ್, ನಮ್ಮ  ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ರೈತರು. ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಮಾಲ್‌ ಒಳಗೂ ಬಿಡದೇ, ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

“ಗ್ರಾಮೀಣ ಪ್ರದೇಶದ ಜನರು, ಅದರಲ್ಲೂ ರೈತರು ಧೋತಿ ಬಿಟ್ಟು ಪ್ಯಾಂಟ್ ಧರಿಸಿ ಸಿನಿಮಾ ನೋಡಲು ಬರುವುದು ಹೇಗೆ?” ಎಂದು ರೈತ ಫಕೀರಪ್ಪ ಪ್ರಶ್ನಿಸಿದ್ದಾರೆ. ಮಾಲ್‌ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.  “ನನ್ನ ಐವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಅವರು ಈಗ ಉತ್ತಮ ಸ್ಥಾನದಲ್ಲಿದ್ದಾರೆ. ಆದರೆ ನಾನು ನನ್ನ ಸಂಸ್ಕೃತಿ, ಡ್ರೆಸ್ಸಿಂಗ್ ಶೈಲಿಯನ್ನು ಬಿಟ್ಟುಕೊಟ್ಟು ಮಾಲ್‌ಗೆ ಹೋಗಲು ಪ್ಯಾಂಟ್ ಧರಿಸಲು ಸಾಧ್ಯವಿಲ್ಲ. ನಮ್ಮದೇ ರಾಜ್ಯದಲ್ಲಿ ನಮ್ಮದೇ ಆದ ಡ್ರೆಸ್ಸಿಂಗ್ ಸ್ಟೈಲ್ ಮತ್ತು ಸಂಸ್ಕೃತಿಯ ಬಗ್ಗೆ ಜನರು ಕೀಳರಿಮೆ ಹೊಂದುತ್ತಿರುವುದು ಬೇಸರದ ಸಂಗತಿ” ಎಂದರು.

 

ಈ ಘಟನೆ ಬೆನ್ನಲ್ಲೇ ಜಿ.ಟಿ ಮಾಲ್ ವಿರುದ್ಧ ಕನ್ನಡಿಗರು, ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜಿ.ಟಿ ಮಾಲ್‌ನ ನಡೆಗೆ ರಾಜ್ಯದೆಲ್ಲೆಡೆಯಿಂದ ಭಾರೀ ಖಂಡನೆ ವ್ಯಕ್ತವಾಗಿತ್ತು. ನಿನ್ನೆ ಕ್ಷಮೆ ಕೇಳಲು ನಿರಾಕರಿಸಿದ್ದ ಆಡಳಿತ ಮಂಡಳಿ ಇಂದು ತಮ್ಮ ತಪ್ಪನ್ನು ಅರಿತು  ರೈತ ಫಕೀರಪ್ಪನನ್ನು ಮಾಲ್‌ಗೆ ಆಹ್ವಾನಿಸಿ ಸನ್ಮಾನ ಮಾಡುವ ಮೂಲಕ  ಕ್ಷಮೆಯಾಚಿಸಿದ್ದಾರೆ.

 ಇದನ್ನೂ ನೋಡಿ: ಸಿದ್ದರಾಮಯ್ಯರ ಪತ್ನಿಗೆ ಜಮೀನು ನೀಡಿರುವುದು ಅಕ್ರಮವಲ್ಲ : ಎಂ.ಲಕ್ಷ್ಮಣ್Janashakthi Media

Donate Janashakthi Media

Leave a Reply

Your email address will not be published. Required fields are marked *