ಬಾಗೇಪಲ್ಲಿ: ತಮ್ಮ ಇಡೀ ಜೀವನವನ್ನೇ ಎಡ ಪಂಥೀಯ ಹೋರಾಟ ಮೂಲಕ ಮುನ್ನಡೆಸಿದ ಧೀಮಂತ ಹೋರಾಟಗಾರರ ಜಿ.ವಿ ಶ್ರೀರಾಮರೆಡ್ಡಿ ಇಂದು ನಿಧನರಾಗಿದ್ದು, ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಇಡೀ ಜೀವನ ಹೋರಾಟಕ್ಕೆ ಮುಡಿಪು
ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಬೈರೆಬಂಡ ಗ್ರಾಮದಲ್ಲಿ ಕೃಷಿ ಬಡ ಕುಟುಂಬದಲ್ಲಿ ಜನಿಸಿದ ಜಿ.ವಿ. ಶ್ರೀರಾಮರೆಡ್ಡಿ ಯವರೂ ಪ್ರಾಥಮಿಕ, ಪ್ರೌಡ ಹಾಗೂ ಪದವಿ ಪೂರ್ವದ ಶಿಕ್ಷಣವನ್ನು ಮಾಡುವ ಸಮಯದಲ್ಲಿಯೇ ನಾಯಕತ್ವ ಗುಣಗಳನ್ನು ಹೊಂದಿದವರು. ಪಿಯು ಓದುವ ಸಮಯದಲ್ಲಿ ಎಸ್ಎಫ್ಐ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದರೂ, ಆಗ ಕೇರಳದ ತಿರುವುನಂತಪುರಂನಲ್ಲಿಗೆ “ಅಖಿಲ ಭಾರತ ಸಮ್ಮೇಳನದಲ್ಲಿ ಭಾಗಿಯಾದಾಗ” ಅಲ್ಲಿ ನಡೆದ ಭಾಷಣಕ್ಕೆ ಪ್ರಭಾವಿತರಾಗಿ ಆಗಿ, ಅವರು ತಮ್ಮ ಕಾನೂನು ವಿದ್ಯಾಬ್ಯಾಸವನ್ನು ಮುಗಿಸಿದ ತರುವಾಯ ಸಕ್ರಿಯವಾಗಿ ವಿದ್ಯಾರ್ಥಿ ಹೊರಟಗಳನ್ನು ಮಾಡುತಿದ್ದರು. ಹಾಗೆಯೇ ಹಲವು ಕೃಷಿ ಮತ್ತು ಕೂಲಿಕಾರ್ಮಿಕರ ಪರ “ಉಳುವವನೇ ಭೂ ಒಡೆಯ” ತತ್ವದ ಮೇಲೆ ರೈತರ ಪರವಾಗಿ ನಿಂತು ಹಲವಾರು ಹೋರಾಟಗಳು ಮತ್ತು ಸೆರೆವಾಸವನ್ನು ಅನುಭವಿಸಿದ್ದಾರೆ.
ಕಾನೂನು ಪದವಿಯನ್ನು ಪಡೆದು ಸಿಪಿಐ(ಎಂ) ಪಕ್ಷದಲ್ಲಿ ಹೋರಾಟವನ್ನು ಮಾಡುತ್ತಿದ್ದರು. ನಂತರ 1972ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟಗಳಲ್ಲಿ ರೈತರ ಪರವಾಗಿ ನಿಂತು ಹೋರಾಟಗಳನ್ನು ಮಾಡುತಿದ್ದರು. ಆಗ ಬಾಗೇಪಲ್ಲಿ ತಾಲ್ಲೂಕಿನ ಅರಾಜಕತೆ ಮತ್ತು ನಾಯಕರಿಂದ ಜನರಿಗೆ ಒಳಿತು ಆಗುವ ಕೆಲಸಗಳು ಆಗುತ್ತಿರಲಿಲ್ಲ. ಚುನಾವಣೆ ಬಂದರೆ ಬೇರೆ ಬೇರೆ ಕಡೆಯಿಂದ ಚುನಾವಣೆಯಲ್ಲಿ ಸ್ವರ್ದಿಸಿ ಗೆದ್ದು ಜನರಿಗೆ ಕೆಲಸ ಮಾಡುತ್ತಿರಲಿಲ್ಲ ಬಾಗೇಪಲ್ಲಿ ತಾಲ್ಲೂಕು ಅಭಿವೃದ್ಧಿಯಲ್ಲಿ ಬಹಳ ಹಿಂದೆ ಉಳಿದಿತ್ತು.
ಈ ಬರದನಾಡಿಗೆ ಬಂದು ರೈತರ ಪರವಾಗಿ ನಿಂತು ಹೋರಾಟವನ್ನು ಮಾಡಲು ಮುಂದಾದರು 45 ವರ್ಷಗಳಿಂದೆ 1984ರಲ್ಲಿ ಬಾಗೇಪಲ್ಲಿಯಲ್ಲಿ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಹಾಗೂ ಅಭಿವೃದ್ಧಿ ಕೆಲಸಗಳು ಮಾಡಿ ಜನತೆಗಾಗಿ ದುಡಿದರು. “ಬಾಗೇಪಲ್ಲಿ ನವ ನಿರ್ಮಾಣ” ಕ್ಕೆ ಹೆಜ್ಜೆ ಹಾಕಿದರು. ಮೊದಲ ಬಾರಿ 1996ರಲ್ಲಿ ಶಾಸಕರಾಗಿ ವಿಧಾನಸಭೆಯಲ್ಲಿ ರೈತರ ಮತ್ತು ಕಾರ್ಮಿಕರ, ವಿದ್ಯಾರ್ಥಿಗಳ ಪರವಾಗಿ ನ್ಯಾಯ ಒದಗಿಸುವ ಸಲುವಾಗಿ ಹೋರಾಟ ಮಾಡಿದರು.
ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇದ್ದು, ಅದಕ್ಕಾಗಿ ಅವರ ಆಡಳಿತ ಅವಧಿಯಲ್ಲಿ ಚಿತ್ರಾವತಿ ಅಣೆಕಟ್ಟು , ಹಂಪಸಂದ್ರ ಡ್ಯಾಮ್, ವಂದ ಡ್ಯಾಮ್, ಕಟ್ಟಿಸಿದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಐಟಿಐ ಕಾಲೇಜು ,ಪಾತಪಾಳ್ಯ ಪದವಿ ಪೂರ್ವ ಕಾಲೇಜು, ಬಾಗೇಪಲ್ಲಿ ಬಸ್ಸು ಡಿಪೋ, ಬಾಗೇಪಲ್ಲಿ ಮುಖ್ಯ ರಸ್ತೆ ಅಗಲೀಕರಣ, ಗುಡಿಬಂಡೆ ಮುಖ್ಯ ರಸ್ತೆ ಅಗಲೀಕರಣ, ಸರ್ಕಾರಿ ಅಸ್ಪತ್ರೆ, 100 ಹಾಸಿಗೆಗಳ ಆಸ್ಪತ್ರೆ, ಎಪಿಎಂಸಿ ಮಾರ್ಕೆಟ್, ಈಕೋ ಪಾರ್ಕ್, ಮಿನಿ ವಿಧಾನಸೌಧ, ಬಾಗೇಪಲ್ಲಿ ಪೊಲೀಸ್ ಸ್ಟೇಷನ್, ಗುಮ್ಮನಾಯಕನ ಪಾಳ್ಯ ಪ್ರವಾಸಿ ತಾಣವಾಗಿ, ತಿಮಾಂಪಲ್ಲಿ(ಕೆಇಬಿ) ಸ್ಟೇಷನ್, ಶಿವಪುರ ಹೈ ಸ್ಕೂಲ್, ತಿಮಾಂಪಲ್ಲಿ ವೆಟರ್ನರಿ ಹಾಸ್ಪಿಟಲ್, ಪಾತಪಲ್ಯ ರಸ್ತೆ, ಬಾಗೇಪಲ್ಲಿ ಅಗ್ರಿಕಲ್ಚರ್ ಕಚೇರಿ, ದೇವಿಕುಂಟೆ ರಸ್ತೆ, ಯಲ್ಲಂಪಲ್ಲಿ ರಸ್ತೆ, ಬಿಳ್ಳೂರ್ ರಸ್ತೆ, ಸಿಂಗಪ್ಪಗರಿ ಪಲ್ಲಿ ರಸ್ತೆ, ದೇವರಪಲ್ಲಿ ರಸ್ತೆ, ಬಾಗೇಪಲ್ಲಿ ಸರ್ಕಾರಿ ಉರ್ದು ಹೈಸ್ಕೂಲ್, ಪೋರುಗೊಡು ಹೈಸ್ಕೂಲ್, (ಯುಜಿಡಿ) ಬಾಗೇಪಲ್ಲಿ ಟೌನ್, 11,000 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ , ಬಾಗೇಪಲ್ಲಿ ತಾಲ್ಲೂಕಿನ 6 ಎಕರೆ ಜಮೀನು ನಲ್ಲಿ ನಿವೇಶನಗಳನ್ನು ಬಡ ಜನತೆಗೆ ನೀಡಿದರು. ಜೀಲಕರಪಲ್ಲಿ ಸೇತುವೆ, ಎಸ್ಬಿಐ ರಸ್ತೆ ಸೇತುವೆ, ಬಾಗೇಪಲ್ಲಿ ಕೋರ್ಟು, ಗುಡಿಬಂಡೆ ಕೋರ್ಟು, ಪೂಲವರಂಪಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾಡಿಸಿದರು. ತಾಲೂಕಿನ ಹಲವಾರು ಗ್ರಾಮಗಳಿಗೆ ರಸ್ತೆ, ಸಾರಿಗೆ, ಕಿರು ನೀರು ಮೂಲಕ ಕುಡಿಯುವ ನೀರು, ವಿದ್ಯುತ್ ಒದಗಿಸಿದರು.
ಬಾಗೇಪಲ್ಲಿ ವಿಧಾನಸಭಾ ಅಭ್ಯರ್ಥಿಯಾಗಿ 2004ರಲ್ಲಿ ಗೆದ್ದು ಶಾಸಕರಾದ ಸಮಯದಲ್ಲಿ ಅಕ್ರಮ ದಾರಿಯಲ್ಲಿ ಜನರಿಗೆ ಮೋಸ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡಿದರು. ಗಣಿ ಮಾಫಿಯಾ, ಭೂ ಮಾಫಿಯಾ, ಸಾರಾಯಿ ಮಾಫಿಯಾ ವ್ಯಕ್ತಿಗಳ ವಿರುದ್ಧ ವಿಧಾನಸಭೆಯಲ್ಲಿ ಹೋರಾಟವನ್ನು ಮಾಡಿದರು.
ಪರಮ ಶಿವಯ್ಯ ವರದಿ ಶಾಶ್ವತ ನೀರಾವರಿಗಾಗಿ, ಬಾಗೇಪಲ್ಲಿ ಬಹಳ ಹಿಂದುಳಿದ ಬರದನಾಡು ಜನರಿಗೆ ಶಾಶ್ವತ ನೀರಾವರಿ ಒದಗಿಸಬೇಕು ಎಂದು ರಾಜಧಾನಿವರಗೆ ಹೊರಟ ಮಾಡಿದರು.