ಬೆಂಗಳೂರು: ಭಾರತದ ಆಲದ ಮರಗಳಲ್ಲಿ ನಾಲ್ಕನೆ ಸ್ಥಾನ ಪಡೆದ ಡೊಡ್ಡಾಲದ ಮರ ಧರೆಗುರುಳಿದೆ. ಪ್ರವಾಸಿಗರು ಹೆಚ್ಚು ಇಷ್ಟಪಡುವ ಜಾಗದಲ್ಲಿ ದೊಡ್ಡಾಲದ ಮರವೂ ಒಂದು.
ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ‘ದೊಡ್ಡಾಲದ ಮರ’ ಬುಧವಾರ ನೆಲಕ್ಕುರಳಿದೆ. ಈ ಆಲದ ಮರಕ್ಕೆ 400 ವರ್ಷಗಳ ಇತಿಹಾಸವಿದ್ದು, ಭಾನುವಾರ ಸುರಿದ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ತೋಟಗಾರಿಕ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಆದೆರ ತೋಟಗಾರಿಕೆ ಇಲಾಖೆಯ ನಿರ್ಲಕ್ಷದಿಂದ ದೊಡ್ದಾಲದ ಮರವು ನೆಲಕ್ಕುರಳಿದೆ ಎಂದು ಅಲ್ಲಿನ ಸ್ಥಳಿಯರು ತಿಳಿಸಿದ್ದಾರೆ.
![]()
ದೊಡ್ಡಾಲದ ಮರವು ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯಲ್ಲಿದೆ. 3 ಎಕರೆಯಷ್ಟು ತನ್ನ ವ್ಯಾಪ್ತಿಯನ್ನು ಹಬ್ಬಿಸಿಕೊಂಡಿದ್ದು, ಈ ದೊಡ್ಡಾಲದ ಮರವು ಭಾರತದ ಪುರಾತನ ಆಲದ ಮರಗಳಲ್ಲೇ ಒಂದಾಗಿದ್ದು, ಭಾರತದಲ್ಲಿರುವ ಆಲದ ಮರಗಳಲ್ಲಿ ನಾಲ್ಕನೆಯ ಸ್ಥಾನ ಹೊಂದಿತ್ತು. 400 ವರ್ಷಗಳಷ್ಟು ವಯಸ್ಸಾಗಿರುವ ಈ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಿತ್ತು. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಲ್ಲಿ ಈ ಡೊಡ್ಡಾಲದ ಮರವು ನಾಲ್ಕನೆ ಸ್ಥಾನ ತನ್ನದಾಗಿಸಿಕೊಂಡಿತ್ತು.
ಡೊಡ್ಡಾಲದ ಮರದ ಎತ್ತರ 95 ಅಡಿ. ಈ ಮರದ ಕೊಂಬೆಗಳು. ದೈತ್ಯಕಾರದಲ್ಲಿದ್ದು 3 ಎಕರೆಯಷ್ಟು ಜಾಗದಲ್ಲಿ ವ್ಯಾಪಿಸಿತ್ತು. ಬೆಂಗಳೂರಿನ ಜನರಿಗೆ ಇದೊಂದು ಹೆಮ್ಮಯ ಸ್ಥಾನವಾಗಿತ್ತು. ಜನರಿಗೆ ವಿಶಿಷ್ಟ ಆಕರ್ಷಣೆ ಉಂಟು ಮಾಡಿತ್ತು. ಈ ಮರದಲ್ಲಿನ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತ್ತು. ಆದರು ಕೂಡ ಈ ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆದಿತ್ತು, ತೋಟಗಾರಿಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡಾಲದ ಮರ ಧರೆಗುರುಳಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿ ಹುಲ್ಲಿನ ಹಾಸು ಹಾಕೋದಕ್ಕೆ ಮರದ ಬುಡದಲ್ಲಿರುವ ಮಣ್ಣನ್ನು ಸಿಬ್ಬಂದಿ ತೆಗೆದುಹಾಕಿದ್ದಾರೆ. ಇದರಿಂದ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಅಲ್ಲದೇ ಇನ್ನಷ್ಟು ಮರಗಳು ಬಾಗಿದ ಸ್ಥಿತಿಯಲ್ಲಿದೆ. ಈ ಬಗ್ಗೆ ಸಿಬ್ಬಂದಿ, ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
