ಹಾಸನ : ಯುವ ಪೀಳಿಗೆ ಸಮಾಜದ ಅಭಿವೃದ್ಧಿಯ ಸೂಚ್ಯಂಕ ಅದನ್ನು ಹುಲಸಾಗಿ ಬೆಳೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ, ಎಂದು ತಾಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿಗಳಾದ ದಿನೇಶ್ ತಿಳಿಸಿದರು. ಯುವ ಪೀಳಿಗೆ
ಅವರು ಪಂಚಾಯತ್ ರಾಜ್ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗಗಳೊಂದಿಗೆ ದುದ್ದ ಗ್ರಾಮ ಪಂಚಾಯಿತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರುದಿನಗಳ ಕಾಲ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ನುಡಿಯಲ್ಲಿ ಗ್ರಂಥಾಲಯಗಳ ಸಬಲೀಕರಣ ಯುವ ಪೀಳಿಗೆ ಗ್ರಂಥಾಲಯಗಳತ್ತ ಮುಖಮಾಡುವಂತೆ ಮಾಡಿ ಗ್ರಂಥಾಲಯಗಳಿಗೆ ಶಕ್ತಿ ತುಂಬುವ ಹಾಗೂ ಸಮಾಜದ ಅಭಿವೃದ್ಧಿಯ ಸೂಚ್ಯಂಕವೇ ಆಗಿರುವ ಮಕ್ಕಳನ್ನು ಎಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವಂತೆ ಮಾಡಲು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಕಾರದಿಂದ ಹೊಸ ಕಾರ್ಯಕ್ರಮಕ್ಕೆ ಭಾಷೆ ಬರದಿದೆ ಎಂದರು. ಯುವ ಪೀಳಿಗೆ
ರಾಜ್ಯ ಸಂಪನ್ಮೂಲ ವ್ಯಕ್ತಿ ತನವೀರ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳಿಂದಲೇ ಸಾಹಿತ್ಯ ಸೃಷ್ಟಿಸಿ ಅದನ್ನು ಆಯಾ ಹೋಬಳಿ ಕೇಂದ್ರದಲ್ಲಿ ಇರಿಸಿ ಮಕ್ಕಳಿಗೆ ಉತ್ತೇಜಿಸುವ ದೃಷ್ಟಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಮಾಡಿ ಶೈಕ್ಷಣಿಕ ಇಲಾಖೆಗೆ ತಮ್ಮದೇ ರೀತಿಯಲ್ಲಿ ಸಹಕಾರ ಮಾಡಿರುವ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ಆರ್.ಡಿ.ಪಿ.ಆರ್ ಇಲಾಖೆ ಸಶಕ್ತವಾಗಿ ಬಳಸಿಕೊಂಡು ರಾಜ್ಯದ 75 ತಾಲ್ಲೂಕುಗಳಲ್ಲಿ ಈ ಕಾರ್ಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುತ್ತಿದೆ ಇದು ರಾಜ್ಯದ ಎಲ್ಲಾ ತಾಲೂಕು ಹೋಬಳಿ ಕೇಂದ್ರಗಳಲ್ಲಿ ವಿಜೃಂಭಿಸುತ್ತಿದೆ ಎಂದು ತಿಳಿಸಿದರು. ಯುವ ಪೀಳಿಗೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೂಪ್ಮರೇಷೆ ವಿವರಿಸಿದ ಜಿಲ್ಲಾ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಪ್ರಮೀಳಾ ಮಾತನಾಡಿ, ಈ ಹಿಂದೆ ಕೋವಿಡ್ ಸಂದರ್ಬದಲ್ಲೂ ಬಿಜಿವಿಎಸ್ ಹಾಗೂ ಆರ್ ಡಿ ಪಿ ಆರ್ ಇಲಾಖೆ ಪುಸ್ತಕ ಜೋಲಿಗೆ, ಓದಿನ ಬೆಳಕು, ಮಕ್ಕಳ ಹಬ್ಬ ಚಟುವಟಿಕೆಯನ್ನು ಜೊಯತೆಯಾಗಿ ಸಂಘಟಿಸಿವೆ ೆಚಿದು ಸ್ಮರಿಸಿದ ಅವರು ಜ್ಞಾನವಿಜ್ಞಾನ ಸಮಿತಿಯು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯದ ಮೂಲಕ ಶಿP್ಪ್ಷಣ ಸುಗಮ ಮಾರ್ಗ ಎಚಿದು ಅರಿತು ಈ ಚಟುವಟಿಕೆಯನ್ನು ಆರ್.ಡಿ.ಪಿ.ಆರ್ ಸಂಚಾಲನೆಯಲ್ಲಿ ನಡೆಸುತ್ತಿದೆ ಇದನ್ನು ಹಾಸನ ತಾಲೂಕಿನಲ್ಲಿ ಒಂದು ದಾಖಲೆಯಾಗಿ ಬರೆಯಲು ತಾಲೂಕಿನ ಸಂಚಾಲಕರುಗಳಾದ ತನ್ವೀರ್ ಹಾಗೂ ವನಜಾಕ್ಷಿ ಬಹಳ ಶ್ರಮಹಾಕಿದ್ದಾರೆ ಎಂದು ನುಡಿದು ಅವರುಗಳ ಶ್ರಮವನ್ನು ಸ್ಮರಿಸಿದರು. ಯುವ ಪೀಳಿಗೆ
ಇದನ್ನು ಓದಿ : ಮಾಜಿ ಐಎಎಸ್ ಅಧಿಕಾರಿ, ಹಿರಿಯ ನಟ ಕೆ ಶಿವರಾಮ್ ನಿಧನ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುಳಾ ಮಾತನಾಡಿ ಶಿಕ್ಷಣ ಇಲಾಖೆ ಮಾಡಬೇಕಾದಂತಹ ಈ ಅದ್ಭುತ ಕಾರ್ಯಕ್ರಮವನ್ನು ಆರ್ ಡಿ ಪಿ ಆರ್ ಮತ್ತು ಭಾರತ ಜ್ಞಾನವಿಜ್ಞಾನ ಸಮಿತಿ ಪಂಕಕಟ್ಟಿ ನಿಂತು ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು ಹೊರಹಮ್ಮಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಇದೊಂದು ಸಂತಸದಾಯಕ ಹಾಗೂ ಮೆಚ್ಚುಗೆಯ ಕೆಲಸವಾಗಿದೆ ಇದನ್ನು ನೀವೆಲ್ಲರೂ ಸಾರ್ಥಕ ಪಡಿಸಿಕೊಳ್ಳಬೇಕು ಆ ಮೂಲಕ ಈ ನೆಲದ ಸಾಂಸ್ಕೃತಿಕ ಶಕ್ತಿಗಳಾಗಿ ಸಾಹಿತ್ಯದ ಚಿಗುರುಗಳಾಗಿ ನೀವು ಹೊರಹೊಮ್ಮಬೇಕೆಂದು ನುಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು, ದುದ್ದ, ಅಟ್ಟಾವರ ಹಾಗೂ ಹೊನ್ನಾವರ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಣ ಸಂಯೋಜಕರು, ಸಿ.ಆರ್.ಪಿಗಳು ಹಾಗೂ ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು. ಯುವ ಪೀಳಿಗೆ
ನಂತರ ದುದ್ದ, ಹೊನ್ನಾವರ ಹಾಗೂ ಅಟ್ಟಾವರ ಗ್ರಾಮಪಂಚಾಯತಿಗಳಿಂದ ಆಯ್ದ 100 ವಿದ್ಯಾರ್ಥಿಗಳಿಗೆ 16ಜನ ಸಂಪನ್ಮೂಲ ವ್ಯಕ್ತಿಗಳು ಕಥೆ ಕಟ್ಟೋಣ, ಕವಿತೆ ಬರೆದುಹಾಡೋಣ, ನಾಟಕ ರಚಿಸಿ ಆಡೋಣ, ನಾನು ರಿಪೋರ್ಟರ್ ಚಟುವಟಿಕೆಗಳನ್ನು ಮಕ್ಕಳನ್ನು ಗುಂಪಾಗಿ ವಿಂಗಡಿಸಿ ಆಕರ್ಷಕವಾಗಿ ನಡೆಸಿದರು.
ತಾಲ್ಲೂಕು ಸಂಚಾಲಕಿ ಬಿ.ಎಸ್.ವನಜಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿ ಇಡೀ ದಿನದ ಚಟುವಟಿಕೆಯನ್ನು ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿ ಉಮಾವತಿ ಸ್ವಾಗತಿಸಿದರು, ದುದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶೋಭಾ ವಂದನಾರ್ಪಣೆ ಮಾಡಿದರು.
ಇದನ್ನು ನೋಡಿ : ಮೋದಿ ದೊಡ್ಡ ನಟ| ರಾಮ ಮಂದಿರ ಕಲ್ಲಿನಲ್ಲಿ ಕಟ್ಟಿದ್ದೀರಿ| ಸಂಗ್ರಹಿಸಿದ ಇಟ್ಟಿಗೆ ಏನಾಗಿದೆ ? ಪ್ರಕಾಶ್ ರೈ