ಹಾಸನ: ನೀವು ಏನಾದ್ರು ಅಂದುಕೊಳ್ಳಿ ನಾನು ನೇರವಾಗೇ ಹೇಳ್ತೀನಿ. ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದರೆ ಮತದಾರರು ಓಡಿ ಬಂದು ಓಟ್ ಹಾಕಲ್ಲ ಎಂದು ನೇರವಾಗಿಯೇ ಹೇಳಿದ ಶಿವಲಿಂಗೇಗೌಡ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಹೆಚ್.ಡಿ.ದೇವೆಗೌಡರವರ ನೇತೃತ್ವದದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಶಿವಲಿಂಗೇಗೌಡ ಜೆಡಿಎಸ್ ನಾಯಕರ ವಿರುದ್ದ ತಿರುಗಿ ಬಿದ್ದಿರುವ ಪ್ರಸಂಗ ನಡೆದಿದೆ.
ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರುಗಳಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿ ಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್ಗಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಡಾಕ್ಟರ್ ಸೂರಜ್ ಹೆಸರು ಹಾಗೂ ರೇವಣ್ಣ ಪತ್ನಿ ಭವಾನಿ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಸಭೆ ಬಗ್ಗೆ ಮಾಹಿತಿ ನೀಡಿಲ್ಲವೆಂದ ಶಿವಲಿಂಗೇಗೌಡ, ಹೆಚ್.ಡಿ. ದೇವೇಗೌಡ ಸಮ್ಮುಖದಲ್ಲಿ ಸಭೆ ಅಂದುಕೊಂಡಿದ್ದೆ. ಆಂತರಿಕ ಸಭೆಯೆಂದು ನಾನು ಒಬ್ಬನೇ ಬಂದಿದ್ದೇನೆ. ಸಭೆಯ ಬಗ್ಗೆ ನನಗೆ ಸರಿಯಾದ ಮಾಹಿತಿಯನ್ನೇ ಕೊಟ್ಟಿಲ್ಲ ಎಂದು ಶಿವಲಿಂಗೇ ಗೌಡ ಬೇಸರ ವ್ಯಕ್ತಪಡಿಸಿದರು. ಈ ರೀತಿಯ ಸಭೆ ಅಂದಿದ್ದರೆ ನಾನು ಬರುತ್ತೀರಲಿಲ್ಲ. ನನಗೆ ಮಾಹಿತಿ ಯಾಕೆ ಕೊಟ್ಟಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಬಿಡದಿ ಸಭೆ ವೇಳೆಯೂ ಹೀಗೆ ಮಾಡಿದೀರಿ. ಸರಿಯಾಗಿ ಮಾಹಿತಿ ನೀಡಲಿಲ್ಲ. ಇಲ್ಲಿ ನೋಡಿದರೆ ಎಲ್ಲಾ ಮುಖಂಡರು ಬಂದಿದ್ದಾರೆ. ನಮ್ಮ ಕಾರ್ಯಕರ್ತರು, ನಾಯಕರು ಮುಖ ಊದಿಸಿಕೊಂಡಿದ್ದಾರೆ. ನೀವು ಮಾಡಿದ ತಪ್ಪಿಗೆ ನೀವೇ ಅವರಿಗೆ ಬುದ್ದಿ ಹೇಳಿ ಎಂದ ಶಾಸಕ ಶಿವಲಿಂಗೇಗೌಡ. ದೇವೇಗೌಡರು ಅಭ್ಯರ್ಥಿಯನ್ನಾಗಿ ಭವಾನಿ ಅವರನ್ನಾದರೂ ಮಾಡಲಿ, ಇನ್ನಾರಿಗಾದರೂ ಕೊಡಲಿ. ಅವರು, ಇವರು ಎಂದು ನಾನು ಯಾರ ಹೆಸರನ್ನು ಹೇಳಲ್ಲ. ಅವರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕ್ತೀವಿ ಎಂದು ಶಿವಲಿಂಗೇಗೌಡ ಹೇಳಿದರು.