ಹಾಸನ: ದೇವೇಗೌಡ್ರೆ ಇನ್ನಾದ್ರೂ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ ಎಂದು ಲೇಖಕ, ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದ್ದಾರೆ.
ಹಾಸನ ಚಲೋ ಬೃಹತ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿದ್ದನಗೌಡ ಪಾಟೀಲ್, ಇಲ್ಲಿ ಕ್ರಿಮಿಲ್ಗಳು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಈ ದೇಶದಲ್ಲಿ ರಾಜಕಾರಣಿಗಳು ಆಗ್ತಾ ಇರುವ ಸಂದರ್ಭದಲ್ಲಿ ಜನಪರ ಸಂಘಟನೆಗಳು ವಾಚ್ಡಾಗ್ ರೀತಿ ಕೆಲಸ ಮಾಡಬೇಕಿದೆ.ಹಾಸನದಲ್ಲಿ ಹಲವು ದಶಕಗಳ ಹಿಂದೆ ನಡೆದ ನುಗ್ಗೆಹಳ್ಳಿ ನೀರಿನ ಹೋರಾಟದ ಸಂದರ್ಭದಲ್ಲಿ ಅಲ್ಲಿನ ಹಳ್ಳಿಯ ಮಹಿಳೆಯರ ಮೇಲೂ ಪೊಲೀಸ್ ದೌರ್ಜನ್ಯ ಎಸಗಿಸುವಂತಹ, ಜೈಲಿಗಟ್ಟುವ ಕೆಲಸ ಮಾಡಿದ್ದ ದೇವೇಗೌಡರಿಗೆ ಇಲ್ಲಿನ ಜನ ಅಂದೇ ಸರಿಯಾದ ಪಾಠ ಕಲಿಸಿದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸಿದ್ದನಗೌಡ ಪಾಟೀಲ್ ಒತ್ತಿ ಹೇಳಿದರು. ದೇವೇಗೌಡ್ರೆ
ವಿವಿಧ ಸಂಘಟನೆಗಳು ಸೇರಿ ಈ ಹೋರಾಟ ನಡೆಸುತ್ತಿರುವುದೇನು ಹೆಮ್ಮೆಯ ಸಂಗತಿಯಲ್ಲವಾದರೂ ಇಂತಹ ಪರಿಸ್ಥಿತಿಯನ್ನು ಈ ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಂದುಕೊಟ್ಟಿದೆ. ಜಾತಿಯ ಬಲದಿದಂದ, ಹಣದ ಬಲದಿಂದ ತಾನು ಇರುವ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಪರಿಸ್ಥಿತಿ ಇಂದುನೆನ್ನೆಯದಲ್ಲ. ಹಾಸನದಲ್ಲಿ ನಡೆದಿರುವ ಈ ದೌರ್ಜನ್ಯವನ್ನು ಸರ್ಕಾರದ ಹೆಗಲಿಗಷ್ಟೇ ಬಿಡದೇ, ಈ ರಾಜ್ಯದ ಜನಪರ ಚಳುವಳಿಗಳು ಜವಾಬ್ದಾರಿ ವಹಿಸಿ ಮಾಡುತ್ತಿರುವ ಹೋರಾಟ ಈ ರಾಜ್ಯದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದೇವೇಗೌಡರಿಗೆ ನಿಜವಾಗಿಯೂ ನೈತಿಕತೆ ಎನ್ನುವುದು ಇದ್ದಲ್ಲಿ, ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಎನ್ನುವ ಹೆಸರನ್ನು ಉಳಿಸಿಕೊಳ್ಳಬೇಕು. 4ರಂದು ಫಲಿತಾಂಶ ಬಂದ ನಂತರ ದೇವೇಗೌಡರ ಕುಟುಂಬದ ಧನಿಗಳು ಎನಾಗುತ್ತವೋ ಗೊತ್ತಿಲ್ಲವಾದರೂ ಈ ಕೃತ್ಯವನ್ನು ಖಂಡಿಸಿಯೇ ಖಂಡಿಸುತ್ತೇವೆ. ಅವರಿಗೆಲ್ಲ ತಕ್ಕ ಪಾಠವನ್ನು ಕಲಿಸುತ್ತೇವೆ.ಪ್ರಜ್ವಲನಂತಹ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಒಗ್ಗಟ್ಟಿನ ಹೋರಾಟ ಮಾಡುವುದಾಗಿ ಸಿದ್ದನಗೌಡ ಪಾಟೀಲ್ ಎಚ್ಚರಿಸಿದರು.
ಇದನ್ನು ಓದಿ : ದೇವೇಗೌಡ್ರೆ.., ಮಹಿಳಾ ಮೀಸಲಾತಿ ಘೋಷಿಸಿದಾಗ ಇದ್ದ ಮಹಿಳಾ ಕಾಳಜಿ ಈಗ್ಯಾಕ್ಕಿಲ್ಲ: ವರಲಕ್ಷ್ಮಿ
ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ, 4ನೇ ತಾರೀಖಿನ ನಂತರ ಗೆದ್ದಬಿಡಬಹುದು ಎಂಬ ಅಹಂಕಾವೇನಾದರೂ ಪ್ರಜ್ವಲ್ ರೇವಣ್ಣನಿಗೆ ಇದ್ದರೆ, ಆತನ ಅಟ್ಟಹಾಸಕ್ಕೆ ಕೊನೆಯಿದೆ. ಪ್ರಜ್ವಲ್ ಗೆದ್ದರೂ- ಸೋತರೂ ಹಾಸನದ ಜನತೆ ಈತನನ್ನು ಒಪ್ಪಿಕೊಳ್ಳಬಾರದು. ವಿಕೃತ ಮನಸ್ಥಿತಿಯ ಪ್ರಜ್ವಲ್ ರೇವಣ್ಣ ಹುಚ್ಚಾಸ್ಪತ್ರೆಯಲ್ಲಿರಬೇಕಿತ್ತು. ಇಂತಹ ವಿಕೃತನನ್ನು ಸಂಸದನನ್ನಾಗಿ ಹಾಸನದ ಜನತೆ ಮಾಡಬಾರದಿತ್ತು. ಆತನ ವಿಕೃತ ಹುಚ್ಚುತನದ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡುವುದಕ್ಕೆ ಕಾರಣವಾಗಿದೆ. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇವೇಗೌಡ್ರೆ
ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ ವಿಡೀಯೋ ಮಾಡಿ ಅವರ ಘನತೆಯನ್ನು ಉಲ್ಲಂಘಿಸಲಾಗಿದೆ.ದೇವರು ಕಳುಹಿಸಿದ್ದಾನೆ ಎನ್ನುವ ಮೋದಿ ಒಬ್ಬ ತಾಯಿದ್ರೋಹಿ. ರಕ್ತ ಸುರಿಸಿ ಜನ್ಮ ಕೊಡುವವಳನ್ನು ಪೆನ್ಡ್ರೈವ್ನಲ್ಲಿ ನೋಡಿದ್ದೇವೆ ಎಂದು ಹೇಳುವವರಿಗೆ ನಾಚಿಕೆಯಾಗಬೇಕು. ವಿಡೀ ವಿಡಿಯೋ ಆಡಿದ ಪ್ರಜ್ವಲ್ ಹಾಗೂ ಪೆನ್ಡ್ರೈವ್ ಹಂಚಿದವರು ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನಿಸಬೇಕಿದೆ. ಪ್ರಸಾರವಾಗುವುದಕ್ಕೆ ಬಿಡಬೇಡಿ ಎಂದು ಸಾಕಷ್ಟು ಮನವಿ ಮಾಡಿದರೂ ಕ್ರಮ ವಹಿಸಲಿಲ್ಲ. . ಹಾಸನದ ಡಿಸಿ, ಎಸ್ಪಿ ಅವರುಕೂಡ ಮಹಿಳೆಯಾಗಿದ್ದುಕೊಂಡು ತಪ್ಪು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವೇಗೌಡ್ರೆ
ಪ್ರಜ್ವಲ್ ರೇವಣ್ಣರಿಂದ ನೊಂದ ಮಹಿಳೆಯರನ್ನು ಸಂತ್ರಸ್ತೆಯರು ಎನ್ನಬಾರದು. ಆತನಿಂದ ತೊಂದರೆಗೆ ಒಳಗಾದವರು ಎನ್ನಬೇಕು. ಈ ತೊಂದರೆಗೆ ಒಳಗಾದ ಮಹಿಳೆಯರ ಜತೆ ನಾವಿದ್ದೇವೆ ಎಂದು ಹೇಳುವುದಕ್ಕೆ ನಾವಿಲ್ಲಿ ಸೇರಿದ್ದೇವೆ. ಈ ಸರ್ಕಾರ ಮಹಿಳೆಯರನ್ನು ರಕ್ಷಿಸಬೇಕು. ಸರ್ಕಾರ ಮುಂದಾಗಬೇಕೆಂದು ಕೆ.ನೀಲಾ ಕರೆ ನೀಡಿದರು.
ನೇಹಾ ಪ್ರಕರಣದಲ್ಲಿ ಕೋಮುಬಣ್ಣ ಬಳಿದ ಬಿಜೆಪಿಯವರು ಈ ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಮತ ನೀಡುವಂತೆ ಕೇಳಿದ್ದಾರೆ. ಈಗ ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾನಸಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರು ಒಳ್ಳೆದಯದನ್ನೂ ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ. ಹೆಚ್.ಡಿ.ರೇವಣ್ಣನ ಅಸ್ಪೃಶ್ಯತೆ ಒಪ್ಪಬಾರದು.ರೇವಣ್ಣ ನೀವು ನಡೆಸಿರುವ ಅಸ್ಪೃಶ್ಯತೆಯ ಕರಾಳ ಮುಖವನ್ನು ಬಿಚ್ಚಿಡುತ್ತೇವೆ. ದೇವೇಗೌಡ್ರೆ
ಬಿಜೆಪಿ ಒಂದು ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದೆ ಎಂದು ಸೂಚ್ಯವಾಗಿ ಹೇಳಿದ ಕೆ.ನೀಲಾ, ಈ ಪ್ರಕರಣದ ಮೂಲಕ ಹಾಸನದ ಗಂಡಸರು ಹೆಣ್ಣನ್ನು ಒಂಟಿಯಾಗಿ ಆಚೆ ಹೋಗದಂತೆ ಕಟ್ಟಿಹಾಕಲು ದಾರಿಮಾಡಿದ್ದೀರಿ. ಮನಸ್ಮೃತಿಯ ಅಣತಿಯನ್ನ ಮಹಿಳೆಯರನ್ನು ಕಟ್ಟಿಹಾಕುವ ಕೆಲಸಕ್ಕೆ ಬಿಜೆಪಿಗರೇ ಅವಕಾಶಮಾಡಿಕೊಟ್ಟಿದ್ದಾರೆ.
ಕುಮಾರಸ್ವಾಮಿ, ದೇವೇಗೌಡ ಹಾಗೂ ರೇವಣ್ಣ ನಿಮ್ಮ ಮನೆಯ ಮಗನ್ನನ್ನು ಬೆಂಬಲಿಸಿ ಆ ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನು ನಾಶ ಮಾಡಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಕಾಡುಪ್ರಾಣಿಗಳನ್ನು ಬೇಟೆಯಾಡುವವನು. ಅವನು ದೇವಲಾಪುರ ಅರಣ್ಯದಲ್ಲಿ ಪ್ರಾಣಿಗಳನ್ನು ಭೇಟೆಯಾಡುತ್ತಾನೆ. ಡಿಸಿ-ಎಸ್ಪಿಗೆ ತಾಕತ್ತಿದ್ದರೆ ಈ ಬಗ್ಗೆ ತನಿಖೆ ಮಾಡುವಂತೆ ಕೆ.ನೀಲಾ ಬಹಿರಂಗ ಸವಾಲು ಎಸೆದರು. ದೇವೇಗೌಡ್ರೆ
ಇದನ್ನು ನೋಡಿ : ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media