ಎಸ್‌ಐಟಿಗೆ ಸುಳಿವಾಗಬಲ್ಲದೆನ್ನುವ ದೇವೇಗೌಡರ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದ ಕರೆಯ ಊಹಾಪೋಹ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆಯುತ್ತಿದ್ದಂತೆ ಹೆಚ್.ಡಿ.ದೇವೇಗೌಡರು ಮೊಮ್ಮಗ ಪ್ರಜ್ವಲ್‌ ರೇವಣ್ಣನಿಗಾಗಿ ನೀಡಿರುವ ಎಚ್ಚರಿಕೆಗೂ ಸುಳಿವೊಂದು ಸುದ್ದಿಯ ರೂಪದಲ್ಲಿ ಓಡಾಡುತ್ತಾ ಟ್ರೋಲ್‌ ಆಗುತ್ತಿದೆ.

ಅದು ಇತ್ತೀಚೆಗೆ ಹೆಚ್.ಡಿ.ದೇವೇಗೌಡರ 92 ನೇ ಜನ್ಮದಿನಕ್ಕೆ ಮೊಮ್ಮಗ ಪ್ರಜ್ವಲ್‌ ರೇವಣ್ಣ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ ಎನ್ನುವುದು. ಹೀಗೊಂದು ಹರಿದಾಡಿದ ವಾಟ್ಸಪ್‌ ಬರಹ “ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಯಾನ್ಸ್‌ ಪೇಜ್‌, Siddaramaiah – The Right Choice for CM ಪೇಜ್‌ ನಲ್ಲಿ ಎದ್ದುಕಾಣುತ್ತಿದೆ.ಆ ವಿದೇಶದಿಂದ ಗೌಡರಿಗೆ ಬಂದ ಕರೆಯ ಹಿನ್ನಲೆಯ ಜಾಡು ಎಸ್‌ಐಟಿಗೆ ಸಿಕ್ಕಿರುವ ಮಾಹಿತಿ ಇದೆ ಎನ್ನುವುದು.

ಇದನ್ನು ಓದಿ : ಕಂಪೆನಿಯ ಬ್ಲಾಸ್ಟ್‌ನಲ್ಲಿ ಗಾಯಗೊಂಡಿದ್ದ ಕಾರ್ಮಿರಿಬ್ಬರು ಮೃತ

ಅದರ ಬರಹವನ್ನು ಓದುವುದಾದರೆ, ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಚಿನ್ನದ ವ್ಯಾಪಾರಿಯೂ ಆಗಿರುವ ಗೌಡರ ಕುಟುಂಬದ ಆಪ್ತ ವ್ಯಕ್ತಿಯೊಬ್ಬನ ಸಂಬಂಧಿಯ ವಿದೇಶಿ ಸಂಪರ್ಕ ಸಂಖ್ಯೆಯಿಂದ ಸಂಪರ್ಕಿಸಲಾದ ಆ ದೂರವಾಣಿಯಲ್ಲಿ ಅವರ ಜತೆ ಆಗುಂತಕ ವ್ಯಕ್ತಿ 1.52 ನಿಮಿಷಗಳ ಕಾಲ ಮಾತಾಡಿದ್ದಾರೆ ಎನ್ನುತ್ತಿವೆ ಎಸ್ ಐ ಟಿ ಮೂಲಗಳು. ಆ ಕರೆಯ ಮೂಲಕ ದೇವೇಗೌಡರೊಟ್ಟಿಗೆ ಮಾತಾಡಿದ್ದು ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ.

ಈ ಸುದ್ದಿ ಈಗ ಪರಾರಿಯಾಗಿರುವ ಪ್ರಜ್ವಲ್‌ ಪತ್ತೆಯ ತನಿಖೆ ವೇಗವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇದು ಊಹಾಪೋಹವೋ ಗೊತ್ತಿಲ್ಲ. ಸದ್ದಿಲ್ಲದೇ ಹರಿದಾಡಿದ ಸುದ್ದಿ ಇದೀಗ ಸುದ್ದಿಕೇಂದ್ರಕ್ಕೆ ಬಂದು ಸದ್ದುಮಾಡುತ್ತಿದೆ.

ಇದನ್ನು ನೋಡಿ : ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media

 

Donate Janashakthi Media

Leave a Reply

Your email address will not be published. Required fields are marked *