ಅನ್ನದಾತರನ್ನು ಬಂಧಿಸಿದ ಸಿದ್ದರಾಮಯ್ಯ ಸರ್ಕಾರ ; ನಾಳೆ ಸಿಎಂ ಮನೆಗೆ ಮುತ್ತಿಗೆ – ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ದೇವನಹಳ್ಳಿ : ಭೂ ಸ್ವಾಧೀನ ವಿರೋಧಿಸಿ ‘ದೇವನಹಳ್ಳಿ ಚಲೋ’ ಹಮ್ಮಿಕೊಂಡಿದ್ದ ರೈತರು, ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಅನ್ನದಾತ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸಿ 1180 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಸರ್ಕಾರಕ್ಕೆ ಅಂತಿಮ ಗಡುವು ನೀಡುವುದಕ್ಕಾಗಿ ದೇವನಹಳ್ಳಿ ಚಲೋ ನಡೆಸಿದ್ದರು. ನಾಳೆ ಮದ್ಯಾಹ್ನದೊಳಗೆ ಸರ್ಕಾರ ಬೂಸ್ವಾಧೀನ  ಪ್ರಕ್ರಿಯೆ ಕೈ ಬಿಡದೆ ಹೋದಲ್ಲಿ ತಾಲ್ಲೂಕ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೋರಾಟಗಾರರು ಎಚ್ಚರಿಸಿದ್ದರು.

ಇದನ್ನೂ ಓದಿ :ದೇವನಹಳ್ಳಿ ಚಲೋ| ನ್ಯಾಯ ಸಿಗುವವರೆಗೂ ಇಲ್ಲೇ ಇರುತ್ತೇವೆ: ಕಾರಳ್ಳಿ ಶ್ರೀನಿವಾಸ್ ಅನ್ನದಾತ

ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ ಬಂದಿಸಿದ್ದಾರೆ ಎಂದು ಸಂಘಟನೆಯ ನಾಯಕರು ಆರೋಪಿಸಿದ್ದಾರೆ. ಈ ವೇಳೆ ಹೋರಾಟಗಾರರಿಗೂ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿನಡೆಯಿತು.  

ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ರೈತರು, ಕಾರ್ಮಿಕರು, ಕೂಲಿಕಾರರು, ವಿದ್ಯಾರ್ಥಿಗಳು, ಮಹಿಳೆಯರು, ಯುವಜನರು, ಚಿತ್ರನಟರು ಸೇರಿದಂತೆ ಸಾಹಿತಿ ಚಿಂತಕರು ಬೆಂಬಲ ನೀಡಿದ್ದರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ,  ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಪ್ರಾಂತರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ರೈತ ನಾಯಕ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿಯ ನೂರ್‌ ಶ್ರೀದರ್‌, ಮುಖಂಡರಾದ ಪ್ರಭಾ ಬೆಳವಂಗಲ, ಗೌರಮ್ಮ, ದೇವಿ, ಟಿ. ಯಶವಂತ್‌, ಕುಮಾರ ಸಮತಳ, ಚುಕ್ಕಿ ನಂಜುಂಡಸ್ವಾಮಿ, ನವೀನ್‌ ಕುಮಾರ್‌ ಸೇರಿದಂತೆ ನೂರಾರು ಹೋರಾಟಗಾರರನ್ನು ಬಂಧಿಸಲಾಗಿದೆ.

ಬಲವಂತದ ಭೂ ಸ್ವಾಧೀನ ವಿರೋಧಿಸಿ ‘ದೇವನಹಳ್ಳಿ ಚಲೋ’ ಹಮ್ಮಿಕೊಂಡಿದ್ದ ರೈತರು, ಹೋರಾಟಗಾರರ ಬಂಧನ ಖಂಡಿಸಿ ನಾಳೆ (ಜೂ.26, ಗುರುವಾರ) ಸಿಎಂ ಮನೆಗೆ ಮುತ್ತಿಗೆ ಹಾಕಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ.

ಇದನ್ನೂ ಓದಿ : ಸಂಘರ್ಷದ ಹಂತ ತಲುಪಿದ ಭೂಸ್ವಾಧೀನ ವಿರೋಧಿ ಚಳವಳಿ | ಹೋರಾಟಗಾರರನ್ನು ಬಂಧಿಸಿದ ರಾಜ್ಯ ಸರ್ಕಾರ

 

Donate Janashakthi Media

Leave a Reply

Your email address will not be published. Required fields are marked *