ಅಧಿಕಾರ ಕಳೆದುಕೊಂಡ ಬಿಜೆಪಿಯಿಂದ ಹತಾಶ ಪ್ರತಿಕ್ರಿಯೆ – ಸಿಪಿಐ(ಎಂ)

ಉಡುಪಿ: ಉಡುಪಿಯ ಖಾಸಗಿ ಕಾಲೇಜ್ ನ ಹಾಸ್ಟೆಲ್ ಒಂದರಲ್ಲಿ ನಡೆದ ಘಟನೆಯನ್ನು ಕೇಂದ್ರೀಕರಿಸಿ, ಇಡೀ ರಾಜ್ಯ ಮತ್ತು ದೇಶದಾದ್ಯಂತ ಒಂದು ಸಮೂಹದವರ ಮೇಲೆ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯ ಕ್ರಮವು, ಅಧಿಕಾರ ಕಳೆದುಕೊಂಡ ಪಕ್ಷದ ಹತಾಶ ಪ್ರತಿಕ್ರಿಯೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ:ಚುನಾವಣಾ ಬಾಂಡ್‌ನ್ನು ಸ್ವೀಕರಿಸಿಲ್ಲ: ತಪ್ಪು ಮಾಹಿತಿಯನ್ನು ಸರಿಪಡಿಸಲು ಎಡಿಆರ್‌ಗೆ ಸಿಪಿಐ(ಎಂ) ಕೇಂದ್ರ ಕಚೇರಿ ಪತ್ರ

2024ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯೂ ಇದರ ಹಿಂದಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ ಸಿಪಿಐಎಂ ಹಾಸ್ಟೆಲ್ ನಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಂಡಿದೆ. ಈ ಕುರಿತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ವಿವರಣೆ ನೀಡಿದ್ದು ಅಗತ್ಯ ಮಾಹಿತಿಗಳಿದ್ದರೆ ನೀಡಲು ಸಾರ್ವಜನಿಕರಿಗೆ ವಿನಂತಿಸಿದ್ದಾರೆ ಎಂದು ಹೇಳಿದರು.

ಆದರೆ ಇಲಾಖೆಗೆ ಸಹಕರಿಸುವ ಬದಲಾಗಿ ಜನರ ನಡುವೆ ದ್ವೇಷದ ವಾತಾವರಣ ಬಿತ್ತುವ ಬಿಜೆಪಿಯ ಕ್ರಮವು ಜನ ವಿರೋಧಿಯಾಗಿದೆ. ಶಾಂತಿಪ್ರಿಯ ಉಡುಪಿಯ ಜನತೆ ದ್ವೇಷವನ್ನು ಹಬ್ಬುವವರನ್ನು ಹಿಮ್ಮೆಟ್ಟಿಸಬೇಕು ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *